Bangalore Fire Accident: ಬೆಂಗಳೂರಿನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ; ಅಕ್ಕಪಕ್ಕದ ಮನೆಗಳೂ ಸುಟ್ಟು ಭಸ್ಮ ಬೆಂಗಳೂರಿನ ಬಾಪೂಜಿನಗರದಲ್ಲಿನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಇಂದು ಭಾರೀ ಬೆಂಕಿ ಅವಘಡ ಸಂಭವಿಸಿದೆ. ಗುಡ್ಡದಹಳ್ಳಿ ಬಳಿ ಇರುವ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಕ್ಕಪಕ್ಕದ ಮನೆಗಳಿಗೂ ಬೆಂಕಿ ಆವರಿಸಿದ್ದು, ಸುತ್ತಮುತ್ತಲಿನ ಮನೆಗಳ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.
1 / 21
ಬೆಂಗಳೂರಿನ ಬಾಪೂಜಿನಗರದಲ್ಲಿನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಇಂದು ಭಾರೀ ಬೆಂಕಿ ಅವಘಡ ಸಂಭವಿಸಿದೆ. ಗುಡ್ಡದಹಳ್ಳಿ ಬಳಿ ಇರುವ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
2 / 21
ಅಕ್ಕಪಕ್ಕದ ಮನೆಗಳಿಗೂ ಬೆಂಕಿ ಆವರಿಸಿದ್ದು, ಸುತ್ತಮುತ್ತಲಿನ ಮನೆಗಳ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.
3 / 21
ಘಟನೆ ನಡೆದ ಸ್ಥಳಕ್ಕೆ 10 ಅಗ್ನಿ ಶಾಮಕ ದಳದ ವಾಹನಗಳು ಆಗಮಿಸಿ, ಬೆಂಕಿ ಆರಿಸಲು ಪ್ರಯತ್ನಿಸಿವೆ.
4 / 21
ಆದರೆ, ಬೆಂಕಿಯ ಕೆನ್ನಾಲಿಗೆ ಹರಡುತ್ತಲೇ ಇದೆ.
5 / 21
ಹತೋಟಿಗೆ ಬರದ ಬೆಂಕಿ ಪಕ್ಕದ ಮನೆಗೂ ಹರಡಿದೆ. ಇದ್ದಕಿದ್ದಂತೆ ಕೆಮಿಕಲ್ ಬಾಯ್ಲರ್ ಒಂದೊಂದೇ ಸ್ಪೋಟಗೊಳ್ಳುತ್ತಿವೆ.
6 / 21
ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಿದೆ.
7 / 21
ಈ ಬೆಂಕಿ ದುರಂತ ಸಂಭವಿಸುತ್ತಿದ್ದಂತೆ ಮಾಲೀಕ ಪರಾರಿಯಾಗಿದ್ದಾನೆ. ಫ್ಯಾಕ್ಟರಿಯ ಪಕ್ಕದ ಮನೆ ಸುಟ್ಟು ಭಸ್ಮವಾಗಿದೆ.
8 / 21
ಈ ಘಟನೆ ನಡೆದಾಗ ನಾಲ್ವರು ಕೆಮಿಕಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು.
9 / 21
ಬೆಂಕಿ ಕಾಣಿಸಿಕೊಳ್ತಿದ್ದಂತೆ ಹೊರ ಓಡಿ ಬಂದಿದ್ದರು. ಇದರಿಂದ ಭಾರೀ ಅನಾಹುತ ತಪ್ಪಿದೆ.
10 / 21
ಕೆಮಿಕಲ್ ಫ್ಯಾಕ್ಟರಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ತೀವ್ರತೆ ಹೆಚ್ಚಾಗಿದ್ದು, ಅಕ್ಕ ಪಕ್ಕದ ಮನೆಗಳಿಗೂ ಬೆಂಕಿ ತಗಲುವ ಭಯ ಉಂಟಾಗಿದೆ.
11 / 21
ಕೆಮಿಕಲ್ ಫ್ಯಾಕ್ಟರಿಯಲ್ಲಿ ಕಾಣಿಸಿಕೊಂಡ ಬಹುದೊಡ್ಡ ಪ್ರಮಾಣದ ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ.
12 / 21
ಅಕ್ಕಪಕ್ಕದ ಮನೆಯವರನ್ನು ಶಿಫ್ಟ್ ಮಾಡಲು ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
13 / 21
ಸ್ಯಾನಿಟೈಸರ್ ಹಾಗೂ ತಿನ್ನರ್ ತಯಾರಿಕಾ ಕಂಪೆನಿ ಸ್ಫೋಟಗೊಂಡಿದೆ.
14 / 21
ಲೋಕಲ್ ಆಗಿ ಸ್ಯಾನಿಟೈಸರ್ ಹಾಗೂ ಪೈಂಟ್ ರಿಮೂವಲ್ ಕೆಮಿಕಲ್ ಅನ್ನು ತಯಾರಿಸುತ್ತಿದ್ದ ಕಂಪೆನಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
15 / 21
ಸ್ಫೋಟದ ಸದ್ದು ಹಾಗೂ ಕಪ್ಪು ಹೊಗೆ ನೋಡಿ ಕಿರುಚಾಡಿದ ಸ್ಥಳೀಯರು ತಕ್ಷಣ ಮನೆಯಿಂದ ಹೊರಗೆ ಓಡಿಬಂದಿದ್ದಾರೆ.
16 / 21
ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಅರ್ಧ ಕಿಲೋಮೀಟರ್ ದೂರದಿಂದಲೇ ಬ್ಯಾರಿಕೇಡ್ ಹಾಕಿ ಬಂದೋ ಬಸ್ತ್ ಮಾಡಿದರು.
17 / 21
ಬೆಂಗಳೂರಿನ ಬಾಪೂಜಿನಗರದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ಸ್ಫೋಟ
18 / 21
ಬೆಂಗಳೂರಿನ ಬಾಪೂಜಿನಗರದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ದುರಂತ
19 / 21
ಬೆಂಗಳೂರಿನ ಬಾಪೂಜಿನಗರದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ದುರಂತ
20 / 21
ಬೆಂಗಳೂರಿನ ಬಾಪೂಜಿನಗರದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ದುರಂತ
21 / 21
ಬೆಂಗಳೂರಿನ ಬಾಪೂಜಿನಗರದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ದುರಂತ
First published: November 10, 2020, 13:18 IST