Super Cop: ಜಸ್ಟ್ 6 ಗಂಟೆಗಳಷ್ಟೇ, ಬರೋಬ್ಬರಿ 2 ಲಕ್ಷ ರೂ. ದಂಡ ವಸೂಲಿ ಮಾಡಿದ ಸೂಪರ್ ಕಾಪ್
ಮಂಗಳವಾರ ಬೆಳಗ್ಗೆ 11ರಿಂದ ಸಂಜೆ 5ರವರೆಗೆ ಜ್ಞಾನಭಾರತಿ ಜಂಕ್ಷನ್ ನಲ್ಲಿ ಉಪನಿರೀಕ್ಷಕ ಎಂ.ಶಿವಣ್ಣ ಕೇವಲ 6 ಗಂಟೆಗಳ ಅವಧಿಯಲ್ಲಿ ದಂಡ ವಸೂಲಿ ಮಾಡಿದ್ದಾರೆ. ಅಧಿಕಾರಿಯ ಅಪರೂಪದ ಸಾಧನೆಯನ್ನು ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಚಿತ್ರ ಸಮೇತ ಟ್ವೀಟ್ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದವರಿಂದ ಒಂದೇ ದಿನ 2.04 ಲಕ್ಷ ದಂಡ ವಸೂಲಿ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
2/ 7
ಮಂಗಳವಾರ ಬೆಳಗ್ಗೆ 11ರಿಂದ ಸಂಜೆ 5ರವರೆಗೆ ಜ್ಞಾನಭಾರತಿ ಜಂಕ್ಷನ್ ನಲ್ಲಿ ಉಪನಿರೀಕ್ಷಕ ಎಂ.ಶಿವಣ್ಣ ಕೇವಲ 6 ಗಂಟೆಗಳ ಅವಧಿಯಲ್ಲಿ ದಂಡ ವಸೂಲಿ ಮಾಡಿದ್ದಾರೆ. ಅಧಿಕಾರಿಯ ಅಪರೂಪದ ಸಾಧನೆಯನ್ನು ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಚಿತ್ರ ಸಮೇತ ಟ್ವೀಟ್ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. (ಸಾಂದರ್ಭಿಕ ಚಿತ್ರ)
3/ 7
249 ಟ್ರಾಫಿಕ್ ರೂಲ್ಸ್ ಬ್ರೇಕ್ ಪ್ರಕರಣಗಳಲ್ಲಿ ಶಿವಣ್ಣ ಅವರು ದಂಡ ವಸೂಲಿ ಮಾಡಿದ್ದಾರೆ. ಕಳೆದ ಆರು ತಿಂಗಳಲ್ಲಿ ನಗರದಾದ್ಯಂತ 36 ಪಾರ್ಕಿಂಗ್ ಉಲ್ಲಂಘನೆಗಳಿಗಾಗಿ ಎಸ್ಯುವಿ ಮಾಲೀಕರು ಗರಿಷ್ಠ 36,000 ದಂಡವನ್ನು ಪಾವತಿಸಿದ್ದಾರೆ. ಶಿವಣ್ಣ ಅವರು ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯಿಂದ ಒಂದು ದಿನದಲ್ಲಿ ಸಂಗ್ರಹಿಸಿದ ದಂಡದ ಮೊತ್ತವಾಗಿದೆ. (ಸಾಂದರ್ಭಿಕ ಚಿತ್ರ)
4/ 7
ಉಲ್ಲಂಘನೆಗಳನ್ನು ಪರಿಶೀಲಿಸಲು ಸಬ್ ಇನ್ಸ್ ಪೆಕ್ಟರ್ ಮತ್ತು ಅವರ ಸಂಚಾರ ಪೊಲೀಸ್ ಕಾನ್ ಸ್ಟೆಬಲ್ಗಳ ತಂಡವನ್ನು ಜ್ಞಾನಭಾರತಿ ಜಂಕ್ಷನ್ನಲ್ಲಿ ನಿಯೋಜಿಸಲಾಗಿತ್ತು. (ಸಾಂದರ್ಭಿಕ ಚಿತ್ರ)
5/ 7
ಸಬ್ ಇನ್ಸ್ ಪೆಕ್ಟರ್ ನೇತೃತ್ವದ ತಂಡ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಮಾತ್ರ ತಡೆದಿದ್ದರು. "ಎಸ್ಯುವಿ ಹೊರತುಪಡಿಸಿ, ಕೆಲವು ದ್ವಿಚಕ್ರ ವಾಹನಗಳ ವಿರುದ್ಧ ಸುಮಾರು 15 ಪ್ರಕರಣಗಳು ದಾಖಲಾಗಿವೆ, ಅವರೆಲ್ಲರಿಗೂ ದಂಡ ವಿಧಿಸಲಾಗಿದೆ. (ಸಾಂದರ್ಭಿಕ ಚಿತ್ರ)
6/ 7
ಹೆಚ್ಚಿನ ಉಲ್ಲಂಘನೆಗಳು ರಾಂಗ್ ಪಾರ್ಕಿಂಗ್ ಮತ್ತು ಸಿಗ್ನಲ್ ಜಂಪಿಂಗ್ ಮತ್ತು ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿದ್ದಕ್ಕಾಗಿ ಎಂದು ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ಹೇಳಿದರು. (ಸಾಂದರ್ಭಿಕ ಚಿತ್ರ )
7/ 7
ಶಿವಣ್ಣ ಅವರು ತಮ್ಮ ವೃತ್ತಿಜೀವನದಲ್ಲಿ ಆರು ಗಂಟೆಗಳಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸಿದ್ದು ಇದೇ ಮೊದಲು ಎಂದು ಹೇಳಿದ್ದಾರೆ. ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಮಾಡಿರುವ ಟ್ವೀಟ್ಗೆ ನೆಟ್ಟಿಗರು ಶಹಬ್ಬಾಶ್ ಗಿರಿ ಕೊಟ್ಟಿದ್ದಾರೆ.