Bengaluru: ಟ್ರಾಫಿಕ್​​ ಕೇಸ್​​ ಕ್ಲಿಯರ್​ ಮಾಡೋಕೆ ಪೊಲೀಸರ ಮಾಸ್ಟರ್​ ಪ್ಲ್ಯಾನ್!

ಬೆಂಗಳೂರಿಗೆ ಎಂಟ್ರಿ ಕೊಡುವ ವಾಹನಗಳ ಮೇಲೆ ಖಾಕಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಟೋಲ್​ಗೇಟ್​​ನಲೇ ಎಎನ್​​ಆರ್​ಪಿ ಕ್ಯಾಮೆರಾ ಅಳವಡಿಕೆ ಪ್ಲ್ಯಾನ್​​ ಮಾಡಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 18

    Bengaluru: ಟ್ರಾಫಿಕ್​​ ಕೇಸ್​​ ಕ್ಲಿಯರ್​ ಮಾಡೋಕೆ ಪೊಲೀಸರ ಮಾಸ್ಟರ್​ ಪ್ಲ್ಯಾನ್!

    ಬೆಂಗಳೂರು: ಟ್ರಾಫಿಕ್​​ ರೂಲ್ಸ್​ಗಳನ್ನು ಮಾಡಿ, ನಗರದ ಜನರನ್ನು ನಿಯಂತ್ರಣ ಮಾಡಲು ಪೊಲೀಸರು ಸಖತ್​ ಪ್ಲ್ಯಾನ್​ ಮಾಡಿದ್ದರು. ಎಲ್ಲಾ ಸಿಗ್ನಲ್​ಗಳಲ್ಲೂ ಸಿಸಿಟಿವಿ ಹಾಕಿದ್ದರು. ಇದೀಗ ಬೆಂಗಳೂರು ಹೊರತು ಪಡಿಸಿ ಬೇರೆ ಜಿಲ್ಲೆ‌ ವಾಹನಗಳ ಮೇಲೆ ನಿಗಾ ಇಡೋದಕ್ಕೆ ಶುರು ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Bengaluru: ಟ್ರಾಫಿಕ್​​ ಕೇಸ್​​ ಕ್ಲಿಯರ್​ ಮಾಡೋಕೆ ಪೊಲೀಸರ ಮಾಸ್ಟರ್​ ಪ್ಲ್ಯಾನ್!

    ಬೆಂಗಳೂರಿನಲ್ಲಿ ಸವಾರರೇ ಎಚ್ಚರ:
    ಸಿಲಿಕಾನ್‌ ಸಿಟಿಯಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್​ ಮಾಡುವವರ ಮೇಲೆ ಕೇಸ್​ ಹಾಕುವುದು ಕಾಮನ್​. ಆ ಕೇಸ್​ನಲ್ಲಿ ಫೈನ್​ ಕಲೆಕ್ಟ್​​ ಮಾಡೋಕೆ 50 ಪರ್ಸೆಂಟ್​ ಡಿಸ್ಕೌಂಟ್​ ಕೊಡಲಾಗಿತ್ತು. ಆದರೂ ಬರೋಬ್ಬರಿ 2 ಕೋಟಿ ಕೇಸ್​​ಗಳು ಇನ್ನೂ ಬಾಕಿ ಇವೆ. 52 ಲಕ್ಷ ಕೇಸ್​ ಕ್ಲಿಯರ್​ ಆಗಿವೆ. ಆದರೆ ಉಳಿದ ಕೇಸ್​ ಎಲ್ಲಿದು ಅನ್ನೋದರ ಬಗ್ಗೆ ಬೆಂಗಳೂರು ಸಂಚಾರಿ ಪೊಲೀಸರು ಮಾಸ್ಟರ್​ ಪ್ಲಾನ್​ ಮಾಡಿದ್ದಾರೆ.

    MORE
    GALLERIES

  • 38

    Bengaluru: ಟ್ರಾಫಿಕ್​​ ಕೇಸ್​​ ಕ್ಲಿಯರ್​ ಮಾಡೋಕೆ ಪೊಲೀಸರ ಮಾಸ್ಟರ್​ ಪ್ಲ್ಯಾನ್!

    ಬೆಂಗಳೂರಿನಲ್ಲಿ ಸಂಚರಿಸುವ ಹೊರ ಜಿಲ್ಲೆಯ ವಾಹನಗಳ ಮೇಲೆ ಟ್ರಾಫಿಕ್​ ಪೊಲೀಸರು ಕಣ್ಣಿಟ್ಟಿದ್ದಾರೆ. ಉಳಿಕೆ 2 ಕೋಟಿ ಕೇಸ್​ಗಳ ಪೈಕಿ ಹೊರ ಜಿಲ್ಲೆಯಲ್ಲಿ ನೋಂದಣಿ ಆಗಿರುವ ವಾಹನಗಳದ್ದೇ ಸಿಂಹಪಾಲು. ಇದೇ ಕಾರಣಕ್ಕೆ ಡಿಸ್ಕೌಂಟ್ ನೀಡಿದ ವೇಳೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ವಾಹನ ಸವಾರರು ದಂಡ ಪಾವತಿ ಮಾಡಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Bengaluru: ಟ್ರಾಫಿಕ್​​ ಕೇಸ್​​ ಕ್ಲಿಯರ್​ ಮಾಡೋಕೆ ಪೊಲೀಸರ ಮಾಸ್ಟರ್​ ಪ್ಲ್ಯಾನ್!

    ಹೀಗಾಗಿ ಬೆಂಗಳೂರಿಗೆ ಎಂಟ್ರಿ ಕೊಡುವ ವಾಹನಗಳ ಮೇಲೆ ಖಾಕಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಟೋಲ್​ಗೇಟ್​​ನಲೇ ಎಎನ್​​ಆರ್​ಪಿ ಕ್ಯಾಮೆರಾ ಅಳವಡಿಕೆ ಪ್ಲ್ಯಾನ್​​ ಮಾಡಿದ್ದಾರೆ. ದಂಡ ಬಾಕಿಯಿರುವ ವಾಹನಗಳನ್ನು ಪತ್ತೆ ಮಾಡಿ ಪೊಲೀಸರಿಗೆ ಮಾಹಿತಿ ವರ್ಗಾಯಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Bengaluru: ಟ್ರಾಫಿಕ್​​ ಕೇಸ್​​ ಕ್ಲಿಯರ್​ ಮಾಡೋಕೆ ಪೊಲೀಸರ ಮಾಸ್ಟರ್​ ಪ್ಲ್ಯಾನ್!

    ANPR ಕ್ಯಾಮೆರಾ ವಿಶೇಷತೆ? ಎಎನ್‌ಪಿಆರ್‌ ಕ್ಯಾಮೆರಾ ಹೇಗೆ ಕೆಲಸ ಮಾಡುತ್ತದೆ ಅನ್ನೋದನ್ನು ನೋಡೋದಾದರೆ, ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿಯಿರುವ ವಾಹನಗಳನ್ನು ಎಎನ್‌ಪಿಆರ್‌ ಕ್ಯಾಮೆರಾ ಪತ್ತೆ ಮಾಡುತ್ತೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Bengaluru: ಟ್ರಾಫಿಕ್​​ ಕೇಸ್​​ ಕ್ಲಿಯರ್​ ಮಾಡೋಕೆ ಪೊಲೀಸರ ಮಾಸ್ಟರ್​ ಪ್ಲ್ಯಾನ್!

    ಕ್ಯಾಮೆರಾ ಅಳವಡಿಕೆಯಾಗಿರುವ ಕಡೆ ವಾಹನ ಹಾದು ಹೋದಾಗ ಕ್ಯಾಮೆರಾ ಸ್ವಯಂ ಚಾಲಿತವಾಗಿ ಅಲರ್ಟ್​​ ಆಗುತ್ತೆ. ಸಾಫ್ಟ್‌ವೇರ್‌ ಬಳಸಿಕೊಂಡು ವಾಹನ ಹಾಗೂ ವಾಹನ ಸವಾರನ ಸಂಪೂರ್ಣ ವಿವರವನ್ನು ತಕ್ಷಣವೇ ಹತ್ತಿರದಲ್ಲಿರುವ ಪೊಲೀಸರಿಗೆ ವರ್ಗಾಯಿಸುತ್ತೆ. ಆಗ ಪೊಲೀಸರು ಕೂಡಲೇ ಆ ವಾಹನ ಸವಾರನನ್ನು ತಡೆದು ದಂಡ ವಸೂಲಿ ಮಾಡುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Bengaluru: ಟ್ರಾಫಿಕ್​​ ಕೇಸ್​​ ಕ್ಲಿಯರ್​ ಮಾಡೋಕೆ ಪೊಲೀಸರ ಮಾಸ್ಟರ್​ ಪ್ಲ್ಯಾನ್!

    ಬಾಕಿ ಕೇಸ್​​ ಕ್ಲಿಯರ್ ಮಾಡಲು ಈಗಾಗಲೇ ಇನ್ಶೂರೆನ್ಸ್‌ ಕಂಪನಿ ಜೊತೆಗೂ ಸಂಚಾರ ವಿಭಾಗದ ಪೊಲೀಸರು ಸಭೆ ನಡೆಸಿ ಚರ್ಚಿಸಿದ್ದಾರೆ. ಅದರಂತೆ ಪ್ರತಿವರ್ಷ ವಿಮೆ ಮಾಡಿಸಲು ಹೋದಾಗ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಂಡ ವಸೂಲಿ ಮಾಡಲು ಚಿಂತನೆ ನಡೆಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Bengaluru: ಟ್ರಾಫಿಕ್​​ ಕೇಸ್​​ ಕ್ಲಿಯರ್​ ಮಾಡೋಕೆ ಪೊಲೀಸರ ಮಾಸ್ಟರ್​ ಪ್ಲ್ಯಾನ್!

    ದಂಡ ಕ್ಲಿಯರ್​ ಆಗಿರುವ ಎನ್‌ಒಸಿ ಪಡೆಯದ ವಾಹನಗಳಿಗೆ ಇನ್ಶೂರೆನ್ಸ್‌ ತಡೆಯಲು ಪ್ಲ್ಯಾನ್​ ಆಗಿದೆ. ಆದರೆ ಇನ್ಶೂರೆನ್ಸ್​ ಆಗದಿದ್ದರೆ ಇನ್ನೂ ಕಷ್ಟ ಆಗಲಿದೆ ಅನ್ನೋದು ಪೊಲೀಸರ ಗಮನದಲ್ಲಿ ಇರಬೇಕು ಅಷ್ಟೇ. (ವರದಿ: ರಂಜನ್ ಶಿರ್ಲಾಲ್, ನ್ಯೂಸ್​ 18, ಕನ್ನಡ) (ಸಾಂದರ್ಭಿಕ ಚಿತ್ರ)

    MORE
    GALLERIES