ಕಾಮಾಕ್ಷಿಪಾಳ್ಯ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಪ್ರಮುಖ ಆರೋಪಿ ಸ್ಲಂ ಭರತ್. ಇತ್ತೀಚೆಗೆ ಆತನನ್ನು ಬಂಧಿಸಲು ಮುಂದಾಗಿದ್ದ ರಾಜಗೋಪಾಲನಗರ ಪೊಲೀಸರ ಕಾರಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದ. ಬನಶಂಕರಿ ಬಳಿ ಇರುವ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಎಸ್ಕೇಪ್ ಆಗಿದ್ದ ರೌಡಿಶೀಟರ್ ಭರತ್ ನಂತರ ಉತ್ತರ ಭಾರತದ ಕಡೆ ಹೋಗಿ ತಲೆಮರೆಸಿಕೊಂಡಿದ್ದ. ಇಂದು ನಡೆದ ಫೈರಿಂಗ್ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಸ್ಲಂ ಭರತ್ ಸಾವನ್ನಪ್ಪಿದ್ದಾನೆ.