ಬೆಂಗಳೂರಿನ ವೀರಭದ್ರೇಶ್ವರ ನಗರದಲ್ಲಿ ಮಳೆಗೆ ಮನೆ ಕುಸಿದಿದೆ. ವಸುಂಧರ-ಕೃತಿಕಾ ಅಪಾರ್ಟ್ ಮೆಂಟ್ನ ತಡೆ ಗೋಡೆ ಸಮೇತ ಮನೆ ಬಿದ್ದಿದೆ. ತಡೆಗೋಡೆ ಪಕ್ಕ ನಿಲ್ಲಿಸಿದ್ದ ಎರಡು ಕಾರು ಸಂಪೂರ್ಣ ಜಖಂ ಆಗಿವೆ. ಮನೆ ಕುಸಿದ ಪರಿಣಾಮ ಅಪಾರ್ಟ್ ಮೆಂಟ್ನ ತಡೆಗೋಡೆ ಸಮೇತ ಬಿದ್ದಿದೆ. ವಸುಂಧರ ಕೃತಿಕಾ ಅಪಾರ್ಟ್ ಮೆಂಟ್ನ ತಡೆ ಗೋಡೆ ಸಮೇತ ಬಿದ್ದಿದ್ದು, ಎರಡು ಕಾರುಗಳು ಸಂಪೂರ್ಣ ಜಖಂ ಆಗಿದೆ.
ದುರ್ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲದ್ದರಿಂದ ಯಾವುದೇ ಸಾವುನೋವು ಸಂಭವಿಸಿಲ್ಲ. ಅಪಾರ್ಟ್ ಮೆಂಟ್ ತಡೆಗೋಡೆ ಸರಿಯಾಗಿ ಕಟ್ಟಿಲ್ಲದಿದ್ದೇ ಘಟನೆ ಕಾರಣ ಅಂತ ಸ್ಲಂ ನಿವಾಸಿಗಳು ಆರೋಪ ಮಾಡಿದ್ದಾರೆ. ಆದರೆ ಸ್ಲಂನಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ಪ್ರತಿನಿತ್ತ ಬರುವ ಕೊಳಚೆ ನೀರಿನಿಂದ ಕಾಂಪೌಂಡ್ ವಾಲ್ ಕುಸಿದಿದೆ ಅಂತ ಅಪಾರ್ಟ್ಮೆಂಟ್ ನಿವಾಸಿಗಳು ತಿಳಿಸಿದ್ದಾರೆ.
ಇತ್ತ, ಕೊಪ್ಪಳದಲ್ಲಿ ಭಾರೀ ಮಳೆಗೆ ಎರಡು ಎತ್ತುಗಳು ಬಲಿಯಾಗಿದ್ದು, ಕೊಪ್ಪಳ ತಾಲೂಕಿನ ಹಾಲಳ್ಳಿಯಲ್ಲಿ ಸಿಡಿಲಿಗೆ ಎರಡು ಎತ್ತುಗಳು ಸಾವನ್ನಪ್ಪಿದೆ. ಹಾಲಳ್ಳಿಯ ಈರಮ್ಮ ಭಾವಿ ಎಂಬುವವರಿಗೆ ಸೇರಿದ ಎತ್ತುಗಳು ಮೃತಪಟ್ಟಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಎತ್ತು ಕಳೆದುಕೊಂಡ ರೈತ ಕುಟುಂಬ ಕಣ್ಣೀರಿಟ್ಟಿದೆ. ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗದಗ ಜಿಲ್ಲೆಯಲ್ಲಿ ಭಾರೀ ಮಳೆಗೆ ಸಾರಿಗೆ ಸಂಸ್ಥೆಯ ಬಸ್ ಮೇಲೆ ಬೃಹತ್ ಮರ ಬಿದ್ದಿದ್ದು, ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಗ್ರಾಮದ ಬಳಿ ಘಟನೆ ನಡೆದಿದೆ. ಗಜೇಂದ್ರಗಡ ಹಾಗೂ ಅಮೀನಗಡ ನಡುವೆ ಸಂಚಾರ ಮಾಡುವ ಬಸ್ ಮೇಲೆ ಬಿದ್ದ ಕಾರಣ ಘಟನೆಯಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲವರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆ ದಾಖಲು ಮಾಡಲಾಗಿದೆ. ಗಜೇಂದ್ರಗಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನದಿಯಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಮೃತರನ್ನು ಹಂಸಿಕಾ (15), ಆವಂತಿಕಾ (11) ಗುರುತಿಸಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಳ್ಪದ ಕೇನ್ಯ ಕಣ್ಕಲ್ ಎಂಬಲ್ಲಿ ಘಟನೆ ನಡೆದಿದ್ದು, ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಸತೀಶ್ ಅಮ್ಮಣ್ಣಾಯ ಎಂಬವರ ಪುತ್ರಿಯರು ಸಾವನ್ನಪ್ಪಿದ್ದಾರೆ. ನದಿ ನೀರಲ್ಲಿ ನಾಪತ್ತೆಯಾಗಿದ್ದ ಮಕ್ಕಳನ್ನು ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹೊರ ತೆಗೆದಿದ್ದಾರೆ.