ಬೆಂಗಳೂರಿನಲ್ಲಿ ಹಿಂದಿನಿಂದಲೂ ಬೀದಿನಾಯಿಗಳ ಕಾಟ ಅಷ್ಟಿಷ್ಟಲ್ಲ, ಬೀದಿನಾಯಿಗಳನ್ನು ನಿಯಂತ್ರಿಸಲು ಬಿಬಿಎಂಪಿ ಸಂತಾನ ಹರಣ ಚಿಕಿತ್ಸೆಯನ್ನು ನೀಡುತ್ತಲೆ ಬಂದಿದೆ. ಆದರೆ ಇನ್ನೂ ಬೀದಿನಾಯಿಗಳ ಕಾಟ ಕಡಿಮೆಯಾಗಿಲ್ಲ
2/ 8
ಬೆಂಗಳೂರು ಒಂದರಲ್ಲೇ 6.5 ಲಕ್ಷ ಬೀದಿನಾಯಿಗಳಿವೆ ಎಂದು ವರದಿಯಾಗಿದೆ.
3/ 8
ಬೀದಿನಾಯಿಗಳನ್ನು ನಿಯಂತ್ರಿಸಲು ದೃಷ್ಟಿಯಿಂದ 3 ಲಕ್ಷ ಬೀದಿನಾಯಿಗಳಿಗೆ ಸಂತಾನ ಹರಣ ಮಾಡಲಾಗಿದೆ. ಜೊತೆಗೆ ರೇಬಿಸ್ ಇಂಜೆಕ್ಷನ್ ಚುಚ್ಚಲಾಗಿದೆ.
4/ 8
ಬಿಬಿಎಂಪಿ 1 ನಾಯಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಲು 1,200 ರೂ ಖರ್ಚು ಮಾಡುತ್ತದೆಯಂತೆ.
5/ 8
2021-22ರಲ್ಲಿ 52,896 ಬೀದಿನಾಯಿಗಳಿಗೆ ಬಿಬಿಎಂಪಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿದೆ ಎನ್ನಲಾಗಿದೆ.
6/ 8
ಒಂದು ವರ್ಷಕ್ಕೆ ಸುಮಾರು 50 ಸಾವಿರ ಬೀದಿನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡುತ್ತದೆ ಬಿಬಿಎಂಪಿ.
7/ 8
ಅಂದರೆ 2021-22 ವರ್ಷವೊಂದರಲ್ಲೇ ಬಿಬಿಎಂಪಿ ಬೀದಿನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ 6 ಕೋಟಿಗೂ ಹೆಚ್ಚು ಹಣ ವಿನಿಯೋಗಿಸಿದೆ.
8/ 8
ಅಲ್ಲದೇ ಬೆಂಗಳೂರು ಒಂದರಲ್ಲೇ 2016ರಿಂದ 2022ರವರೆಗೆ ಸುಮಾರು 1 ಲಕ್ಷ ನಾಯಿ ಕಡಿತ ಕೇಸ್ಗಳು ದಾಖಲಾಗಿವೆಯಂತೆ. ಹೀಗಾಗಿ ಬೀದಿನಾಯಿಗಳ ಹಾವಳಿ ತಡೆಯಲು ಬಿಬಿಎಂಪಿ ಇನ್ನೂ ಶ್ರಮಿಸುತ್ತಿದೆ.