Kalaburagi: ಮನೆಗೆ ಬಾ ಎಂದು ಕರೆಸಿ ಯುವಕನ ಕಥೆ ಮುಗಿಸಿ ಬಿಟ್ಟಳಾ ಆಂಟಿ?
ಅನೈತಿಕ ಸಂಬಂಧಕ್ಕೆ 22 ವರ್ಷದ ಯುವಕನ ಪ್ರಾಣಪಕ್ಷಿ ಹಾರಿ ಹೋಗಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಯುವಕನನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಶವವನ್ನು ಶಾಲಾ ಆವರಣದಲ್ಲಿ ಎಸೆದು ಪರಾರಿಯಾಗಿದ್ದಾರೆ.
ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದಲ್ಲಿ ಈ ಕೊಲೆ ನಡೆದಿದೆ. ಸಂತೋಷ್ ಹೆಗ್ಡೆ (22) ಕೊಲೆಯಾದ ಯುವಕ.
2/ 7
ಇಂದು ಬೆಳಗ್ಗೆ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಪತ್ತೆಯಾದ ಸಂತೋಷ್ ಮೃತದೇಹ ಪತ್ತೆಯಾಗಿದೆ. ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
3/ 7
ಸಂತೋಷ್ ತನ್ನದೇ ಗ್ರಾಮದ ನಾಗಪ್ಪ ಎಂಬವನ ಪತ್ನಿ ಲಕ್ಷ್ಮಿ (ಹೆಸರು ಬದಲಾಯಿಸಲಾಗಿದೆ) ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಮಾತುಗಳು ಕೇಳಿ ಬಂದಿವೆ.
4/ 7
ಸಂತೋಷ್ ಮತ್ತು ನಾಗಪ್ಪ ಇಬ್ಬರು ಒಂದೇ ಕಡೆ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಲಕ್ಷ್ಮಿಗೂ ಮತ್ತು ಸಂತೋಷ್ಗೆ ಪರಿಚಯವಾಗಿತ್ತು. ಈ ಪರಿಚಯ ಅಕ್ರಮ ಸಂಬಂಧದ ಸ್ವರೂಪ ಪಡೆದುಕೊಂಡಿತ್ತು.
5/ 7
ಸಂತೋಷ್ ಮತ್ತು ಲಕ್ಷ್ಮಿ ನಡುವೆ ಮೆಸೇಜ್/ಕಾಲ್/ವಾಟ್ಸಪ್ ವಿಡಿಯೋ ಕಾಲ್ ಸಂಭಾಷಣೆ ನಡೆಯುತ್ತಿತ್ತು. ಪತಿ ನಾಗಪ್ಪ ಮನೆಯಲ್ಲಿ ಇಲ್ಲದ ವೇಳೆ ಸಂತೋಷ್ನನ್ನು ಲಕ್ಷ್ಮಿ ಮನೆಗೆ ಕರೆಸಿಕೊಳ್ಳುತ್ತಿದ್ದಳು ಎನ್ನಲಾಗಿದೆ.
6/ 7
ಇದೇ ರೀತಿ ಸಂತೋಷ್ನನ್ನು ಕರೆಸಿಕೊಂಡ ಲಕ್ಷ್ಮಿ ಗಂಡನ ಜೊತೆ ಸೇರಿ ಮಗನನ್ನು ಕೊಲೆ ಮಾಡಿದ್ದಾಳೆ ಎಂದು ಸಂತೋಷ್ ಪೋಷಕರು ಆರೋಪಿಸಿದ್ದಾರೆ.
7/ 7
ಸಂತೋಷ್ ಕುಟುಂಬಸ್ಥರು ಲಕ್ಷ್ಮಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸಂಬಂಧ ನೇಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
First published:
17