ಇತ್ತ, ರಾಮನಗರದಲ್ಲೂ ಸತತ ಒಂದು ಗಂಟೆ ಕಾಲ ಮಳೆಯಾಗಿದ್ದು, ಪರಿಣಾಮ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಮಳೆ ನೀರು ತುಂಬಿಕೊಂಡಿತ್ತು. ಹೆದ್ದಾರಿಯಿಂದ ಸರಾಗವಾಗಿ ನೀರು ಹೊರ ಹೋಗದ ಕಾರಣ ಮೊದಲ 20 ನಿಮಿಷ ವಾಹನ ಸವಾರರ ಪರದಾಟ ನಡೆಸಿದರು. ನಂತರ ನಿಧಾನವಾಗಿ ಮಳೆ ನೀರು ಹೊರ ಹೋಯಿತು. ರಾಮನಗರ ತಾಲೂಕಿನ ಮಾಯಾಗಾನಹಳ್ಳಿ ಗ್ರಾಮದ ಬಳಿ ಅವಾಂತರ ನಡೆದಿದೆ.