ಶ್ರೀರಾಮ ನವಮಿಯೊಂದು ನಾನು, ಪತ್ನಿಯೊಂದಿಗೆ ಸಾಕಷ್ಟು ದೇವಸ್ಥಾನಗಳಿಗೆ ಭೇಟಿ ನೀಡಿದ್ದೆ. ಕ್ರಿಸ್ಮಸ್ ಸಮಯದಲ್ಲಿ ನಾನು ಚರ್ಚ್ಗೆ ಹೋಗುತ್ತೇನೆ, ಮೊನ್ನೆಯಷ್ಟೇ ಶ್ರೀರಾಮನವಮಿ ಆಚರಿಸಿದ್ದೇನೆ. ರಂಜಾನ್ ಪವಿತ್ರಾ ಮಾಸ ಆದ ಕಾರಣ ನಾನು ಮಸೀದಿಗೆ ಹೋಗಿ ನಮಾಜ್ ಓದಿಕೊಂಡು ಬಂದಿದ್ದೇನೆ. ನಮ್ಮ ಸಂವಿಧಾನ, ನಮ್ಮ ದೇಶ ಜ್ಯಾತ್ಯಾತೀತ ದೇಶ ಅಂತ ಹೇಳುತ್ತೆ. ಅದ್ದರಂತೆ ದೇಶದ ಅಭಿವೃದ್ಧಿಯೇ ಮುಖ್ಯ ಎಂದು ಗರುಡಾಚಾರ್ ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವರಾದ ಅಮಿತ್ ಶಾ, ನಮ್ಮ ಸಂಘದ ಮೋಹನ್ ಭಾಗವತ್ ಎಲ್ಲರೂ ಇದನ್ನೇ ಹೇಳಿದ್ದಾರೆ. ಭವ್ಯ ಭಾರತ ನಿರ್ಮಾಣ ಆಗಬೇಕು ಎಂದರೆ ಎಲ್ಲರೂ ಒಟ್ಟಾಗಿ ಮುನ್ನಡೆಯಬೇಕು ಅಂತ ಹೇಳಿದ್ದಾರೆ. ಅಭಿವೃದ್ಧಿ, ವಿಕಾಸ ಕಡೆ ನಾವು ನಡೆಯಬೇಕಿದೆ. ಎಲ್ಲರಿಗೂ ಒಳ್ಳೆಯದು ಆಗಬೇಕು ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ಬಿಜೆಪಿ ಶಾಸಕರು ತಿಳಿಸಿದ್ದಾರೆ.