Congress Guarantee: ಕಾಂಗ್ರೆಸ್ ಸರ್ಕಾರ ಬರ್ತಿದ್ದಂತೆ ರಾಜ್ಯದಲ್ಲಿ BPL ಕಾರ್ಡ್‌ಗೆ ಶುರುವಾಯ್ತು ಎಲ್ಲಿಲ್ಲದ ಬೇಡಿಕೆ!

ರಾಜ್ಯದಲ್ಲಿ ಕಾಂಗ್ರೆಸ್ ಘೋಷಿಸಿರುವ ಐದು ಗ್ಯಾರಂಟಿ ಸಾಕಷ್ಟು ಚರ್ಚೆಗೆ ಗುರಿ ಮಾಡಿದೆ. ಇದರ ಪರಿಣಾಮ ರಾಜ್ಯದ ಜನತೆ ಬಿಪಿಎಲ್ ಕಾರ್ಡ್‌ಗೆ ಜನ ಮುಗಿಬೀಳುತ್ತಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Congress Guarantee: ಕಾಂಗ್ರೆಸ್ ಸರ್ಕಾರ ಬರ್ತಿದ್ದಂತೆ ರಾಜ್ಯದಲ್ಲಿ BPL ಕಾರ್ಡ್‌ಗೆ ಶುರುವಾಯ್ತು ಎಲ್ಲಿಲ್ಲದ ಬೇಡಿಕೆ!

    ಬೆಂಗಳೂರು: ರಾಜ್ಯದಲ್ಲಿ ನೂತನ ಸರ್ಕಾರ ಬರುತ್ತಿದ್ದಂತೆ ಬಿಪಿಎಲ್ ಕಾರ್ಡ್‌ಗೆ ಎಲ್ಲಿಲ್ಲದ ಬೇಡಿಕೆ‌ ಶುರುವಾಗಿದೆ. ಇದಕ್ಕೆ ಕಾರಣ ಏನು ಅಂತಾ ಗೊತ್ತಾ? ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ. ಹೌದು, ಕಾಂಗ್ರೆಸ್‌ ಪ್ರಣಾಳಿಕೆಗೂ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಬಂದಿದ್ದಕ್ಕೂ ಏನು ಸಂಬಂಧ ಅಂತ ನಾವು ಹೇಳ್ತೀವಿ ಕೇಳಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Congress Guarantee: ಕಾಂಗ್ರೆಸ್ ಸರ್ಕಾರ ಬರ್ತಿದ್ದಂತೆ ರಾಜ್ಯದಲ್ಲಿ BPL ಕಾರ್ಡ್‌ಗೆ ಶುರುವಾಯ್ತು ಎಲ್ಲಿಲ್ಲದ ಬೇಡಿಕೆ!

    ರಾಜ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಧಿಕಾರಕ್ಕೇರಿದೆ. ಬಹುಮತದ ಸರ್ಕಾರ ಬರುತ್ತಿದೆ ಅನ್ನೋದು ಖಚಿತ ಆಗುತ್ತಿದ್ದಂತೆ ರಾಜ್ಯದಲ್ಲಿ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಜನರ ಸಂಖ್ಯೆ ಹೆಚ್ಚಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Congress Guarantee: ಕಾಂಗ್ರೆಸ್ ಸರ್ಕಾರ ಬರ್ತಿದ್ದಂತೆ ರಾಜ್ಯದಲ್ಲಿ BPL ಕಾರ್ಡ್‌ಗೆ ಶುರುವಾಯ್ತು ಎಲ್ಲಿಲ್ಲದ ಬೇಡಿಕೆ!

    ಬಿಪಿಎಲ್​ ಕಾರ್ಡಿಗೆ ಬೇಡಿಕೆ ಹೆಚ್ಚಾಗಲು ಕಾರಣ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 5 ಗ್ಯಾರಂಟಿಗಳು. ಕಾಂಗ್ರೆಸ್‌ ಸರ್ಕಾರದಲ್ಲಿ ಸ್ಕೀಂ ಪಡೆಯಲು ಬಿಪಿಎಲ್‌ ಕಾರ್ಡ್ ಮಾನದಂಡ ಎಂದು ಜನತೆ ಭಾವಿಸಿದ್ದು, ರಾಜ್ಯಾದ್ಯಂತ ಆಹಾರ ಇಲಾಖೆ ಕಚೇರಿಗೆ ಅರ್ಜಿ ಸಲ್ಲಿಕೆ ಮಾಡಲಾಗುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Congress Guarantee: ಕಾಂಗ್ರೆಸ್ ಸರ್ಕಾರ ಬರ್ತಿದ್ದಂತೆ ರಾಜ್ಯದಲ್ಲಿ BPL ಕಾರ್ಡ್‌ಗೆ ಶುರುವಾಯ್ತು ಎಲ್ಲಿಲ್ಲದ ಬೇಡಿಕೆ!

    ಕಳೆದ 2 ವಾರಗಳಿಂದ ಬಿಪಿಎಲ್‌ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವ ಜನರ ಸಂಖ್ಯೆ ಹೆಚ್ಚಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 27 ಸಾವಿರದ 411 ಅರ್ಜಿ, ವಿಜಯಪುರದಲ್ಲಿ 17 ಸಾವಿರದ 228 ಅರ್ಜಿ, ಬೆಂಗಳೂರಿನಲ್ಲಿ 12 ಸಾವಿರದ 765 ಅರ್ಜಿ, ಬೀದರ್‌ ಜಿಲ್ಲೆಯಿಂದ 12 ಸಾವಿರದ 661 ಅರ್ಜಿ ಹಾಗು ರಾಯಚೂರಿನಿಂದ 12 ಸಾವಿರದ 498 ಅರ್ಜಿಗಳು ಸಲ್ಲಿಕೆ ಆಗಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Congress Guarantee: ಕಾಂಗ್ರೆಸ್ ಸರ್ಕಾರ ಬರ್ತಿದ್ದಂತೆ ರಾಜ್ಯದಲ್ಲಿ BPL ಕಾರ್ಡ್‌ಗೆ ಶುರುವಾಯ್ತು ಎಲ್ಲಿಲ್ಲದ ಬೇಡಿಕೆ!

    ಸದ್ಯ ರಾಜ್ಯದಲ್ಲಿ 2.87 ಲಕ್ಷ ಬಿಪಿಎಲ್ ಹಾಗೂ 46,576 ಎಪಿಎಲ್ ಕಾರ್ಡ್ ಸೇರಿದಂತೆ ಒಟ್ಟು 3.34 ಲಕ್ಷ ಕಾರ್ಡ್‌ಗೆ ಅರ್ಜಿಗಳು ಬಂದಿದ್ದು, ವಿಲೇವಾರಿಗೆ ಬಾಕಿ ಇದೆ. ಇಲ್ಲಿಯವರೆಗೂ ರಾಜ್ಯದಲ್ಲಿ 4 ಕೋಟಿ ಜನರಿಗೆ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹಂಚಿಕೆ ಆಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Congress Guarantee: ಕಾಂಗ್ರೆಸ್ ಸರ್ಕಾರ ಬರ್ತಿದ್ದಂತೆ ರಾಜ್ಯದಲ್ಲಿ BPL ಕಾರ್ಡ್‌ಗೆ ಶುರುವಾಯ್ತು ಎಲ್ಲಿಲ್ಲದ ಬೇಡಿಕೆ!

    ರಾಷ್ಟ್ರೀಯ ಆಹಾರ ಹಕ್ಕು ಕಾಯಿದೆ ಪ್ರಕಾರ ಈಗಾಗಲೇ ಕರ್ನಾಟಕ‌ ರಾಜ್ಯ ಮಿತಿ ತಲುಪಿದೆ. ಇನ್ಮುಂದೆ BPL ಕಾರ್ಡ್ ನೀಡಲು ಹಣಕಾಸು ಇಲಾಖೆ ಅನುಮತಿ ಅಗತ್ಯ ಅಂತಾರೆ ಆಹಾರ ಇಲಾಖೆ ಅಧಿಕಾರಿಗಳು. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Congress Guarantee: ಕಾಂಗ್ರೆಸ್ ಸರ್ಕಾರ ಬರ್ತಿದ್ದಂತೆ ರಾಜ್ಯದಲ್ಲಿ BPL ಕಾರ್ಡ್‌ಗೆ ಶುರುವಾಯ್ತು ಎಲ್ಲಿಲ್ಲದ ಬೇಡಿಕೆ!

    ರಾಜ್ಯದಲ್ಲಿ ಕಾಂಗ್ರೆಸ್ ಘೋಷಿಸಿರುವ ಐದು ಗ್ಯಾರಂಟಿ ಸಾಕಷ್ಟು ಚರ್ಚೆಗೆ ಗುರಿ ಮಾಡಿದೆ. ಇದರ ಪರಿಣಾಮ ರಾಜ್ಯದ ಜನತೆ ಬಿಪಿಎಲ್ ಕಾರ್ಡ್‌ಗೆ ಜನ ಮುಗಿಬೀಳುತ್ತಿದ್ದಾರೆ. ಆದರೆ ಈ ಸ್ಕೀಂ ಎಲ್ಲರಿಗೂ ಸಿಗುತ್ತಾ? ಅನ್ನೋದಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಬೇಕಿದೆ. (ಸಾಂದರ್ಭಿಕ ಚಿತ್ರ) (ವರದಿ: ಶರಣು ಹಂಪಿ, ನ್ಯೂಸ್ 18, ಬೆಂಗಳೂರು)

    MORE
    GALLERIES