ರಾಜಕಾಲುವೆ ಒಡೆದು ಮುಳುಗಿದ ಹೊಸಕೆರೆಹಳ್ಳಿಯಲ್ಲಿ ಹಸುಗೂಸಿನ ರಕ್ಷಣೆ

ಸಂಜೆ ಸುರಿದ ಮಹಾಮಳೆಗೆ ಬೆಂಗಳೂರು ಅಕ್ಷರಶಃ ನಲುಗಿದೆ. ಅದರಲ್ಲಿಯೂ ಹೊಸಕೆರೆಹಳ್ಳಿಯ ದತ್ತಾತ್ರೇಯ ಲೇಔಟ್​ನಲ್ಲಿ ರಾಜಕಾಲುವೆ ಒಡೆದು ಹಲವು ಮನೆಗಳಿಗೆ ನೀರು ನುಗ್ಗಿದೆ. ನಾಲ್ಕೈದು ಅಡಿ ನೀರು ನಿಂತಿದ್ದು, ಜನರು ಕಂಗಲಾಗಿದ್ದಾರೆ. ಈ ನಡುವೆ ಹಸುಗೂಸೊಂದನ್ನು ರಕ್ಷಣೆ ಮಾಡಲಾಗಿದ್ದು, ಮಕ್ಕಳನ್ನು ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಸ್ಥಳಕ್ಕೆ ಆರ್​ ಅಶೋಕ್​ ಭೇಟಿ ನೀಡಿದ್ದು ಪರಿಸ್ಥಿತಿ ಅವಲೋಕಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಹೊಸಕೆರೆಹಳ್ಳಿಯಲ್ಲಿ ಬೆಸ್ಕಾಂ ವಿದ್ಯುತ್​ ಕಡಿತಮಾಡಿದೆ.

First published: