ಸಿಎಂ ಸಿದ್ದರಾಮಯ್ಯ ಸೂಚನೆ ಬೆನ್ನಲ್ಲೇ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್, ಹೆಬ್ಬಾಳ, ಪುಲಕೇಶಿನಗರ ಸುತ್ತಮುತ್ತ ರೌಂಡ್ಸ್ ಹಾಕಿದ್ದಾರೆ. ಸಿಎಂಗೆ ಫೋನ್ ಮೂಲಕವೇ ಮಳೆ ಅವಾಂತರದ ಮಾಹಿತಿ ಕೊಟ್ಟರು. ಕೆ.ಆರ್ ಸರ್ಕಲ್ ಪ್ರಕರಣದ ಬಗ್ಗೆಯೂ ಸಿಎಂ ಮಾಹಿತಿ ಪಡೆದಿದ್ದಾರೆ. ಬಳಿಕ ಸಿಎಂ ಸಿದ್ದರಾಮಯ್ಯ ಭೇಟಿಯಾದ ತುಷಾರ್ ಗಿರಿನಾಥ್, ಸಂಪೂರ್ಣ ಮಾಹಿತಿ ನೀಡಿದ್ದರು.
ಉಳಿದಂತೆ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆಯಿಂದ ಮಳೆಹಾನಿ ಪ್ರದೇಶಗಳ ವರದಿ ಸಲ್ಲಿಕೆ ಮಾಡಿದ್ದು, ಬೆಂಗಳೂರು ನಗರದಲ್ಲಿ 206 ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದೆ. ಈ ಪೈಕಿ 183 ಪ್ರದೇಶಗಳಿಗೆ ಹೆಚ್ಚುವರಿ ನಿಗಾ ವಹಿಸಲು ಬಿಬಿಎಂಪಿ ಸೂಚನೆ ನೀಡಿದೆ. ಆದರೂ ನಿರೀಕ್ಷೆಗೂ ಮೀರಿದ ಮಳೆಯಾಗುವ ಸಂಭವವಿದ್ದು, ಹೀಗಾಗಿ ಅಗತ್ಯಕ್ರಮಗಳನ್ನು ತೆಗದುಕೊಳ್ಳಲಾಗಿದೆ ಎಂದು ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.