ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಐದು ದಿನಗಳ ಹಿಂದೆ ಕಾವೇರಿ ಎನ್ನುವ ಝೀಬ್ರಾ ಮರಿಯೊಂದಕ್ಕೆ ಜನ್ಮ ನೀಡಿದೆ . ತಾಯಿ ಮತ್ತು ಮರಿ ಎರಡು ಸಹ ಆರೋಗ್ಯವಾಗಿದ್ದು, ಸದ್ಯ ಮರಿ ಝೀಬ್ರಾಗೆ ತಾಯಿ ಹಾಲು ಮಾತ್ರ ನೀಡಲಾಗುತ್ತಿದೆ. ತಾಯಿಗೆ ಜಿಬ್ರಾಗೆ ಹಾಲು ವೃದ್ಧಿಸಲು ಪೌಷ್ಟಿಕಾಂಶವುಳ್ಳ ಆಹಾರವನ್ನು ನೀಡಲಾಗುತ್ತಿದೆ.
2/ 8
ಉದ್ಯಾನವನದ ವೈದ್ಯರ ತಂಡ ತಾಯಿ ಮತ್ತು ಮರಿ ಝೀಬ್ರಾ ಆರೋಗ್ಯದ ಮೇಲೆ ನಿಗಾ ವಹಿಸಿದ್ದು , ಆಗಿಂದಾಗ್ಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಸದ್ಯ ಜೈವಿಕ ಉದ್ಯಾನವನದಲ್ಲಿ ಐದು ಝೀಬ್ರಾಗಳಿದ್ದು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿವೆ.
3/ 8
ಈ ಮೊದಲು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಾಲ್ಕು ಝೀಬ್ರಾಗಳು ಮಾತ್ರ ಇದ್ದವು. ಈಗ ಮತ್ತೊಂದು ಝೀಬ್ರಾ ಕುಟುಂಬಕ್ಕೆ ಆಗಮನವಾಗಿದೆ ಎಂದು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.
4/ 8
ಇನ್ನು ಮೃಗಾಲಯದ ಅಪರೂಪದ ಪ್ರಾಣಿಗಳಲ್ಲಿ ಝೀಬ್ರಾಗಳು ಸಹ ಒಂದು. ಆಕರ್ಷಣೀಯವಾಗಿ ಕಾಣುವ ಅವುಗಳನ್ನ ನೋಡುವುದೇ ಒಂದು ಚಂದ . ಅವುಗಳನ್ನು ಮುದ್ದು ಮಾಡಬೇಕು ಅಂತಾ ಅನಿಸುತ್ತದೆ. ಮಕ್ಕಳಂತು ಝಿಬ್ರಾಗಳನ್ನು ನೋಡಿ ಸಖತ್ ಎಂಜಾಯ್ ಮಾಡ್ತಾರೆ.
5/ 8
ಸದ್ಯ ಮೃಗಾಲಯದಲ್ಲಿ ಐದು ಝೀಬ್ರಾಗಳಿದ್ದು, ಎರಡು ಗಂಡು ಮತ್ತು ಮೂರು ಹೆಣ್ಣು ಝೀಬ್ರಾಗಳಿವೆ. ಈ ಹಿಂದೆ ಆಕಸ್ಮಿಕವಾಗಿ ಝೀಬ್ರಾ ಮತ್ತು ಮರಿಯೊಂದು ಸಾವನ್ನಪ್ಪಿತ್ತು. ಇದೀಗ ಮತ್ತೊಂದು ಹೆಣ್ಣು ಝೀಬ್ರಾ ಸಹ ಗರ್ಭಿಣಿಯಾಗಿದ್ದು , ಐದಾರು ತಿಂಗಳಲ್ಲಿ ಮರಿಗೆ ಜನ್ಮ ನೀಡಲಿದೆ.
6/ 8
ಇದರ ನಡುವೆ ಮುದ್ದಾದ ಝೀಬ್ರಾ ಮರಿಯ ವೀಕ್ಷಣೆಗೆ ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದ್ದು, ಪ್ರವಾಸಿಗರು ಪುಟ್ಟ ಝೀಬ್ರಾ ಮರಿ ತಾಯಿಯ ಜೊತೆ ಸ್ವಚ್ಛಂದವಾಗಿ ವಿಹರಿಸುವುದನ್ನು ಕಂಡು ಖುಷಿಪಡುತ್ತಿದ್ದಾರೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಹಾಯಕ ನಿರ್ದೇಶಕ ಡಾ ಕೆ ಎಸ್ ಉಮಾಶಂಕರ್ ತಿಳಿಸಿದ್ದಾರೆ.
7/ 8
ಒಟ್ಟಿನಲ್ಲಿ ಪ್ರವಾಸಿಗರ ಆಕರ್ಷಣೆಯಾಗಿರುವ ಝೀಬ್ರಾ ಕುಟುಂಬಕ್ಕೆ ಮತ್ತೊಂದು ಮರಿಯ ಆಗಮನವಾಗಿದ್ದು, ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.
8/ 8
ಕಳೆದ ವರ್ಷ ಪೃಥ್ವಿ ಎನ್ನುವ ಝೀಬ್ರಾ ಇದ್ದಕ್ಕಿದ್ದಂತೆ ಸಾವನ್ನಪ್ಪಿತ್ತು . ಹಾಗಾಗಿ ತುಂಬಾ ಸೂಕ್ಷ್ಮ ಸ್ವಭಾವದ ಝೀಬ್ರಾಗಳನ್ನ ಇನ್ನಾದರೂ ಉದ್ಯಾನವನದ ವೈದ್ಯರು ಮತ್ತು ಸಿಬ್ಬಂದಿ ಸೂಕ್ತ ರೀತಿಯಲ್ಲಿ ನಿಗಾವಹಿಸಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಪೋಷಣೆ ಮಾಡಬೇಕಿದೆ .