ಭಾರತವು ಈ ವರ್ಷದ ಮಾರ್ಚ್ ವೇಳೆಗೆ 12 ರಿಂದ14 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಹಾಕಲು ಪ್ರಾರಂಭಿಸುತ್ತದೆ ಎಂದು ಡಾ ಎನ್‌ಕೆ ಅರೋರಾ ಹೇಳಿದ್ದಾರೆ. ಹೆಸರಾಂತ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಅರೋರಾ ಅವರು, ಕೇಂದ್ರ ಸರ್ಕಾರದ COVID-19 ಕಾರ್ಯನಿರತ ಗುಂಪಿನ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ರೋಗನಿರೋಧಕ ಗುಂಪಿನ (NTAGEI) ಅಧ್ಯಕ್ಷರಾಗಿದ್ದಾರೆ. (ಸಾಂದರ್ಭಿಕ ಚಿತ್ರ)
ದೇಶಾದ್ಯಂತ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ -19 ಲಸಿಕೆಗಳ 'ಮುನ್ನೆಚ್ಚರಿಕೆಯ ಡೋಸ್' (ಬೂಸ್ಟರ್ ಡೋಸ್) ನೀಡಲಾಗುತ್ತಿದೆ. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಇತರ ದೀರ್ಘಕಾಲದ ಕಾಯಿಲೆಗಳಂತಹ ಅಸ್ವಸ್ಥತೆ ಹೊಂದಿರುವ 60 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ವೈದ್ಯರ ಸಲಹೆಯ ಮೇರೆಗೆ "ಮುನ್ನೆಚ್ಚರಿಕೆ ಡೋಸ್" ಅನ್ನು ಪಡೆಯುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)