Arun Kumar Puthila: ಕರಾವಳಿಯಲ್ಲಿ ಬಿಜೆಪಿಗೆ ಕಂಟಕವಾಗುತ್ತಾ ಪುತ್ತಿಲ ನಡೆ? RSSಗೇ ಶಾಕ್ ಕೊಟ್ಟ ಹಿಂದೂ ಮುಖಂಡ

Puthila Parivara: ಹಿಂದೂ‌ ಮುಖಂಡ ಅರುಣ್ ಕುಮಾರ್ ಪುತ್ತಿಲ ನೇತೃತ್ವದಲ್ಲಿ ‘ಪುತ್ತಿಲ ಪರಿವಾರ’ ಹೆಸರಿನಲ್ಲಿ  ಹೊಸ ಸಂಘಟನೆ ಲೋಕಾರ್ಪಣೆಯಾಗಿದೆ.

First published:

 • 18

  Arun Kumar Puthila: ಕರಾವಳಿಯಲ್ಲಿ ಬಿಜೆಪಿಗೆ ಕಂಟಕವಾಗುತ್ತಾ ಪುತ್ತಿಲ ನಡೆ? RSSಗೇ ಶಾಕ್ ಕೊಟ್ಟ ಹಿಂದೂ ಮುಖಂಡ

  ಪುತ್ತಿಲ ಬೆಂಬಲಿಗರ ಪಾದಯಾತ್ರೆ ಬಳಿಕ ಹೊಸ ಸಂಘಟನೆ ಲೋಕಾರ್ಪಣೆ ಮಾಡಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದಂತೆ ಪುತ್ತಿಲ ಪರಿವಾರ ಕಾರ್ಯ ನಿರ್ವಹಿಸಲಿದೆ.

  MORE
  GALLERIES

 • 28

  Arun Kumar Puthila: ಕರಾವಳಿಯಲ್ಲಿ ಬಿಜೆಪಿಗೆ ಕಂಟಕವಾಗುತ್ತಾ ಪುತ್ತಿಲ ನಡೆ? RSSಗೇ ಶಾಕ್ ಕೊಟ್ಟ ಹಿಂದೂ ಮುಖಂಡ

  ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಅರುಣ್ ಕುಮಾರ್ ಪುತ್ತಿಲ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಡಿಮೆ ಮತಗಳ ಅಂತರರಿಂದ ಸೋಲು ಒಪ್ಪಿಕೊಂಡಿದ್ದರು.

  MORE
  GALLERIES

 • 38

  Arun Kumar Puthila: ಕರಾವಳಿಯಲ್ಲಿ ಬಿಜೆಪಿಗೆ ಕಂಟಕವಾಗುತ್ತಾ ಪುತ್ತಿಲ ನಡೆ? RSSಗೇ ಶಾಕ್ ಕೊಟ್ಟ ಹಿಂದೂ ಮುಖಂಡ

  ಬಿಜೆಪಿ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರಿಂದ ಆರ್​​ಎಸ್​ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ನೇರವಾಗಿಯೇ ವಾಗ್ದಾಳಿ ನಡೆಸಿದ್ದರು. ಇದೀಗ ಪ್ರಭಾಕರ್ ಭಟ್ ಅವರ ಆಶೀರ್ವಾದವನ್ನು ಪುತ್ತಿಲ ಪಡೆದುಕೊಂಡಿದ್ದಾರೆ.

  MORE
  GALLERIES

 • 48

  Arun Kumar Puthila: ಕರಾವಳಿಯಲ್ಲಿ ಬಿಜೆಪಿಗೆ ಕಂಟಕವಾಗುತ್ತಾ ಪುತ್ತಿಲ ನಡೆ? RSSಗೇ ಶಾಕ್ ಕೊಟ್ಟ ಹಿಂದೂ ಮುಖಂಡ

  ಚುನಾವಣೆಯ ಸಂದರ್ಭದಲ್ಲಿ ಪರಸ್ಪರ ವಿರೋಧಿ ಹೇಳಿಕೆ ನೀಡುತ್ತಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಅರುಣ್ ಪುತ್ತಿಲ ಮಾಣಿ ಮಠದಲ್ಲಿ ಕಾರ್ಯಕ್ರಮವೊಂದರಲ್ಲಿ ಮುಖಾಮುಖಿಯಾಗಿದ್ರು. ಕಲ್ಲಡ್ಕ ಪ್ರಭಾಕರ ಭಟ್ ಕಾಲಿಗೆರಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  MORE
  GALLERIES

 • 58

  Arun Kumar Puthila: ಕರಾವಳಿಯಲ್ಲಿ ಬಿಜೆಪಿಗೆ ಕಂಟಕವಾಗುತ್ತಾ ಪುತ್ತಿಲ ನಡೆ? RSSಗೇ ಶಾಕ್ ಕೊಟ್ಟ ಹಿಂದೂ ಮುಖಂಡ

  ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಗದ್ದೆಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಪುತ್ತಿಲ ಪರಿವಾರ ಸಂಘಟನೆ ಲೋಕಾರ್ಪಣೆಗೊಳಿಸಲಾತಯ್ತು. ಪುತ್ತಿಲ ಪರಿವಾರ ಸಂಘಟನೆ ಆರ್​​​​​ಎಸ್​​​ಎಸ್​​ನ ಗುರು ಗೋವಳ್ಕರ್ ಆಶಯದಂತೆ ಕಾರ್ಯ ನಿರ್ವಹಿಸಲಿದೆ ಎಂದು ಪರಿವಾರದ ಮುಖಂಡ ಶ್ರೀಕೃಷ್ಣ ಉಪಾಧ್ಯಾಯ ಮಾಹಿತಿ ನೀಡಿದ್ದಾರೆ.

  MORE
  GALLERIES

 • 68

  Arun Kumar Puthila: ಕರಾವಳಿಯಲ್ಲಿ ಬಿಜೆಪಿಗೆ ಕಂಟಕವಾಗುತ್ತಾ ಪುತ್ತಿಲ ನಡೆ? RSSಗೇ ಶಾಕ್ ಕೊಟ್ಟ ಹಿಂದೂ ಮುಖಂಡ

  ಬಿಜೆಪಿ ಮತ್ತು ಸಂಘ ಪರಿವಾರದ ಜೊತೆಗೆ ಮುನಿಸಿಕೊಂಡಿರುವ ಪುತ್ತಿಲ ಮತ್ತು ಬೆಂಬಲಿಗರು ತಮ್ಮದೇ ಸಂಘಟನೆ ಸ್ಥಾಪನೆ ಮೂಲಕ ಟಕ್ಕರ್ ನೀಡುತ್ತಿದ್ದಾರೆ ಎಂಬ ಚರ್ಚೆಗಳು ಆರಂಭಗೊಂಡಿವೆ.

  MORE
  GALLERIES

 • 78

  Arun Kumar Puthila: ಕರಾವಳಿಯಲ್ಲಿ ಬಿಜೆಪಿಗೆ ಕಂಟಕವಾಗುತ್ತಾ ಪುತ್ತಿಲ ನಡೆ? RSSಗೇ ಶಾಕ್ ಕೊಟ್ಟ ಹಿಂದೂ ಮುಖಂಡ

  ಚುನಾವಣೆಯಲ್ಲಿ ಸೋತರೂ ಅರುಣ್​ ಕುಮಾರ್ ಪುತ್ತಿಲ ಪ್ರಭಾವ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಿಸಿದೆ. ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಅಭಿಮಾನಿಗಳು ಒತ್ತಡ ಹಾಕುತ್ತಿದ್ದಾರೆ.

  MORE
  GALLERIES

 • 88

  Arun Kumar Puthila: ಕರಾವಳಿಯಲ್ಲಿ ಬಿಜೆಪಿಗೆ ಕಂಟಕವಾಗುತ್ತಾ ಪುತ್ತಿಲ ನಡೆ? RSSಗೇ ಶಾಕ್ ಕೊಟ್ಟ ಹಿಂದೂ ಮುಖಂಡ

  ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಸಂಘಟನೆಯನ್ನು ಅರುಣ್ ಕುಮಾರ್ ಪುತ್ತಿಲ ಆರಂಭಿಸಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

  MORE
  GALLERIES