ಬೆಂಗಳೂರಿನಲ್ಲಿ ಕೇವಲ 50 ರೂಪಾಯಿಗಾಗಿ ಯುವಕನ ಬರ್ಬರ ಕೊಲೆಯಾಗಿದೆ. ಕೊಲೆಯಾದ ಯುವಕನನ್ನು ಶಿವಮಾಧು (24) ಎಂದು ಗುರುತಿಸಲಾಗಿದೆ. ನಗರದ ಕುರುಬರಹಳ್ಳಿ ಸರ್ಕಲ್ ಬಳಿ ಘಟನೆ ನಡೆದಿದೆ.
2/ 7
ಬಸವೇಶ್ವರ ನಗರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ಶಿವಮಾಧು ಹಾಗೂ ಕೊಲೆ ಆರೋಪಿ ಶಾಂತಕುಮಾರ್ ಇಬ್ಬರು ಸ್ನೇಹಿತರಾಗಿದ್ದು, ಸ್ನೇಹಿತರ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ತಿಳಿದು ಬಂದಿದೆ. (ಸಾಂಕೇತಿಕ ಚಿತ್ರ)
3/ 7
ಶಿವಮಾಧು ಹಾಗೂ ಶಾಂತ ಕುಮಾರ್ ಸೇರಿದಂತೆ ಇತರೆ ಸ್ನೇಹಿತರು ಸೈಬರ್ ಸೆಂಟರ್ ಗೆ ಬಂದಿದ್ದರು. ನಂತರ ಕ್ರಿಕೆಟ್ ಆಡಿ ಕುರಬರಹಳ್ಳಿ ಸರ್ಕಲ್ ಗೆ ಬಂದಿದ್ದಾರೆ. (ಸಾಂದರ್ಭಿಕ ಚಿತ್ರ)
4/ 7
ಈ ವೇಳೆ ಆಟೋ ಡ್ರೈವರ್ ಶಿವಮಾಧು ಆತನ ಸ್ನೇಹಿತ ಶಾಂತಕುಮಾರ್ ನಡುವೆ 50 ರೂಪಾಯಿಗೆ ಗಲಾಟೆಯಾಗಿದೆ. (ಸಾಂದರ್ಭಿಕ ಚಿತ್ರ)
5/ 7
ಆಗ ಇಬ್ಬರು ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಇವರು ಕಿತ್ತಾಟ ಇದ್ದೀದೆ ಎಂದು ಇತರೆ ಸ್ನೇಹಿತರು ಹೊರ ಬಂದಿದ್ದಾರೆ. ಈ ವೇಳೆ ಚಾಕು ತೆಗೆದ ಆರೋಪಿ ಶಾಂತ ಕುಮಾರ್ ಸ್ನೇಹಿತ ಶಿವಮಾಧುಗೆ ಎದೆಗೆ ಇರಿದಿದ್ದಾನೆ. (ಪ್ರಾತಿನಿಧಿಕ ಚಿತ್ರ)
6/ 7
ಎದೆಗೆ ಇರಿಯುತ್ತಿದಂತೆ ಸ್ಥಳದಲ್ಲೇ ಕುಸಿದು ಬಿದ್ದ ಶಿವಮಾಧು ಪ್ರಾಣಬಿಟ್ಟಿದ್ದಾನೆ. ಸ್ನೇಹಿತರು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. (ಸಾಂದರ್ಭಿಕ ಚಿತ್ರ)
7/ 7
ಪರೀಕ್ಷೆ ನಡೆಸಿದ ವೈದ್ಯರು ಶಿವಮಾಧು ಮೃತ ಪಟ್ಟಿರುವುದಾಗಿ ಧೃಡಪಡಿಸಿದ್ದಾರೆ. ಈ ಸಂಬಂಧ ಬಸವೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಎಫ್ ಐಆರ್ ದಾಖಲಿಸಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.