Nadini Milk : ನಂದಿನಿ ಹಾಲಿನ ಪ್ಯಾಕೇಟ್ ಮೇಲಿಂದ ಕನ್ನಡ ಮಾಯ..! ಏನಿದರ ಸತ್ಯಾಸತ್ಯತೆ?
ಬೆಳಗಾವಿ: ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ವತಿಯಿಂದ ನಿತ್ಯವೂ ಬರುತ್ತಿದ್ದ ನಂದಿನಿ ಕೆನೆ ಭರಿತ ಹಾಲಿನ ಪ್ಯಾಕೆಟ್ ಗಳು ಧಿಡೀರನೆ ಹೊಸ ರೂಪ ಪಡೆದಿವೆ. ಆದರೆ ವಿಷಯ ಅದಲ್ಲ, ಆ ಪ್ಯಾಕೆಟ್ ಗಳ ಮೇಲೆ ಕನ್ನಡ ಇಲ್ಲರಿದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪ್ಯಾಕೆಟ್ ಬದಲಾವಣೆಯಾಗಿದ್ದು ಏಕೆ ? ಕನ್ನಡ ಕಾಣೆ ಯಾಗೋಕೆ ನಿಜವಾದ ಕಾರಣವೇನು ? ಸ್ಪಷ್ಟನೆ ಇಲ್ಲಿದೆ.
2/ 9
ಸಾಂದರ್ಭಿಕ ಚಿತ್ರ
3/ 9
ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಶ್ರೀನಿವಾಸ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
4/ 9
ಬೆಂಗಳೂರಿನಲ್ಲಿರುವ ಕೆ.ಎಂ.ಎಫ್ ಘಟಕದಲ್ಲಿ ಹಾಲು ಪ್ಯಾಕೆಟ್ ಗಳ ಮೇಲೆ ಮುದ್ರಣ (LDPE film) ಮಾಡುವ ಯಂತ್ರ ದುರಸ್ತಿ ಯಲ್ಲಿದ್ದು, ಅದನ್ನು ಸರಿಪಡಿಸಲು 3 ರಿಂದ 4 ವಾರಗಳಾದರೂ ಬೇಕಿರುವ ಕಾರಣ, ಮುದ್ರಣ ಮಾಡಿಸಲು ಸಮಸ್ಯೆ ಎದುರಾಗಿದೆ.
5/ 9
ಬೆಳಗಾವಿಯಲ್ಲಿ ಸರಬರಾಜು ಆಗುವ 27000 ಲೀಟರ್ ಕೆನೆಭರಿತ ಹಾಲಿನ ಪ್ಯಾಕೆಟ್ ಗಳು ಬೇರೆಡೆ ಲಭ್ಯವಿಲ್ಲದ ಕಾರಣ ಗೋವಾ ಮತ್ತು ಪುಣೆ ಮಾರುಕಟ್ಟೆಗೆಂದು ಮುದ್ರಿಸಿದ್ದ ಕೆನೆಭರಿತ ಹಾಲಿನ ದುಬಾರಿ ಪ್ಯಾಕೆಟ್ ಗಳನ್ನು ಬಳಸಲಾಗುತ್ತೆ.
6/ 9
ಹಾಲು ವಿತರಣೆಯಲ್ಲಿ ತೊಂದರೆಯಾಗದಂತೆ ಮಲ್ಟಿ ಕಲರ್ ಫ್ಯಾಮಿಲಿ ಚಿತ್ರವುಳ್ಳ LDPE film ನಲ್ಲಿ ನಂದಿನಿ ಕೆನೆಭರಿತ ಹಾಲಿನ ಪ್ಯಾಕ್ ಗಳನ್ನು ಸರಬರಾಜು ಮಾಡಲಾಗುತ್ತಿದೆ’ ಎಂದು ತಿಳಿಸಿದರು.
7/ 9
ಹಾಲನ್ನು ಗ್ರಾಹಕರಿಗೆ ತಲುಪಿಸುವ ದೃಷ್ಟಿಯಿಂದ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಏಪ್ರಿಲ್ 04 ರಿಂದ ಈ ತಾತ್ಕಾಲಿಕ ಬದಲಿ ವ್ಯವಸ್ಥೆ ಮಾಡಿದೆ.
8/ 9
ಏಪ್ರಿಲ್ 3 ನೇ ವಾರದೊಳಗೆ ಸರಿಪಡಿಸಲು ಎಲ್ಲ ಏರ್ಪಾಡು ಮಾಡಿಕೊಂಡಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
9/ 9
ಈ ಬಗ್ಗೆ ಬೆಳಗಾವಿ ಹಾಲು ಒಕ್ಕೂಟ ಪತ್ರಿಕಾ ಪ್ರಕಟಣೆ ಕೂಡ ಹೊರಡಿಸಿದೆ. ಎಲ್ಲಾ ಕನ್ನಡ ಪರ ಸಂಘಟಣೆಗಳು ಬೆಂಬಲಿಸಿ ಎಂದಿನಂತೆ ಸಹಕರಿಸಲು ಕೋರಿದೆ.