2022ಕ್ಕೆ ವಿದಾಯ ಹೇಳಿ 2023ಕ್ಕೆ ಸ್ವಾಗತ ಕೋರಲು ಯುವ ಜನತೆ ಸಿದ್ಧತೆ ನಡೆಸಿದ್ದಾರೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ದೇಶದಾದ್ಯಂತ ಪ್ರಾರಂಭವಾಗುತ್ತದೆ. ಹೊಸ ಉತ್ಸಾಹ, ಸಂತಸ, ಕನಸುಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯ ಪ್ರಮುಖ ಪ್ರದೇಶಗಳಲ್ಲೂ ಉತ್ಸಾಹದಿಂದ ಹೊಸ ವರ್ಷದ ಆಚರಣೆಯನ್ನು ವಿಭಿನ್ನವಾಗಿ ಆಚರಿಸಲು ಹಲವರು ಸಿದ್ಧರಾಗಿದ್ದಾರೆ.
ಪಾದಯಾತ್ರೆ ಗೆ ಬ್ರಹ್ಮಾಂಡ ಗುರೂಜಿ ಚಾಲನೆ ನೀಡಿದ್ದು, ನಾವು ಭಾರತೀಯರು. ನಮಗೆ ಹೊಸ, ವರ್ಷ ಭಾರತೀಯ ಪಂಚಾಂಗದ ಪ್ರಕಾರ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ನಮಗೆ ಹೊಸ ವರ್ಷ ಅಲ್ಲ ಎಂದು ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ಹೊಸ ವರ್ಷದಲ್ಲಿ ಭಾರತೀಯತೆಯನ್ನ ಮರೆಯಬಾರದು ಅಂತ ಪಾದಯಾತ್ರೆ ನಡೆಸಿದ್ದೇವೆ. ಈ ಹೊಸ ವರ್ಷಾಚರಣೆ ನಮ್ಮ ಭಾರತ ಸಂಸ್ಕೃತಿ ಅಲ್ಲದೇ ಇದ್ದರೂ ಆಚರಣೆ ಮಾಡ್ತಿದ್ದಾರೆ.
ಉಳಿದಂತೆ ಹೊಸ ವರ್ಷದ ಸಂಭ್ರಮಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, 2023ನ್ನು ಅದ್ದೂರಿಯಾಗಿ ಸ್ವಾಗತಿಸಲು ಜನರು ಕಾಯುತ್ತಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಬಹಳ ವಿಶೇಷವಾಗಿರುತ್ತದೆ. ಎಂಜಿ ರಸ್ತೆ, ಬ್ರಿಗೇಡ್ ರೋಡ್ ಸೇರಿದಂತೆ ಹಲವು ಭಾಗಗಳಲ್ಲಿ ಜನಜಂಗುಳಿ ಇರುತ್ತದೆ. ಹೀಗಾಗಿ ಟ್ರಾಫಿಕ್ ಸಮಸ್ಯೆ ತಪ್ಪಿಸಲು ಹಾಗೂ ಸುಗಮ ಸಂಚಾರಕ್ಕಾಗಿ ಬೆಂಗಳೂರು ಟ್ರಾಫಿಕ್ ಪೊಲೀಸರು ಟ್ರಾಫಿಕ್ ರೂಲ್ಸ್ ಜಾರಿಗೊಳಿಸಿದ್ದಾರೆ. ಪಾರ್ಕಿಂಗ್ಗೂ ನಿಯಮಗಳನ್ನು ಜಾರಿಗೊಳಿಸಿದ್ದಾರೆ.