Man Killed Girlfriend: ಪ್ರೇಯಸಿಗೆ ಬೇರೊಬ್ಬನೊಂದಿಗೆ ಮದುವೆ ನಿಶ್ಚಯ; ರೊಚ್ಚಿಗೆದ್ದು ಹೆಣ ಕೆಡವಿದ ಪ್ರಿಯಕರ!
ಬೆಂಗಳೂರು ಗ್ರಾಮಾಂತರ(bangalore rural): ಅವರಿಬ್ಬರದ್ದು ವರ್ಷಗಳ ಪ್ರೀತಿ. ಪ್ರೇಮಿಗಳ(lovers) ಇಬ್ಬರ ಮಧ್ಯೆ ಅದೇನಾಯಿತೋ ಗೊತ್ತಿಲ್ಲ. ಪ್ರಿಯತಮೆಗೆ ಇತ್ತೀಚೆಗೆ ಬೇರೊಬ್ಬ ಯುವಕನೊಂದಿಗೆ ಮದುವೆ (marriage) ನಿಶ್ಚಯವಾಗಿತ್ತು. ಇದರಿಂದ ಕನಲಿ ಹೋಗಿದ್ದ ಪ್ರಿಯಕರ ಮಾಡಿದ್ದು ಮಾತ್ರ ಅನಾಹುತ.
ಇಂದು ಬೆಳ್ಳಂಬೆಳಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರೇಮಿಗಳ ಹೆಣ ಬಿದ್ದಿದೆ. ಜೊತೆಯಾಗಿ ಬಾಳಬೇಕಿದ್ದವರಲ್ಲಿ ಒಬ್ಬರು ಕೊಲೆಯಾದರೆ, ಮತ್ತೊಬ್ಬರು ಕೊಲೆಗಾರನಾಗಿದ್ದಾರೆ. ದುರಂತ ಪ್ರೇಮ ಕಥೆ ಇಬ್ಬರ ಸಾವಿನಲ್ಲಿ ಅಂತ್ಯವಾಗಿದೆ.
2/ 5
ಪ್ರೇಯಸಿಯನ್ನ ಹತ್ಯೆಗೈದು ಪ್ರಿಯಕರ ಆತ್ಮಹತ್ಯೆಗೆ ಶರಣಾನಾಗಿದ್ದಾರೆ. ಹೊಸಕೋಟೆ ತಾಲ್ಲೂಕಿನ ಲಿಂಗಧೀರಮಲ್ಲಸಂದ್ರ ಗ್ರಾಮದಲ್ಲಿ ಘಟನೆ ನಡೆದಿದೆ. ಅಂಕೋಲಾ ಮೂಲದ ಯುವತಿ ಉಷಾಗೌಡ(24) ಹತ್ಯೆಯಾದ ಯುವತಿ. ಪ್ರೇಯಸಿಯ ಹತ್ಯೆ ಬಳಿಕ ಪ್ರಿಯಕರ ಗೋಪಾಲಕೃಷ್ಣ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
3/ 5
ಹಲವು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ರು. ಕೆಲವು ದಿನಗಳ ಹಿಂದೆ ಉಷಾಗೌಡಗೆ ಬೇರೆ ಯುವಕನೊಂದಿಗೆ ಮದ್ವೆ ನಿಶ್ಚಯವಾಗಿತ್ತು. ಇದರಿಂದ ರೊಚ್ಚಿಗೆದ್ದ ಗೋಪಾಲಕೃಷ್ಣ ಯುವತಿಯ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ಬಂದಿದ್ದಿದ್ದಾನೆ.
4/ 5
ಮನೆಯಲ್ಲಿ ಒಬ್ಬಳೇ ಇದ್ದ ಉಷಾಳನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ತರಬಹಳ್ಳಿ ಗ್ರಾಮದ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿಗಿದ್ದಾನೆ. ತಮಿಳುನಾಡು ಮೂಲದ ಗೋಪಾಲಕೃಷ್ಟ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸ್ತಿದ್ದ.
5/ 5
ಉಷಾ ಹತ್ಯೆ ಸಂಬಂಧ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋಪಾಲಕೃಷ್ಣ ಆತ್ಮಹತ್ಯೆ ಸಂಬಂಧ ತಿರುಮಲಶೆಟ್ಟಿಹಳ್ಳಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.