ಮನೆಯಲ್ಲಿ ತಂದೆ-ತಾಯಿ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಒಂದೆರಡು ಮಾತು ಬೈಯುತ್ತಾರೆ. ಆದ್ರೆ ಇಂದಿನ ಯುಗದಲ್ಲಿ ಈ ಮಾತುಗಳಿಂದ ನೊಂದು ಆತ್ಮಹತ್ಯೆಗೆ ಮುಂದಾಗುತ್ತಾರೆ. ಅಂತಹವುದೇ ಒಂದು ಪ್ರಕರಣ ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ನಡೆದಿದೆ. (ಪ್ರಾತಿನಿಧಿಕ ಚಿತ್ರ)
2/ 5
ಹೌದು, 23 ವರ್ಷದ ಯುವಕ ಇಂತಹ ದುಡುಕಿನ ನಿರ್ಧಾರ ತೆಗೆದುಕೊಂಡು ಬಾರದ ಲೋಕಕ್ಕೆ ಹೋಗಿದ್ದಾನೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. (ಸಾಂದರ್ಭಿಕ ಚಿತ್ರ)
3/ 5
ಸೈಯದ್ ಸಾಹಿಲ್ ಆತ್ಮಹತ್ಯೆಗೆ ಶರಣಾದ ಯುವಕ. ಮೃತ ಸೈಯದ್ ಸಾಹಿಲ್ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇರುತ್ತಿದ್ದನು. ಇದರಿಂದ ಬೇಸತ್ತ ತಂದೆ ಒಂದೆರಡು ಮಾತು ಬೈದಿದ್ದರು. (ಸಾಂದರ್ಭಿಕ ಚಿತ್ರ)
4/ 5
ಟಿವಿ ನೋಡಿದ್ದಕ್ಕೆ ತಂದೆ ಬೈದರು ಅಂತಾ ನೊಂದ ಸೈಯದ್ ಸಾಹಿಲ್, ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
5/ 5
ಭಾನುವಾರ ಜೆಜೆ ನಗರದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಸೈಯದ್ ಕೆಲಸಕ್ಕೆ ಹೋಗದೇ ಟಿವಿ ನೋಡುತ್ತಾ ಸಮಯ ಕಳೆಯುತ್ತಿದ್ದನು.