ಬೆಳ್ಳಂದೂರು ಕೆರೆಯ ದೈತ್ಯ ನೊರೆಯ ಘೋರ ಚಿತ್ರಗಳು..!

ಕಳೆದ 25 ವರ್ಷಗಳಿಂದಲೂ ಬೆಳ್ಳಂದೂರು ಕೆರೆ ಕಲುಷಿತಗೊಳ್ಳುತ್ತಲೇ ಇದೆ. ಆದರೆ, ಕೆರೆಯ ಮಾಲಿನ್ಯಕ್ಕೆ ನಿಖರ ಕಾರಣ ಮಾತ್ರ ಸಿಕ್ಕಿಲ್ಲ. ಸುತ್ತಮುತ್ತಲ ಫ್ಯಾಕ್ಟರಿಗಳಿಂದ ಹರಿದುಬಂದ ರಾಸಾಯನಿಕಗಳು ಈ ಕೆರೆಗಳ ಮಾಲಿನ್ಯಕ್ಕೆ ಕಾರಣವೆಂದು ನಂಬಲಾಗಿತ್ತು. ಆದರೆ, ರಾಸಾಯನಿಕಗಳ ಜೊತೆಗೆ ವಸತಿ ಪ್ರದೇಶದ ಚರಂಡಿ ನೀರೂ ಮಾಲಿನ್ಯಕ್ಕೆ ಕಾರಣವಾಗಿದೆ. ಹಿರಿಯ ವಿಜ್ಞಾನಿ ಡಾ. ರಾಜಾ ವಿಜಯ್ಕುಮಾರ್ ಅವರು ಈ ಬಗ್ಗೆ ಕಳೆದ ವರ್ಷ ಅಧ್ಯಯನ ಮಾಡಿ ಇಂಟರೆಸ್ಟಿಂಗ್ ವಿಚಾರ ಹಂಚಿಕೊಂಡಿದ್ದರು. ಬೆಳ್ಳಂದೂರು ಕೆರೆಯಲ್ಲಿ ನೊರೆ ಸೃಷ್ಟಿಗೆ ಮೈಕೋಲಿಕ್ ಆ್ಯಸಿಡ್ ಕಾರಣ ಎಂದು ಅವರು ತಿಳಿಸಿದ್ದಾರೆ. ಮೈಕ್ರೋಥಿಕ್ಸ್ ಮತ್ತು ನೊಸ್ಟೊಕೋಡಿಯಾ ಎಂಬ ಬ್ಯಾಕ್ಟೀರಿಯಾಗಳು ಸೃಷ್ಟಿಸುವ ಅವಾಂತರವಿದು. ರಾಸಾಯನಿಕದ ಜೊತೆಗೆ ಪಾಯಿಖಾನೆಯ ಗಲೀಜು ಮತ್ತಿತರ ತ್ಯಾಜ್ಯಗಳು ಸೇರಿ ರಾಸಾಯನಿಕ ಪ್ರಕ್ರಿಯೆಯಿಂದಾಗಿ ಮೈಕ್ರೋಥಿಕ್ಸ್ ಬ್ಯಾಕ್ಟೀರಿಯಾಗಳು ವಿಪುಲವಾಗಿ ಬೆಳೆಯುತ್ತಿವೆ. ಇದರಿಂದಾಗಿ ವಿಪರೀತ ನೊರೆ ಸೃಷ್ಟಿಯಾಗುತ್ತಿದೆ ಎಂದು ಈ ಹಿರಿಯ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

First published: