CM Bommai Giving Bonus: ಆಯುಧ ಪೂಜೆಯಂದು ಪುತ್ರನ ಫ್ಯಾಕ್ಟರಿಯ ನೌಕರರಿಗೆ ಭರ್ಜರಿ ಬೋನಸ್ ಕೊಟ್ಟ ಸಿಎಂ
cm bommai celebrating ayudha pooja: ರಾಜ್ಯದಲ್ಲಿ ನಾಡಹಬ್ಬ ದಸರಾ ಸಂಭ್ರಮ ಮನೆ ಮಾಡಿದೆ. ಆಯುಧ ಪೂಜೆಯಾದ ಇಂದು ಎಲ್ಲೆಲ್ಲೂ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಕುಟುಂಬದೊಂದಿಗೆ ಹಬ್ಬ ಆಚರಿಸಿದ್ದಾರೆ.
ಆಯುಧ ಪೂಜೆ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಪುತ್ರನ ಆಟೋಮೊಬೈಲ್ ಫ್ಯಾಕ್ಟರಿಗೆ ಸಿಎಂ ಇಂದು ಭೇಟಿ ನೀಡಿದ್ದಾರೆ. ಪುತ್ರ ಭರತ್ನ ಫ್ಯಾಕ್ಟರಿಯಲ್ಲಿ ಬೊಮ್ಮಾಯಿ ದಂಪತಿ ಪೂಜೆ ನೆರವೇರಿಸಿದೆ.
2/ 5
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಮಗನ ಮ್ಯಾಗ್ನಾಟಿಕ್ ಹಾಗೂ ರೇಣುಕಾ ಇಂಡಸ್ಟ್ರೀಸ್ ಆಟೋಮೊಬೈಲ್ ಫ್ಯಾಕ್ಟರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಕಾರ್ಮಿಕರಿಗೆ ಬೋನಸ್ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)
3/ 5
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಪತ್ನಿ ಚೆನ್ನಮ್ಮ ಹಾಗೂ ಅವರ ಪುತ್ರ ಭರತ್ ಫ್ಯಾಕ್ಟರಿಯಲ್ಲಿನ ಯಂತ್ರಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿನ ಕಾರ್ಮಿಕರಿಗೆ ವಿಜಯದಶಮಿ ಶುಭಾಶಯ ತಿಳಿಸಿ ಉಡುಗೊರೆ ಹಾಗೂ ಸಿಹಿಯನ್ನು ಹಂಚಿದರು.
4/ 5
ಅರ್ಧಗಂಟೆಗಳ ಕಾಲ ಪ್ಯಾಕ್ಟರಿಯಲ್ಲಿ ದಸರಾ ಪೂಜೆ ಸಲ್ಲಿಸಿ ನಂತ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ. (ಸಾಂದರ್ಭಿಕ ಚಿತ್ರ)
5/ 5
ಈ ವೇಳೆ ಜಿಲ್ಲಾಧಿಕಾರಿ ಶ್ರೀನಿವಾಸ್, ಡಿವೈಎಸ್ಪಿ ರಂಗಪ್ಪ, ಇನ್ಸ್ಪೆಕ್ಟರ್ಗಳಾದ ಸತೀಶ್ಕುಮಾರ್, ನವೀನ್ಕುಮಾರ್ ಎಂ.ಬಿ. ಪಿಎಸ್ಐ ಭವಿತಾ ಉಪಸ್ಥಿತರಿದ್ದರು.