ಬೆಂಗಳೂರು: ನೀವು ಮಾಡುವ ಕೆಲಸವನ್ನು (Work) ನೀವು ಎಷ್ಟು ಪ್ರೀತಿಸುತ್ತಿದ್ದರೂ (Love) ಒಮ್ಮೊಮ್ಮೆ ಬೆಳಗ್ಗೆ (Morning) ಎದ್ದು ರೆಡಿ ಆಗಿ ಕೆಲಸಕ್ಕೆ ತೆರಳುವುದು ಬೇಸರ (Bored) ತರಿಸುತ್ತದೆ. ಪ್ರತಿದಿನ ನಿವು ಒಂದೇ ಕೆಲಸವನ್ನು ಮಾಡುತ್ತಿದ್ದರೆ ನಿಮ್ಮಲ್ಲೂ ಒಂದು ರೀತಿಯ ಒಂಟಿತನ (Loneliness) ಮೂಡುವ ಅನುಭವವನ್ನು ಎದುರಿಸುತ್ತೀರಿ ಅಲ್ವಾ. ಹೇಗಾದರೂ ಇವತ್ತು ಒಂದು ದಿನ ಆಫೀಸ್ಗೆ (Office) ರಜೆ (Leave) ಹಾಕಬೇಕು ಎಂದು ಎಷ್ಟೋ ಜನ ಅಂದುಕೊಳ್ಳುತ್ತಾರೆ. (ಸಾಂದರ್ಭಿಕ ಚಿತ್ರ)
ಇಂತಹ ಭಾವನೆಗಳು ಕೇವಲ ಕಚೇರಿಗೆ ಹೋಗುವವರಿಗೆ ಮಾತ್ರವಲ್ಲ, ಯಾವುದೇ ಬ್ಯುಸಿನೆಸ್ನಲ್ಲಿ ತೊಡಗಿರುವ ವ್ಯಕ್ತಿಗಳು ಎದುರಾಗುತ್ತದೆ. ಕೆಲಸಕ್ಕೆ ಹೋಗುವುದಕ್ಕೆ ಒಂದು ಪ್ರೇರಣೆ ಇಲ್ಲದಿದ್ದರೆ ಅಥವಾ ಕೆಲಸದಲ್ಲಿ ಸಂತೋಷವಿಲ್ಲದಿದ್ದರೆ ಹಲವರು ಇಂತಹ ಸಂದರ್ಭಗಳನ್ನು ಎದುರಿಸಿರುತ್ತಾರೆ. ಇಂತಹದ್ದೆ ಭಾವನೆಯನ್ನು ನೀವು ಅನುಭವಿಸುತ್ತಿದ್ದರೆ ನಾವು ಇಂದು ಹೇಳುತ್ತಿರುವ ಬೆಂಗಳೂರಿನ ಕ್ಯಾಬ್ ಚಾಲಕರೊಬ್ಬರ ಕಥೆ ನಿಮಗೆ ಖಂಡಿತ ಸ್ಪೂರ್ತಿ ತರುತ್ತದೆ. (ಸಾಂದರ್ಭಿಕ ಚಿತ್ರ)
ಸುಮಿತ್ ಕ್ಯಾಬ್ ಚಾಲಕರ ಹೆಸರನ್ನು ಹಂಚಿಕೊಂಡಿಲ್ಲ, ಬದಲಾಗಿ ಕ್ಯಾಬ್ ಕಂಪನಿಯನ್ನು ಟ್ಯಾಗ್ ಮಾಡಿ ಕಥೆಯನ್ನು ತಿಳಿಸಿದ್ದಾರೆ. ಒಂದು ದಿನ ಕ್ಯಾವ್ ಡ್ರೈವರ್ಗೆ ರಾತ್ರಿ ವೇಳೆ ಕೆಲಸ ಮಾಡುತ್ತಿದ್ದ ಸಮಯದಲ್ಲಿ ರೈಡ್ ಬುಕ್ ಆಗಿತ್ತು. ಆದರೆ ತುಂಬಾ ದೂರ ಹಾಗೂ ಲೇಟ್ ನೈಟ್ ಆಗಿದ್ದ ಕಾರಣ ಮನವಿಯನ್ನು ತಿರಸ್ಕರಿಸಿದ್ದರು. ಆದರೆ ಪದೇ ಪದೇ ಅವರಿಗೆ ರೈಡ್ ಬುಕ್ ಮನವಿ ಬರುತ್ತಿತ್ತು. ಇದರಿಂದ ಅನಿವಾರ್ಯವಾಗಿ ಅವರು ರೈಡ್ ಮನವಿಯನ್ನು ಸ್ವೀಕರಿಸಿದ್ದರು. ಈ ಒಂದು ರೈಡ್ ಅವರ ಜೀವನನ್ನೇ ಬದಲಿಸಿತ್ತು. (ಸಾಂದರ್ಭಿಕ ಚಿತ್ರ)
ರೈಡ್ ಬುಕ್ ಆಗಿದ್ದ ಲೋಕೇಷನ್ಗೆ ತೆರಳಿದ್ದ ವೇಳೆ ಅಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಡ್ರೈವರ್ ನೋಡಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಅವರು ಮಹಿಳೆಯನ್ನು ಕಾರಿನಲ್ಲಿ ಕೂರಿಸಿಕೊಂಡು ಸಮೀಪದ ಆಸ್ಪತ್ರೆಗೆ ತೆರಳಿದ್ದರು. ಆದರೆ ತಡರಾತ್ರಿ ಆ ಆಸ್ಪತ್ರೆಯಲ್ಲಿ ವೈದ್ಯರು ಲಭ್ಯವಿರಲಿಲ್ಲ. ಕೂಡಲೇ ಮತ್ತೊಂದು ಆಸ್ಪತ್ರೆಗೆ ಕಡೆ ಚಾಲಕ ಮುನ್ನಡೆದಿದ್ದರು. (ಸಾಂದರ್ಭಿಕ ಚಿತ್ರ)
ಇದಾದ ಬಳಿಕ ಮಹಿಳೆ ಆಸ್ಪತ್ರೆಯಲ್ಲಿ ಸುರಕ್ಷಿತವಾಗಿ ಮಗುವಿಗೆ ಜನ್ಮ ನೀಡಿದ್ದರು. ಈ ಘಟನೆ ಬಳಿಕ ಚಾಲಕ ಯಾವುದೇ ರೈಡ್ ಮನವಿಯನ್ನು ತಿರಸ್ಕರಿಸಿಲ್ಲವಂತೆ. ಏಕೆಂದರೆ ಅವರು ತಮ್ಮ ಕೆಲಸವನ್ನು ಕೇವಲ ಒಂದು ವೃತ್ತಿಯಾಗಿ ಕಾಣದೆ ಒಂದು ಸೇವೆಯಾಗಿ ನೋಡಲು ಆರಂಭಿಸಿದ್ದರು. ಸುಮಿತ್ ಹಂಚಿಕೊಂಡಿರುವ ಕಥೆಯನ್ನು ಓದಿದ ಸಾವಿರಾರು ಮಂದಿ ಕ್ಯಾಚ್ ಚಾಲಕರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ ತಮ್ಮ ಕಾರ್ಯವನ್ನು ಇದೇ ರೀತಿ ಮುಂದುವರಿಸುವಂತೆ ಕೋರಿ ಹಲವು ರೀ ಟ್ವೀಟ್ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)
ಅಂದಹಾಗೇ, ಕ್ಯಾಬ್ ಚಾಲಕ ಕಳೆದ 17 ವರ್ಷಗಳಿಂದ ಕುಟುಂಬಕ್ಕಾಗಿ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ತಡರಾತ್ರಿಯ ಸಮಯದಲ್ಲೂ ಅವರು ಕಾರ್ಯನಿರ್ವಹಿಸಲು ಈ ಘಟನೆ ತಮಗೆ ಸ್ಫೂರ್ತಿ ನೀಡಿದೆ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ, ಕ್ಯಾಬ್ ಡ್ರೈವರ್ ಕಥೆ ಕೇಳಿದ ನೆಟ್ಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಸಾಂದರ್ಭಿಕ ಚಿತ್ರ)