ಇಂದು ಗಾಂಧಿ ಜಯಂತಿ. ಹೀಗಾಗಿ ಬಹುತೇಕ ಕಚೇರಿಗಳಿಗೆ ರಜೆ ಇರಲಿದೆ. ವಾರದ ಮಧ್ಯೆ ರಜೆ ಸಿಕ್ಕಿದೆ ಎನ್ನುವ ಖುಷಿಗೆ ಬೆಂಗಳೂರಿನ ಬಹುತೇಕ ಮಂದಿ ಶಾಪಿಂಗ್, ಸಿನಿಮಾ ವೀಕ್ಷಣೆಯಲ್ಲಿ ತೊಡಗುತ್ತಾರೆ.
2/ 9
ಅದೇನೆ ಇದ್ದರೂ ಸಂಜೆಯೊಳಗೆ ಮುಗಿಸಿ ಮನೆ ಸೇರಿಕೊಳ್ಳಿ. ಇಲ್ಲದಿದ್ದರೆ ಬೆಂಗಳೂರು ಮಳೆ ನಿಮ್ಮನ್ನು ಕಾಡಬಹುದು.
3/ 9
ಮಂಗಳವಾರ ನಗರಾದ್ಯಂತ ಭಾರೀ ಮಳೆ ಆಗಿತ್ತು. ಚರಂಡಿಗಳು ತುಂಬಿ ಹರಿದ ಪರಿಣಾಮ ರಸ್ತೆಯ ಮೇಲೆ ನೀರು ನಿಂತು ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
4/ 9
ಮಳೆ ನಿಂತರೂ ಬೈಕ್ ಸವಾರರು ಮನೆ ಸೇರಲು ಕಷ್ಟಪಡುತ್ತಿದ್ದರು. ರಾತ್ರಿ ಕೂಡ ವರುಣನ ಅಬ್ಬರ ಜೋರಾಗಿತ್ತು. ಇದೇ ರೀತಿ ಇಂದು ಕೂಡ ಮಳೆ ಸುರಿಯಲಿದೆ.
5/ 9
ಇಂದು ಸಂಜೆ ಐದಾರು ಗಂಟೆಗೆ ವರುಣನ ಆರ್ಭಟ ಆರಂಭವಾಗಲಿದೆ. ಮಳೆಯ ಜೊತೆ ಗುಡುಗು-ಮಿಂಚು ಕೂಡ ಕಾಣಿಸಿಕೊಳ್ಳಲಿದೆ. 7 ಗಂಟೆ ಸುಮಾರಿಗೆ ಮಳೆ ಕೊಂಚ ವಿರಾಮ ನೀಡಲಿದ್ದು, 10 ಗಂಟೆಗೆ ಮತ್ತೆ ಆರ್ಭಟಿಸಲಿದೆ.
6/ 9
ನಗರದಲ್ಲಿ ಮಂಗಳವಾರ ಸಂಜೆ ಮಳೆ ಸುರಿದಿತ್ತು. 4 ಗಂಟೆಗೆ ಆರಂಭವಾದ ಮಳೆ ನಂತರ ದೊಡ್ಡ ಪ್ರಮಾಣದಲ್ಲಿ ಸುರಿದಿತ್ತು.
7/ 9
ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ಸರ್ಕಲ್, ಸಂಜಯ್ ನಗರ, ಹೆಬ್ಬಾಳ, ಶಾಂತಿ ನಗರ, ಯಶವಂತಪುರ, ಕೋರಮಂಗಲ, ಶ್ರೀನಿವಾಸ ನಗರ, ಗಿರಿ ನಗರ ಸೇರಿ ಹಲವು ಸ್ಥಳಗಳಲ್ಲಿ ನಿರಂತರವಾಗಿ ಮಳೆಯಾಗಿತ್ತು.