ಶೇಕಡಾ 80 ರಷ್ಟು ನಮಗೆ ನಷ್ಟ ಆಗಿದೆ. ಅಂಗಡಿಯನ್ನು ರಿನೋವೇಶನ್ ಕೂಡ ಮಾಡಿದ್ದೇವು. ಪವರ್ ಕೂಡ ಕಟ್ ಆಗಿತ್ತು. ಈಗ ಮತ್ತೆ ವಾಪಸ್ ಬಂದಿದೆ. ನೀರು ಹರಿದು ಬಂದ ವೇಳೆ ನಮ್ಮ ಕಣ್ಣ ಎದುರೇ ಆಭರಣ ಕೊಚ್ಚಿಕೊಂಡು ಹೋಗುತ್ತಿದ್ದರು ನಮಗೆ ಏನು ಮಾಡಲು ಸಾಧ್ಯವಾಗಲಿಲ್ಲ. ಸ್ಟೋರ್ ರೂಮ್ನಲ್ಲಿದ್ದ ಆಭರಣಗಳು ಕೊಚ್ಚಿ ಹೋಗಿದೆ, ಸುಮಾರು ಎರಡೂವರೆ ಕೋಟಿಯಷ್ಟು ನಷ್ಟ ಎದುರಾಗಿದೆ. ಸಾಧನೆ ಮಾಡಿ ಮಾಧ್ಯಮದಲ್ಲಿ ಬರಬೇಕು ಎಂದು ಕೊಂಡು ಕೆಲಸ ಮಾಡುತ್ತಿದ್ದೇವು, ಆದರೆ ಈ ರೀತಿ ವರದಿ ಬರುತ್ತಿರುವುದು ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ.