ಮಾರ್ಚ್ ತಿಂಗಳಲ್ಲಿ ಬಹುನಿರೀಕ್ಷಿತ ಕೆ.ಆರ್.ಪುರದಿಂದ ವೈಟ್ಫೀಲ್ಡ್ ತನಕ ಮೆಟ್ರೋ ಉದ್ಘಾಟನೆ ಆಗಿತ್ತು. ಜನ ನೆಮ್ಮದಿಯಿಂದ ಸಂಚಾರ ಮಾಡಬಹುದು ಅನ್ನೋ ಮಾತುಗಳು ಕೇಳಿ ಬಂದಿದ್ದವು. ಆದ್ದರೆ ಬೈಯಪ್ಪನಹಳ್ಳಿ ಮಾರ್ಗದಿಂದ ಕೆಆರ್ ಪುರ ಬರುವವರಿಗೆ ಮಾತ್ರ ಮೆಟ್ರೋ ಸಂಚಾರ ಸಿಗುತ್ತಿದೆ. ಟ್ರ್ಯಾಕ್ ಇಲ್ಲದ ಕಾರಣಕ್ಕೆ ಒಂದು ತಿಂಗಳಿಗೆ ಅಂತಾ ಫೀಡರ್ ಬಸನ್ನು ಬಿಟ್ಟಿದ್ದರು. ಇದೀಗ ಎರಡು ತಿಂಗಳಾದರೂ ಕೂಡಾ ಇನ್ನೂ ಇದೇ ಸ್ಥಿತಿ ಮುಂದುವರಿದಿದೆ.