ನಾಳೆ ಬೃಹತ್ ರೈತ ಸಮಾವೇಶದಲ್ಲಿ ಭಾಗಿಯಾಗುವ ಹಿನ್ನಲೆ ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಎಪಿ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಬಂದಿಳಿದಿದ್ದಾರೆ. ಸಮಾವೇಶದ ಬಳಿಕ ಎಎಪಿ ಕಾರ್ಯಕರ್ತರೊಂದಿಗೆ ಕೂಡ ಅವರು ಸಭೆ ನಡೆಸುವ ಸಾಧ್ಯತೆ ಇದೆ.
ದೆಹಲಿಯಲ್ಲಿ ಯಶಸ್ವಿ ಆಡಳಿತ ನಡೆಸಿ ಪಂಜಾಬ್ ನಲ್ಲಿ ಅಧಿಕಾರ ಸ್ಥಾಪಿಸಿರುವ ಎಎಪಿ ಇದೀಗ ಕರ್ನಾಟಕದ ಮೇಲೆ ಕಣ್ಣು ನೆಟ್ಟಿದೆ. ರಾಜ್ಯದಲ್ಲಿ ಮುಂಬರುವ ವರ್ಷದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನಲೆ ಎಎಪಿ ಸಿದ್ಧತೆ ನಡೆಸಿದೆ. ಈ ಸಲುವಾಗಿ ನಾಳೆ ರಾಜ್ಯಕ್ಕೆ ಎಎಪಿ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಗಮಿಸಲಿದ್ದಾರೆ.
2/ 8
ಬೃಹತ್ ರೈತ ಸಮಾವೇಶ ಹಿನ್ನಲೆ ನಾಳೆ ರಾಜ್ಯಕ್ಕೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಆಗಮಿಸುತ್ತಿದ್ದಾರೆ. ನಾಳೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ರೈತ ಸಮಾವೇಶದಲ್ಲಿ ಅವರು ಭಾಗಿಯಾಗಲಿದ್ದಾರೆ.
3/ 8
ಕಳೆದ ಬಾರಿ ಚುನಾವಣೆಯಲ್ಲೇ ರಾಜ್ಯದಲ್ಲಿ ಎಎಪಿ ಅದೃಷ್ಟ ಪರೀಕ್ಷೆ ನಡೆಸಿದ್ದರೂ, ಖಾತೆ ತೆರೆಯುವಲ್ಲಿ ವಿಫಲವಾಗಿತ್ತು. ಆದರೆ, ಈ ಬಾರಿ ಪಂಜಾಬ್ ಗೆಲುವು ಎಎಪಿಗೆ ಬಲ ತುಂಬಿದೆ
4/ 8
ಈ ಹಿನ್ನೆಲೆ ಕರ್ನಾಟಕದಲ್ಲೂ ಎಎಪಿ ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆಗೆ ಸಿದ್ದತೆ ನಡೆಸಿದೆ. ಅರವಿಂದ್ ಕೇಜ್ರಿವಾಲ್ ಆಗಮನ ಹಿನ್ನಲೆ ಅವರ ಸ್ವಾಗತಕ್ಕೆ ಭರ್ಜರಿ ಸಿದ್ದತೆಯನ್ನು ರಾಜ್ಯ ಎಎಪಿ ನಡೆಸಿದೆ.
5/ 8
ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಾಳೆ ಈ ಬೃಹತ್ ರೈತ ಸಮಾವೇಶ ಆಯೋಜಿಸಿದ್ದು, ಈ ಸಮಾವೇಶದಲ್ಲಿ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಅನೇಕ ನಾಯಕರು ಎಎಪಿ ಸೇರುವ ನಿರೀಕ್ಷೆದ ಇದೆ.
6/ 8
ಇನ್ನು ಇತ್ತೀಚೆಗಷ್ಟೇ ಎಎಪಿ ಸೇರಿದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಕೂಡ ಎಎಪಿ ನಾಯಕರೊಂದಿಗೆ ವೇದಿಕೆ ಹಂಚಿಕೊಳ್ಳಲಿದೆ.
7/ 8
ಇನ್ನು ಈ ಸಮಾವೇಶದಲ್ಲಿ ಸುಮಾರು 50 ಸಾವಿರ ರೈತರು ಕೂಡ ಭಾಗಿಯಾಗುವ ನಿರೀಕ್ಷೆ ಇದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ
8/ 8
ಪಂಜಾಬ್ನಂತೆ ದಕ್ಷಿಣ ಭಾರತದಲ್ಲಿ ಕರ್ನಾಟಕದ ಮೂಲಕ ಎಎಪಿ ಖಾತೆ ತೆರೆಯುವ ಹುಮ್ಮಸ್ಸು ನಡೆಸಿದ್ದು, ಈಗಾಗಲೇ ನೋಂದಾಣಿ ಅಭಿಯಾನಕ್ಕೆ ಚಾಲನೆ ನೀಡಿದೆ.