ಎಷ್ಟೋ ಜನರು ಉದ್ಯೋಗ ಇಲ್ಲದೆ ಇನ್ನೂ ಮನೆಯಲ್ಲಿಯೇ ಇದ್ದಾರೆ. ಇನ್ನೂ ಕೆಲವರು ಉದ್ಯೋಗ ಸಿಕ್ಕರೂ ಹೊರಗಡೆ ಹೋಗಿ ಕೆಲಸ ಮಾಡಲು ಇಷ್ಟಪಡದವರು ಮನೆಯಲ್ಲಿಯೇ ಇದ್ದಾರೆ. ಇಂತವರನ್ನೇ ಗುರಿಯಾಗಿಸಿಕೊಂಡು ಹ್ಯಾಕರ್ಸ್ಗಳು ವಂಚನೆಗೆ ಹೊಸ ಮಾರ್ಗವನ್ನು ಹುಡುಕಿದ್ದಾರೆ. ಇಂತಹದೇ ಒಂದು ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು, ಉದ್ಯೋಗ ನೀಡುವ ನೆಪದಲ್ಲಿ ಲಕ್ಷಗಟ್ಟಲೆ ಹಣವನ್ನು ದೋಚಿದ್ದಾರೆ.