ಆಟೋ ಚಾಲಕರ ಆಕ್ರೋಶ!
ಈ ಕುರಿತಂತೆ ನ್ಯೂಸ್18 ಕನ್ನಡದೊಂದಿಗೆ ಮಾತನಾಡಿರುವ ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಆಟೋ ಸೇವೆ ನೀಡಿದವರಿಗೆ ತೊಂದರೆ ಆದರೆ ನಾವು ಕಾರಣರಲ್ಲ. ಏನಾದರೂ ಅನಾಹುತ ಆದರೆ ಅದಕ್ಕೆ ನಾವು ಹೊಣೆ ಅಲ್ಲ. ದುಡಿದು ತಿನ್ನೋ ಆಟೋ ಪ್ರತಿಯೊಬ್ಬ ಸವಾರರು ಇಂದು ಬೆಂಬಲಿಸುತ್ತಾರೆ. ಬಂದ್ಗೆ 21 ವಿವಿಧ ಆಟೋ ಚಾಲಕರ ಸಂಘಟನೆ ಬೆಂಬಲ ನೀಡಿದ್ದು, ಸುಮಾರು ಎರಡು ಲಕ್ಷ ಆಟೋಗಳು ರಸ್ತೆಗೆ ಇಳಿಯುವುದಿಲ್ಲ. ಪ್ರತಿಭಟನೆಗೆ ಎಲ್ಲಾ ಆಟೋ ಚಾಲಕರ ಬೆಂಬಲವಿದೆ. ನಮ್ಮ ಅನ್ನ ಕಸಿಯುತ್ತಿರುವ ಬೈಕ್ ಟ್ಯಾಕ್ಸಿಗಳನ್ನು ನಿಷೇಧ ಮಾಡಲೇಬೇಕು ಎಂದು ಆಗ್ರಹಿಸಿದ್ದಾರೆ.
ರ್ಯಾಪಿಡೋ ಬೈಕ್ ಟ್ಯಾಕ್ಸಿಗೆ ಬ್ರೇಕ್ ಹಾಕುತ್ತಾ ಸರ್ಕಾರ?
ಇನ್ನು, ಆಟೋ ಚಾಲಕರ ಮುಷ್ಕರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಶ್ರೀರಾಮುಲು ಅವರು, ಚುನಾವಣೆಯ ಒಳಗೆ ಚಾಲಕರಿಗೆ ಸಿಹಿ ಸುದ್ದಿ ಕೊಡುವ ಭರವಸೆ ನೀಡಿದ್ದಾರೆ. ಆರ್ಟಿಒ ಅಧಿಕಾರಿಗಳಿಂದ ರ್ಯಾಪಿಡೋ ಬ್ಯಾನ್ ಮಾಡಲು ವರದಿ ಕೇಳಿದ್ದೀನಿ. ವರದಿ ನನ್ನ ಕೈ ಸೇರಿದ್ದೆ ಚಾಲಕರಿಗೆ ಸಿಹಿ ಸುದ್ದಿ ಕೊಡುತ್ತೇನೆ ಎಂದಿದ್ದಾರೆ.