Bengaluru Rains: ಬೆಂಗಳೂರಿನಲ್ಲಿ ಅಕಾಲಿಕ ಆಲಿಕಲ್ಲು ಮಳೆ; ವಾಹನ ಸವಾರರ ಪರದಾಟ, ಧರೆಗೆ ಉರುಳಿದ ಮರಗಳು!

ಬೆಂಗಳೂರಿನಲ್ಲಿ ಅಕಾಲಿಕ ಅಲ್ಲಿಕಲ್ಲು ಮಳೆ; ವಾಹನ ಸವಾರರ ಪರದಾಟ, ಧರೆಗೆ ಉರುಳಿದ ಮರಗಳು!

  • News18 Kannada
  • |
  •   | Bangalore [Bangalore], India
First published:

  • 16

    Bengaluru Rains: ಬೆಂಗಳೂರಿನಲ್ಲಿ ಅಕಾಲಿಕ ಆಲಿಕಲ್ಲು ಮಳೆ; ವಾಹನ ಸವಾರರ ಪರದಾಟ, ಧರೆಗೆ ಉರುಳಿದ ಮರಗಳು!

    ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವು ಭಾಗಗಳಲ್ಲಿ ಇಂದು ಮಧ್ಯಾಹ್ನ ಮೂರು ಗಂಟೆ ವೇಳೆ ಭರ್ಜರಿ ಮಳೆಯಾಗಿದ್ದು, ಕೆಲ ಭಾಗಗಳಲ್ಲಿ ಅಲ್ಲಿಕಲ್ಲು ಸಹಿತ ಮಳೆ ಸುರಿದಿದೆ. ಏಕಾಏಕಿ ಸುರಿದ ಮಳೆಯಿಂದ ವಾಹನ ಸವಾರರು ಪರದಾಟ ನಡೆಸಿದ್ದು, ಕಪ್ಪು ಕಾರ್ಮೋಡಗಳು ಕವಿದು ಭರ್ಜರಿ ಮಳೆಯಾದ ಕಾರಣ ವಾಹನ ಸವಾರರು ದಾರಿ ಕಣದೆ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುವಂತೆ ಆಗಿತ್ತು.

    MORE
    GALLERIES

  • 26

    Bengaluru Rains: ಬೆಂಗಳೂರಿನಲ್ಲಿ ಅಕಾಲಿಕ ಆಲಿಕಲ್ಲು ಮಳೆ; ವಾಹನ ಸವಾರರ ಪರದಾಟ, ಧರೆಗೆ ಉರುಳಿದ ಮರಗಳು!

    ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ‌ಹಿನ್ನೆಲೆಯಲ್ಲಿ ರಾಜಧಾನಿ ಸೇರಿ ರಾಜ್ಯವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಬೆಂಗಳೂರಿನ ವಿಧಾನಸೌಧ, ಆನಂದ್ ರಾವ್​​, ಮೆಜೆಸ್ಟಿಕ್, ರೇಸ್ ಕೋರ್ಸ್, ಕೆಆರ್ ಸರ್ಕಲ್, ಟೌನ್ ಹಾಲ್, ಕಾರ್ಪೊರೇಷನ್, ಮೈಸೂರು ಬ್ಯಾಂಕ್ ಸರ್ಕಲ್ , ಜಯನಗರ, ಮಲ್ಲೇಶ್ವರ ಸೇರಿ ಹಲವೆಡೆ ಮಳೆಯಾಗಿದೆ.

    MORE
    GALLERIES

  • 36

    Bengaluru Rains: ಬೆಂಗಳೂರಿನಲ್ಲಿ ಅಕಾಲಿಕ ಆಲಿಕಲ್ಲು ಮಳೆ; ವಾಹನ ಸವಾರರ ಪರದಾಟ, ಧರೆಗೆ ಉರುಳಿದ ಮರಗಳು!

    ಮಲ್ಲೇಶ್ವರ, ಕೆಆರ್ ಸರ್ಕಲ್ ಬಳಿ ಆಲಿಕಲ್ಲು ಮಳೆಯಾಗಿದ್ದು, ಗಾಳಿಯಿಂದ ಕುಡಿದ ಭಾರೀ ಮಳೆಗೆ ಕೆಆರ್ ಸರ್ಕಲ್ ಸರ್ ಎಂ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಬಳಿ ಬೃಹತ್ ಗಾತ್ರದ ಮರ ಧರೆಗೆ ಉರುಳಿದೆ. ಮಳೆಯ ಆರ್ಭಟಕ್ಕೆ ರಾಜಧಾನಿ ಬೆಂಗಳೂರಿನ ಮಂದಿಗೆ ಮಲೆನಾಡಿನ ಅನುಭವ ಎದುರಾಗಿದೆ.

    MORE
    GALLERIES

  • 46

    Bengaluru Rains: ಬೆಂಗಳೂರಿನಲ್ಲಿ ಅಕಾಲಿಕ ಆಲಿಕಲ್ಲು ಮಳೆ; ವಾಹನ ಸವಾರರ ಪರದಾಟ, ಧರೆಗೆ ಉರುಳಿದ ಮರಗಳು!

    ಉಳಿದಂತೆ ಆನಂದ್ ರಾವ್ ಸರ್ಕಲ್ ವಿವಿ ಡಾಸ್ ಹೋಟೆಲ್ ಮುಂದೆಯೂ ಭಾರೀ ಗಾತ್ರದ ಮರ ಧರೆಗೆ ಉರುಳಿದೆ. ಐಷಾರಾಮಿ ಕಾರಿನ ಮೇಲೆ ಮರ ಉರುಳಿದ ಪರಿಣಾಮ ಸ್ಥಳದಲ್ಲಿ ಪಾರ್ಕ್​ ಮಾಡಿದ್ದ ಐಷಾರಾಮಿ ಕಾರು ನಜ್ಜು ಗುಜ್ಜಾಗಿದೆ. ಅದೃಷ್ಟವಾಶತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    MORE
    GALLERIES

  • 56

    Bengaluru Rains: ಬೆಂಗಳೂರಿನಲ್ಲಿ ಅಕಾಲಿಕ ಆಲಿಕಲ್ಲು ಮಳೆ; ವಾಹನ ಸವಾರರ ಪರದಾಟ, ಧರೆಗೆ ಉರುಳಿದ ಮರಗಳು!

    ಕುಮಾರ್ ಕೃಪಾ ರಸ್ತೆಯಲ್ಲಿನ ಚಿತ್ರಕಲಾ ಪರಿಷತ್ ಮುಂದೆ ಕಾರು ಮತ್ತು ಬೈಕ್ ಮೇಲೆ ಭಾರೀ ಗಾತ್ರದ ಮರ ಬಿದ್ದು ವಾಹನಗಳು ಸಂಪೂರ್ಣ ಜಖಂ ಆಗಿದೆ. ಈ ವೇಳೆ ಕಾರಿನಲ್ಲಿ ಇದ್ದವರಿಗೂ ಗಂಭೀರ ಗಾಯವಾಗಿದ್ದು, ಕಾರಿನಲ್ಲಿ ಎಷ್ಟು ಜನರು ಇದ್ದರೂ ಎಂಬ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ.

    MORE
    GALLERIES

  • 66

    Bengaluru Rains: ಬೆಂಗಳೂರಿನಲ್ಲಿ ಅಕಾಲಿಕ ಆಲಿಕಲ್ಲು ಮಳೆ; ವಾಹನ ಸವಾರರ ಪರದಾಟ, ಧರೆಗೆ ಉರುಳಿದ ಮರಗಳು!

    ಕೆಆರ್ ಸರ್ಕಲ್​ನಲ್ಲಿ ಮಳೆ ನೀರಿನಲ್ಲಿ ಕಾರು ಮುಳುಗಡೆಯಾಗಿದ್ದು, ಈ ವೇಳೆ ಕಾರಿನಲ್ಲಿ ಸಿಲುಕಿದ್ದ ಇಡೀ ಕುಟುಂಬವನ್ನು ರಕ್ಷಣೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

    MORE
    GALLERIES