ಮುಂಗಾರು ಪೂರ್ವ ಮಳೆಗೆ ಬೆಂಗಳೂರಿನ ಜನರು ಫುಲ್ ಖುಷಿಯಾಗಿದ್ದಾರೆ. ಮಧ್ಯಾಹ್ನದ ನಂತರ ರಾಜಧಾನಿಯಲ್ಲಿ ಮಳೆ ಆರಂಭಗೊಂಡಿತ್ತು. ಇನ್ನು ರಾತ್ರಿಯೂ ಗುಡುಗು ಮಿಂಚು ಸಹಿತ ಮಳೆಯಾಗಿರುವ ವರದಿಗಳು ಬಂದಿವೆ. (ಸಾಂದರ್ಭಿಕ ಚಿತ್ರ)
2/ 7
ಸಿಲಿಕಾನ್ ಸಿಟಿಯ ಬಸವನಗುಡಿ, ಕಾರ್ಪೋರೇಷನ್, ಹನುಮಂತ ನಗರ, ವಿದ್ಯಾಪೀಠ, ಯಲಹಂಕ, ಶಿವಾಜಿ ನಗರ, ವಿಧಾನಸೌಧ ಸುತ್ತಮುತ್ತ, ಯಲಹಂಕ, ರಾಜಾಜಿ ನಗರ, ಆರ್.ಟಿ.ನಗರದಲ್ಲಿಯೂ ಮಳೆಯಾಗಿದೆ. (ಸಾಂದರ್ಭಿಕ ಚಿತ್ರ)
3/ 7
ಸಮುದ್ರಮಟ್ಟದಲ್ಲಿ ಸೃಷ್ಟಿಯಾದ ಸುಳಿಗಾಳಿ ಕಾರಣದಿಂದಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧಡೆ ಮುಂದಿನ ಮೂರ್ನಾಲ್ಕು ದಿನ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. (ಸಾಂದರ್ಭಿಕ ಚಿತ್ರ)
4/ 7
ಮಾರ್ಚ್ 19ರವರೆಗೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಇಂದು ರಾಜಧಾನಿಯಲ್ಲಿ ಗರಿಷ್ಠ 29 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. (ಸಾಂದರ್ಭಿಕ ಚಿತ್ರ)
5/ 7
ಬೀದರ್ ಜಿಲ್ಲೆಯಲ್ಲಿಯೂ ಮಳೆ
ಬೀದರ್ ಜಿಲ್ಲೆಯಾದ್ಯಂತ ಮಳೆಯಾಗಿದ್ದು, ದೊಡ್ಡ ಗಾತ್ರದ ಮರ ನೆಲಕ್ಕೆ ಉರುಳಿ ಅವಾಂತರ ಸಂಭವಿಸಿದೆ. ಬೃಹತ್ ಗಾತ್ರದ ಮರ ಉರುಳಿ ಒಂದು ಕಾರು ಹಾಗೂ ಒಂದು ಆಟೋ ಜಖಂ ಆಗಿರುವ ಘಟನೆ ಬೀದರ್ ತಾಲೂಕಿನ ಯರನ್ನಳಿ ಗ್ರಾಮದಲ್ಲಿ ನಡೆದಿದೆ. ಮಳೆ ಅವಾಂತರದಿಂದ ನಗರದ ಪ್ರಮುಖ ರಸ್ತೆ ಜಲಾವೃತಗೊಂಡಿವೆ. (ಸಾಂದರ್ಭಿಕ ಚಿತ್ರ)
6/ 7
ಕೋಲಾರದಲ್ಲಿ ಆಲಿಕಲ್ಲು ಮಳೆ
ಇತ್ತ ಕೋಲಾರದಲ್ಲೂ ಆಲಿಕಲ್ಲು ಸಹಿತ ಜೋರು ಮಳೆ ಆಗಿದೆ. ಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು. ಕೋಲಾರ ತಾಲೂಕಿನ ಮಡೇರಹಳ್ಳಿ ಗ್ರಾಮದಲ್ಲಿ ಮನೆ ಮೇಲೆ ತೆಂಗಿನ ಮರ ಬಿದ್ದಿದೆ. ಮತ್ತೊಂದು ಕಡೆ ಸುಬ್ರಹ್ಮಣ್ಯ ಎಂಬವರ ಮನೆಯ ಸಜ್ಜ ಕುಸಿದಿದೆ. (ಸಾಂದರ್ಭಿಕ ಚಿತ್ರ)
7/ 7
ಸಿಡಿಲಿಗೆ ಎತ್ತು ಬಲಿ
ರಾಯಚೂರಲ್ಲಿ ಆಲಿಕಲ್ಲು ಮಳೆ ಹಾಗೂ ಸಿಡಿಲಿಗೆ ಎತ್ತು ಮೃತಪಟ್ಟಿದೆ. ಹನುಮಂತಪ್ಪ ಗೊಲ್ಲರ ಎಂಬ ರೈತರಿಗೆ ಸೇರಿದ ಎತ್ತು ಇದಾಗಿದೆ. (ಸಾಂದರ್ಭಿಕ ಚಿತ್ರ)