Dharma Guardian 2022: ಬೆಳಗಾವಿಯಲ್ಲಿ ಜಪಾನ್-ಭಾರತ ಜಂಟಿ ಸಮರಾಭ್ಯಾಸ: ಅಣಕು ಪ್ರದರ್ಶನ
ಇಂದು ಕುಂದಾ ನಗರಿ ಬೆಳಗಾವಿಯಲ್ಲಿ (Belagavi) ಭಾರತ-ಜಪಾನ್ (India And Japan) ಜಂಟಿ ಸಮರಾಭ್ಯಾಸದ ಅಣಕು ಪ್ರದರ್ಶನ ನಡೆಯಲಿದೆ. ಫೆಬ್ರವರಿ 27ರಿಂದ ಈ ಜಂಟಿ ಸಮಾರಾಭ್ಯಾಸ ಆರಂಭವಾಗಿದೆ.
ವಾರ್ಷಿಕ ತರಬೇತಿ ಭಾಗವಾಗಿ ಧರ್ಮ ಗಾರ್ಡಿಯನ್ 2022 (Dharma Guardian 2022) ನಡೆಯುತ್ತಿದೆ. ಒಟ್ಟು 12 ದಿನ ಎರಡೂ ದೇಶಗಳ ನಡುವೆ ಈ ಸಮರಾಭ್ಯಾಸ ನಡೆಸುತ್ತಿವೆ.
2/ 8
ಭಾರತೀಯ ಸೇನೆಯ 15ನೇ ಬೆಟಾಲಿಯನ್ನ ಮರಾಠ ಲೈಟ್ ಇನ್ಫಂಟ್ರಿ ರೆಜಿಮೆಂಟ್, ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್ನ 30ನೇ ದಳದ ಯುದ್ಧ ಅನುಭವಿ ಪಡೆಗಳು ಸಮರಾಭ್ಯಾಸದಲ್ಲಿ ಭಾಗಿ ಆಗಿದ್ದಾರೆ.
3/ 8
ವಸತಿ ಪ್ರದೇಶ ಮತ್ತು ಭಯೋತ್ಪಾದಕರ ಅಡಗು ತಾಣಗಳ ಮೇಲೆ ದಾಳಿ ನಡೆದಾಗ ಯಾವ ರೀತಿ ಕಾರ್ಯಚರಣೆ ನಡೆಸಬೇಕು ಎಂಬುದರ ಕುರಿತು ಇಲ್ಲಿ ತರಬೇತಿ ನೀಡಲಾಗುತ್ತದೆ.
4/ 8
ಜಾಗತೀಕವಾಗಿ ಕಾಡುತ್ತಿರುವ ಭಯೋತ್ಪಾದನೆ ವಿರುದ್ಧ ಹೇಗೆ ಯುದ್ಧ ನಡೆಸಬೇಕು ಎಂಬುದರ ತರಬೇತಿಯ ಸಮರಾಭ್ಯಾಸ ಇಲ್ಲಿ ನಡೆಸಲಾಗಿದೆ. ಕಾಡು, ಅರೆ ನಗರ, ನಗರ ಪ್ರದೇಶಗಳಲ್ಲಿನ ಕಾರ್ಯಾಚರಣೆಯ ಪ್ಲಟೂನ್ ಮಟ್ಟದ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತದೆ.
5/ 8
ನವೆಂಬರ್ 30ರಂದು ಜಪಾನಿನ ನಿಯೋಗ ಬೆಳಗಾವಿಗೆ ಆಗಮಿಸಿ ಸಮರಾಭ್ಯಾಸದ ಕುರಿತು ಚರ್ಚೆ ನಡೆಸಿತ್ತು. ಈ ನಿಯೋಗದಲ್ಲಿ ಭಾರತದ ಜಪಾನ್ ರಾಯಭಾರ ಕಚೇರಿಯ ಲೆಫ್ಟಿನೆಂಟ್ ಕರ್ನಲ್ ಯುಜೊ ಮಸೂದಾ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.
6/ 8
ಅಂದು ಎರಡೂ ದೇಶದ ನಿಯೋಗಗಳು ದೀರ್ಘ ಕಾಲದವರೆಗೆ ಚರ್ಚೆ ನಡೆಸಿದ್ದವು. ತದನಂತರ ಸಮರಾಭ್ಯಾಸ ನಡೆಸುವ ಸ್ಥಳ ಮರಾಠಾ ಲಘು ಪದಾತಿ ದಳ ಕೇಂದ್ರದ ಪರಿಶೀಲನೆ ನಡೆಸಲಾಗಿತ್ತು.
7/ 8
ಎರಡೂ ದೇಶಗಳು ಜಂಟಿಯಾಗಿ ಸಮರಾಭ್ಯಾಸ ನಡೆಸೋದರಿಂದ ಭಾರತ ಮತ್ತು ಜಪಾನ್ ಸೇನೆ ನಡುವಿನ ರಕ್ಷಣಾ ಸಹಕಾರ ಹೆಚ್ಚಿಸಲಿದೆ ಎಂದು ಹೇಳಲಾಗಿದೆ.
8/ 8
ಈ ರೀತಿ ಎರಡೂ ದೇಶಗಳ ಒಂದಾಗಿ ಮಿಲಟರಿಗೆ ಸಂಬಂಧಿಸಿದಂತೆ ತರಬೇತಿ ಪಡೆಯೋದರಿಂದ ಉಭಯ ದೇಶಗಳ ದ್ವಿಪಕ್ಷೀಯ ಮಾತುಕತೆಗೆ ಸಹಕಾರಿಯಾಗಲಿದೆ ಎಂದು ವರದಿಯಾಗಿದೆ.