ನಟಿ ಅಭಿನಯ ತಮ್ಮ ಪೋಷಕರೊಂದಿಗೆ ಸೇರಿಕೊಂಡು ಅಣ್ಣನ ಹೆಂಡತಿ (ಅತ್ತಿಗೆ)ಗೆ ಕಿರುಕುಳ ಕೊಡುತ್ತಿದ್ದರು ಎಂಬ ಆರೋಪ ಅವರ ಮೇಲಿತ್ತು. ಪ್ರಕರಣದಲ್ಲಿ ಅಪರಾಧಿಗಳಿಗೆ ಕೋರ್ಟ್ ಶಿಕ್ಷೆ ಘೋಷಣೆ ಮಾಡಿಯಾದ ಸಂದರ್ಭದಲ್ಲಿ ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದ್ದ ದೂರುದಾರೆ ಲಕ್ಷ್ಮೀದೇವಿ ಅವರು, ಅತ್ತಿಗೆ ಹಾಗೂ ಗಂಡ ಮನೆಯಲ್ಲಿ ತಮಗೆ ನೀಡಿದ್ದ ಕಿರುಕುಳದ ಕರಾಳತೆಯನ್ನು ಬಿಚ್ಚಿಟ್ಟಿದ್ದರು.