Koramangala Accident: ಕೋರಮಂಗಲದಲ್ಲಿ ಮತ್ತೆ ಕಾರು ಅಪಘಾತ; ಅದೊಂದೇ ಕಾರಣದಿಂದ ಉಳಿಯಿತು ಪ್ರಾಣ!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಕಾರು ಅಪಘಾತ (car accident) ಸಂಭವಿಸಿದೆ. ಕೋರಮಂಗಲ(Koramangala)ದ ಸೆಂಟ್ ಜಾನ್ ಆಸ್ಪತ್ರೆ ಸಿಗ್ನಲ್ ಬಳಿ ಕುಡಿದ ಮತ್ತಿನಲ್ಲಿ (drink and drive ) ಕಾರು ಚಾಲಕ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾರೆ
ಗುದ್ದಿದ ರಭಸಕ್ಕೆ ಬಲೇನೋ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನ ಚಾರ್ಸಿ ಕಟ್ಟ್ ಆಗಿ ನೂರು ಮೀಟರ್ ದೂರ ಬಿದ್ದಿದೆ. ಅದೃಷ್ಟವಶಾತ್ ಕಾರಿನ ಚಾಲಕ ಪ್ರಾಣಾಪಯದಿಂದ ಪಾರಾಗಿದ್ದಾರೆ.
2/ 5
ಅಪಘಾತದ ವೇಳೆ ಕಾರಿನಲ್ಲಿದ್ದ ಎರಡು ಕಡೆ ಏರ್ ಬ್ಯಾಗ್ ಓಪನ್ ಆಗಿವೆ. ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಪ್ರಾಣಪಾಯದಿಂದ ಚಾಲಕ ಬಚಾವ್ ಆಗಿದ್ದಾರೆ.
3/ 5
ಪರಿಶೀಲನೆ ವೇಳೆ ಕುಡಿದು ಕಾರು ಚಲಾಯಿಸಿರೋದು ಪತ್ತೆಯಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿ ಚಾಲಕನನ್ನ ಮಡಿವಾಳ ಸಂಚಾರಿ ಪೊಲೀಸರು ವಶ ಪಡೆದುಕೊಂಡಿದ್ದಾರೆ. ಅತಿವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
4/ 5
ನೈಟ್ ಜಾಲಿ ರೇಡ್ ನಲ್ಲಿ ಕುಡಿದು ರ್ಯಾಷ್ ಡ್ರೈವಿಂಗ್ ಮಾಡಿದ್ದಾರೆ. ಅಪಘಾತವಾದ ವೇಳೆ ಕಾರಿನ ಹಿಂಬದಿಯಲ್ಲಿ ಎರಡು ಬಿಯರ್ ಬಾಟಲಿಗಳು ಪತ್ತೆಯಾಗಿವೆ. ಕಾರಿನಲ್ಲಿದ್ದ ಇಬ್ಬರು ಮದ್ಯಪಾನ ಮಾಡುತ್ತಾ ಕಾರು ಚಲಾಯಿಸಿದ್ದಾರೆ.
5/ 5
ಇಬ್ಬರಲ್ಲಿ ಒಬ್ಬನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರು ಯುವಕರು ಯಲಹಂಕದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿದೆ.