Mangaluru: ಬಂಟ್ವಾಳದಲ್ಲಿ ನಿರ್ಮಾಣವಾಯ್ತು ಸಾಮರಸ್ಯದ ಮಸೀದಿ, ನಿರ್ಮಾಣಕ್ಕೆ ಮರ ನೀಡಿದ ಹಿಂದೂಗಳು!

ದಕ್ಷಿಣ ಕನ್ನಡ ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿಯನ್ನು ಹೊಂದಿರುವ ಜಿಲ್ಲೆ..ಇಲ್ಲಿನ ಪ್ರತಿ ವೈಯಕ್ತಿಕ ಜಗಳ ಕೋಮು ಬಣ್ಣ ಪಡೆದು ರಾಷ್ಟ್ರದಲ್ಲಿ ಕುಖ್ಯಾತಿಯನ್ನು ಪಡೆದಿದೆ. ಆದರೆ ಬಂಟ್ವಾಳದ 800 ವರ್ಷದ ಹಿಂದಿನ ಮಸೀದಿ ಕುಖ್ಯಾತಿಯ ಹಣೆಪಟ್ಟಿಯನ್ನು ತೊಡೆದು ಸಾಮರಸ್ಯದ ದ್ಯೋತಕವಾಗಿದೆ

  • News18 Kannada
  • |
  •   | Bantval (Bantwal), India
First published:

  • 110

    Mangaluru: ಬಂಟ್ವಾಳದಲ್ಲಿ ನಿರ್ಮಾಣವಾಯ್ತು ಸಾಮರಸ್ಯದ ಮಸೀದಿ, ನಿರ್ಮಾಣಕ್ಕೆ ಮರ ನೀಡಿದ ಹಿಂದೂಗಳು!

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಇಡೀ ಜಿಲ್ಲೆಯಲ್ಲಿಯೇ ಕೋಮುಸೂಕ್ಷ್ಮ ಪ್ರದೇಶ ಎಂಬ ಕುಖ್ಯಾತಿ ಪಡೆದಿದೆ. ಆದರೆ ಇದೀಗ ಅದೇ ಬಂಟ್ವಾಳದ ಮಸೀದಿ ಈಗ ಸಾಮರಸ್ಯದ ಗೂಡಾಗಿದೆ.

    MORE
    GALLERIES

  • 210

    Mangaluru: ಬಂಟ್ವಾಳದಲ್ಲಿ ನಿರ್ಮಾಣವಾಯ್ತು ಸಾಮರಸ್ಯದ ಮಸೀದಿ, ನಿರ್ಮಾಣಕ್ಕೆ ಮರ ನೀಡಿದ ಹಿಂದೂಗಳು!

    ಬಂಟ್ವಾಳ ತಾಲೂಕಿನ ಮೂಲರಪಟ್ಣದ ಮೊಹಿಯದ್ದೀನ್ ಜುಮಾ ಮಸ್ಜಿದ್ ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯತೆಯ ಕೇಂದ್ರವಾಗಿದೆ.

    MORE
    GALLERIES

  • 310

    Mangaluru: ಬಂಟ್ವಾಳದಲ್ಲಿ ನಿರ್ಮಾಣವಾಯ್ತು ಸಾಮರಸ್ಯದ ಮಸೀದಿ, ನಿರ್ಮಾಣಕ್ಕೆ ಮರ ನೀಡಿದ ಹಿಂದೂಗಳು!

    ಊರವರ ಅಳಿಲ ಸೇವೆಯಿಂದ ಸುಂದರ ಮಸೀದಿ ನಿರ್ಮಾಣವಾದರೆ, ಮಸೀದಿ ನಿರ್ಮಾಣಕ್ಕೆ ಮರ ಮಟ್ಟುಗಳನ್ನು ಹಿಂದೂಗಳು ನೀಡಿದರೆ, ಹಿಂದೂ ಬಡಗಿ ರತ್ನಾಕರ್ ಕೆತ್ತನೆಯಲ್ಲಿ ಮಸೀದಿ ಆಕರ್ಷಕವಾಗಿ ಮೂಡಿ ಬಂದಿದೆ.

    MORE
    GALLERIES

  • 410

    Mangaluru: ಬಂಟ್ವಾಳದಲ್ಲಿ ನಿರ್ಮಾಣವಾಯ್ತು ಸಾಮರಸ್ಯದ ಮಸೀದಿ, ನಿರ್ಮಾಣಕ್ಕೆ ಮರ ನೀಡಿದ ಹಿಂದೂಗಳು!

    ಮೂಲರಪಟ್ಣದ ಮೊಹಿಯದ್ದೀನ್ ಜುಮಾ ಮಸೀದಿಗೆ 800 ವರ್ಷಗಳ ಇತಿಹಾಸವಿದೆ.ಇದೀಗ ಈ ಮಸೀದಿ ಸೌಹಾರ್ದತೆಯ ಕೇಂದ್ರಬಿಂದುವಾಗಿದೆ. ಮಸೀದಿಯನ್ನು ಇತ್ತೀಚೆಗೆ ನವೀಕರಿಸಲಾಗಿದ್ದು, ಮಸೀದಿ ನವೀಕರಣಕ್ಕೆ ಹಿಂದೂಗಳು ಮರ ನೀಡಿದರೆ ,ಬಡಗಿ ರತ್ನಾಕರ್ ಕೈಯಿಂದ ಮಸೀದಿ ಒಳಗೆ ಆಕರ್ಷಕ ಕೆತ್ತನೆ ಮೂಡಿ ಬಂದಿದೆ.

    MORE
    GALLERIES

  • 510

    Mangaluru: ಬಂಟ್ವಾಳದಲ್ಲಿ ನಿರ್ಮಾಣವಾಯ್ತು ಸಾಮರಸ್ಯದ ಮಸೀದಿ, ನಿರ್ಮಾಣಕ್ಕೆ ಮರ ನೀಡಿದ ಹಿಂದೂಗಳು!

    ಮರದ ಕೆತ್ತನೆಯಲ್ಲಿ ನುರಿತರಾಗಿರುವ ರತ್ನಾಕರ್, ಮಸೀದಿಯ ಕೆತ್ತನೆ ಕೆಲಸ ಮಾಡಿದ್ದು ಇದೇ ಮೊದಲ ಬಾರಿಯಾಗಿದೆ. ಅಳುಕಿನಿಂದಲೇ ಕೆಲಸ ಆರಂಭಿಸಿದ ರತ್ನಾಕರ್ ಕೆತ್ತನೆ ಕೆಲಸಕ್ಕೆ ಈಗ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 610

    Mangaluru: ಬಂಟ್ವಾಳದಲ್ಲಿ ನಿರ್ಮಾಣವಾಯ್ತು ಸಾಮರಸ್ಯದ ಮಸೀದಿ, ನಿರ್ಮಾಣಕ್ಕೆ ಮರ ನೀಡಿದ ಹಿಂದೂಗಳು!

    ರತ್ನಾಕರ್ ಅವರ ಆಕರ್ಷಕ ಕೆತ್ತನೆ ಕೆಲಸಕ್ಕೆ ಮಸೀದಿ ಆಡಳಿತ ಮಂಡಳಿ ರತ್ನಾಕರ್ ಅವರಿಗೆ ಐಫೋನ್ ಮತ್ತು ವಾಚ್ ಗಿಫ್ಟ್ ನೀಡಿ ಕೃತಜ್ಞತೆ ಸಲ್ಲಿಸಿದೆ.

    MORE
    GALLERIES

  • 710

    Mangaluru: ಬಂಟ್ವಾಳದಲ್ಲಿ ನಿರ್ಮಾಣವಾಯ್ತು ಸಾಮರಸ್ಯದ ಮಸೀದಿ, ನಿರ್ಮಾಣಕ್ಕೆ ಮರ ನೀಡಿದ ಹಿಂದೂಗಳು!

    ಮಸೀದಿ ಉದ್ಘಾಟನೆಯ ದಿನ ನೋಡ ಬನ್ನಿ ನಮ್ಮೂರ ಮಸೀದಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಹೀಗಾಗಿ ಮಸೀದಿಯ ಸುಂದರ ಕೆತ್ತನೆ ನೋಡಲು ಹಿಂದೂ, ಮುಸ್ಲಿ, ಕ್ರ್ರೈಸ್ತರೆನ್ನದೇ ಆಗಮಿಸಿದ್ದರು.

    MORE
    GALLERIES

  • 810

    Mangaluru: ಬಂಟ್ವಾಳದಲ್ಲಿ ನಿರ್ಮಾಣವಾಯ್ತು ಸಾಮರಸ್ಯದ ಮಸೀದಿ, ನಿರ್ಮಾಣಕ್ಕೆ ಮರ ನೀಡಿದ ಹಿಂದೂಗಳು!

    ನೂತನ ಮಸೀದಿಯ ಸೌಂದರ್ಯ ನೋಡಿ ಕಣ್ತುಂಬಿಕೊಂಡರಲ್ಲದೇ ಈ ಸೌಂದರ್ಯವನ್ನು ತಮ್ಮ ಮೊಬೈಲ್ ನಲ್ಲೂ ಸೆರೆಹಿಡಿದಿದ್ದಾರೆ.

    MORE
    GALLERIES

  • 910

    Mangaluru: ಬಂಟ್ವಾಳದಲ್ಲಿ ನಿರ್ಮಾಣವಾಯ್ತು ಸಾಮರಸ್ಯದ ಮಸೀದಿ, ನಿರ್ಮಾಣಕ್ಕೆ ಮರ ನೀಡಿದ ಹಿಂದೂಗಳು!

    ಒಟ್ಟಿನಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಸೌಹಾರ್ದತೆ ಕದಡುತ್ತಿರುವ ಜಿಲ್ಲೆಯಲ್ಲಿ ಇಂತಹ ಸಾಮರಸ್ಯದ ನಿದರ್ಶನಗಳು ಜಿಲ್ಲೆಯಲ್ಲಿ ಸಾಮರಸ್ಯ ಇನ್ನೂ ಜೀವಂತವಾಗಿದೆ ಎಂಬುವುದನ್ನು ನಿರೂಪಿಸಿದೆ.

    MORE
    GALLERIES

  • 1010

    Mangaluru: ಬಂಟ್ವಾಳದಲ್ಲಿ ನಿರ್ಮಾಣವಾಯ್ತು ಸಾಮರಸ್ಯದ ಮಸೀದಿ, ನಿರ್ಮಾಣಕ್ಕೆ ಮರ ನೀಡಿದ ಹಿಂದೂಗಳು!

    ಸಾಮರಸ್ಯದ ಸಂಕೇತವಾಗಿರುವ ಊರವರ ಸಹಬಾಳ್ವೆ ಯ ಜೀವನ ಇಡೀ ಜಿಲ್ಲೆ ಗೆ ಪಸರಿಸಲಿ ಎಂಬುವುದೇ ನಮ್ಮ ಆಶಯ.

    MORE
    GALLERIES