ಸಂಚಾರಿ ತಜ್ಞರ ತಂಡ ಬೆಂಗಳೂರಿನ ಕನಿಷ್ಠ 10 ಟ್ರಾಫಿಕ್ ಜಂಕ್ಷನ್ ಗಳ ಅಧ್ಯಯನ ಮಾಡಲಾಗಿದೆ. ಬೆಂಗಳೂರಿನ ಉತ್ತರ ಭಾಗದ ಹೆಬ್ಬಾಳ ಫ್ಲೈ ಓವರ್ ಅತಿ ಹೆಚ್ಚಿನದಾಗಿ ವಾಹನ ದಟ್ಟಣೆ ಕಂಡು ಬರುತ್ತಿದೆ.
2/ 7
ಈವರೆಗೆ ಎರಡು ಅಧ್ಯಯನ ಮಾಡಲಾಗಿದೆ. ವಾಹನ ದಟ್ಟಣೆ ಎಷ್ಟು, ಪೀಕ್ ಅವರ್ ಎಷ್ಟು, ಹೊರ ರಾಜ್ಯದಿಂದ ಎಷ್ಟು ವೆಹಿಕಲ್ ಬರುತ್ತೆ ಅನ್ನೋದರ ಬಗ್ಗೆಯೂ ಸಂಚಾರಿ ತಜ್ಞರು ಅಧ್ಯಯನ ಮಾಡಲಾಗಿದೆ.
3/ 7
ಫ್ಲೈ ಓವರ್ ಮೇಲೆ 45000 ವೆಹಿಕಲ್ ಗಳು ಸಂಚಾರ ಮಾಡ್ತಿವೆ. ಕಳೆದ ಮೂರು ದಿನಗಳಿಂದ ಸೂಚನಾ ಫಲಕ ನೀಡಲಾಗಿದೆ. ಸರ್ವಿಸ್ ರಸ್ತೆಯಲ್ಲಿ ಬರುವ ವೆಹಿಕಲ್ ಗಳು ಲೂಪ್ ಮುಖಾಂತರ ಹೋಗಿ ನಗರ ಪ್ರವೇಶ ಮಾಡಬಹುದು.
4/ 7
ಯಲಹಂಕ , ಬ್ಯಾಟರಾಯನಪುರ, ಕೊಡಿಗೇಹಳ್ಳಿ ಅಮೃತಹಳ್ಳಿ ಕಡೆಯಿಂದ ಬರುವವರು ಲೂಪ್ ಫ್ಲೈ ಓವರ್ ಬಳಿ ತೆಗೆದುಕೊಂಡು ನಗರ ಪ್ರವೇಶ ಮಾಡಬೇಕು.
5/ 7
ಆಂಧ್ರ ಪ್ರದೇಶದಿಂದ ಬರುವ ಬಸ್ ಗಳು ಬಸ್ ಬೇರೆ ಸ್ಟಾಪ್ ಗೆ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ. ಆಟೋ ಸ್ಟ್ಯಾಂಡ್ ಕೂಡ ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ. ಪ್ರಾಯೋಗಿಕವಾಗಿ ಶುಕ್ರವಾರದಿಂದ ಈ ನಿಯಮಗಳು ಜಾರಿಗೆ ತರಲಾಗುತ್ತದೆ.
6/ 7
ಈ ನಿಯಮಗಳಿಂದ ಶೇ.90ರಷ್ಟು ಅನುಕೂಲವಾಗಲಿದೆ. ಶೇ.10ರಷ್ಟು ಜನರಿಗೆ ಅನಾನೂಕೂಲವಾಗಲಿದೆ ಎಂದು ಅಧ್ಯಯನ ತಂಡ ಹೇಳಿದೆ.
7/ 7
ಹೆಬ್ಬಾಳ ಬಳಿ ಟ್ರಾಫಿಕ್ ಕಂಟ್ರೋಲ್ ಮಾಡಲು ಇದು ಅವಶ್ಯಕವಾಗಿದೆ ಎಂದು ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿಕೆ ನೀಡಿದ್ದಾರೆ.