ಕೆ.ಆರ್.ಪುರ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡು ಓಡುವಾಗ ದುರಂತ ಅಂತ್ಯ ಕಂಡ ಆರೋಪಿ ಶಕ್ತಿವೇಲು. ಈತನನ್ನು ಪತ್ನಿಯ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಗಂಡನ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ದೂರು ದಾಖಲಾದ ಹಿನ್ನೆಲೆಯಲ್ಲಿ ಶಕ್ತಿವೇಲುನನ್ನು ಅರೆಸ್ಟ್ ಮಾಡಿ ಸ್ಟೇಷನ್ ನಲ್ಲಿಟ್ಟುಕೊಂಡಿದ್ದರು.