ಟ್ಯಾಂಕರ್ ಸಿಬ್ಬಂದಿಯೇ ಈ ವಿಧಾನ ಬಳಸಿ 1 ಟ್ಯಾಂಕ್ನಲ್ಲಿ ಸುಮಾರು 50 ಲೀಟರ್ ಪೆಟ್ರೋಲ್ ಕಳ್ಳತನ ಮಾಡುತ್ತಿದ್ದರು. ಅನುಮಾನಗೊಂಡ ಪೆಟ್ರೋಲ್ ಬಂಕ್ ಮಾಲೀಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. (ಸಾಂದರ್ಭಿಕ ಚಿತ್ರ)
2/ 4
ಪೊಲೀಸರು ಪೆಟ್ರೋಲ್ ಟ್ಯಾಂಕರ್ ಗಳನ್ನು ಪರಿಶೀಲಿಸಿದಾಗ ಬೇಬಿ ಟ್ಯಾಂಗ್ ದಂಧೆ ಬಯಲಾಗಿದೆ. ನಿತ್ಯ 1,200 ಟ್ಯಾಂಕರ್ ಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ಈ ಕಳ್ಳ ದಂಧೆಯಿಂದ ಶೇ.40ರಷ್ಟು ಪೆಟ್ರೋಲ್ ಕಳ್ಳತನವಾಗಿದೆ ಎನ್ನಲಾಗುತ್ತಿದೆ.
3/ 4
ಟ್ಯಾಕರ್ ಚಾಲಕ, ಕ್ಲೀನರ್ ವಿರುದ್ಧ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಲಾರಿ ಚಾಲಕ ಪ್ರವೀಣ್ ಕುಮಾರ್, ಲಾರಿ ಕ್ಲೀನರ್ ಶಿವು, ಟ್ರಾನ್ಸಪೋರ್ಟ್ ಶಿವರಾಜು, ವೆಲ್ಡರ್ಸ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ. (ಸಾಂದರ್ಭಿಕ ಚಿತ್ರ)
4/ 4
ಟ್ಯಾಂಕರ್ ಗಳಿಲ್ಲದ ಬಂಕ್ಗಳಿಗೆ ಇಂಧನ ಪೂರೈಸುವ ವೇಳೆ ಈ ರೀತಿ ಕಳ್ಳತನ ಮಾಡಲಾಗುತ್ತಿತ್ತು. ದಂಧೆಯ ಕಿಂಗ್ ಪಿನ್ ಗಳಿಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)