Crime News: ಮದುವೆ ನಂತರವೂ ಸಂಬಂಧಿಕನೊಂದಿಗೆ ಲವ್ವಿಡವ್ವಿ.. ಓಡಿ ಹೋದವರಿಗೆ 20 ದಿನದಲ್ಲೇ ಏನಾಯ್ತು?
ಬೆಂಗಳೂರು ಗ್ರಾಮಾಂತರ: ಈ ಪ್ರಕರಣದಲ್ಲಿ ಪ್ರೀತಿ..ಮೋಹ..ಕಾಮ ಅನ್ನೋದು ಮದುವೆಯ ಮೂರು ಗಂಟನ್ನು ಮೀರಿದೆ. ಮದುವೆಯಾದ ಬಳಿಕವೂ ಸಂಬಂಧಿಕನೇ ಆದ ಯುವಕನ ಮೇಲೆ ಪ್ರೀತಿಯನ್ನು ಹತ್ತಿಕ್ಕಿಕೊಳ್ಳಲಾಗದೆ ವಿವಾಹಿತೆ ತಪ್ಪು ದಾರಿ ಹಿಡಿದಿದ್ದಳು. ಅದು ಅವಳನ್ನು ಕೆಟ್ಟ ಅಂತ್ಯಕ್ಕೆ ತಲುಪಿಸಿದೆ.
ಈ ಫೋಟೋದಲ್ಲಿರುವವರು ರಾಯಚೂರು ಮೂಲದ ಬಸವರಾಜ್ ( 28 ) ಜ್ಯೋತಿ (26). ಇಬ್ಬರೂ ಸಂಬಂಧಿಕರೇ. ಮೊದಲಿಂದಲೇ ಪ್ರೇಮವಿತ್ತೋ, ಮದುವೆಯ ಬಳಿಕ ಮೋಹಕ್ಕೆ ಬಿದ್ದರೋ ಗೊತ್ತಿಲ್ಲ. ವಿವಾಹಿತೆ ಜ್ಯೋತಿ ಗಂಡನನ್ನು ಬಿಟ್ಟು, ಪ್ರೇಮಿ ಬಸವರಾಜನೊಂದಿಗೆ ಬೆಂಗಳೂರಿಗೆ ಬಂದು ಬಿಟ್ಟಿದ್ದಳು
2/ 4
ಹೊಸದಾಗಿ ಇಬ್ಬರು ಜೀವನ ಕಟ್ಟಿಕೊಳ್ಳುವ ಆಸೆಯಲ್ಲಿದ್ದರು ಅನಿಸುತ್ತೆ. ಅದಕ್ಕಾಗಿಯೇ 20 ದಿನಗಳಿಂದಷ್ಟೆ ತಾವು ಗಂಡ, ಹೆಂಡತಿ ಅಂತ ಹೇಳಿಕೊಂಡು ದೇವನಹಳ್ಳಿ ಪಟ್ಟಣದ ಶಾಂತಿನಗರದಲ್ಲಿ ಮನೆ ಬಾಡಿಗೆಗೆ ಪಡೆದುಕೊಂಡಿದ್ದರು. (ಸಾಂದರ್ಭಿಕ ಚಿತ್ರ)
3/ 4
ಹೊಸದಾಗಿ ಬದುಕುವ ಕನಸ್ಸು ಕೇವಲ 20 ದಿನಗಳನ್ನೂ ಪೂರೈಸಲಿಲ್ಲ. ಅದೇನಾಯಿತೋ ಏನೋ ಇಬ್ಬರು ಮನೆಯಲ್ಲಿ ಭಾನುವಾರವೇ ನೇಣಿಗೆ ಶರಣಾಗಿ ಬಿಟ್ಟಿದ್ದಾರೆ. ಮನೆಯಿಂದ ದುರ್ವಾಸನೆ ಬರುತ್ತಿದ್ದದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
4/ 4
ಸ್ಥಳಕ್ಕೆ ಬಂದ ದೇವನಹಳ್ಳಿ ಪೊಲೀಸರಿಂದ ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.