Siddaramaiah ವಿರುದ್ಧ ವರುಣಾದಲ್ಲಿ ಗೆಲ್ಲಲು ಸೋಮಣ್ಣಗೆ ಇವರಿಬ್ಬರು ಅನಿವಾರ್ಯನಾ?

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ. ಸಿದ್ದರಾಮಯ್ಯ ಸ್ವಕ್ಷೇತ್ರವಾಗಿರುವ ವರುಣಾದಲ್ಲಿ ಮತದಾರರನ್ನು ಸೆಳೆಯೋದು ಸೋಮಣ್ಣ ಅವರಿಗೆ ಕಷ್ಟವಾಗ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

First published:

  • 17

    Siddaramaiah ವಿರುದ್ಧ ವರುಣಾದಲ್ಲಿ ಗೆಲ್ಲಲು ಸೋಮಣ್ಣಗೆ ಇವರಿಬ್ಬರು ಅನಿವಾರ್ಯನಾ?

    ವರುಣಾದಲ್ಲಿ ಲಿಂಗಾಯತ ಮತಗಳು ನಿರ್ಣಾಯಕವಾಗಿವೆ. ಲಿಂಗಾಯತ ಸಮುದಾಯದವರೇ ಆದ್ರೂ ಸೋಮಣ್ಣ ಅವರು ವರುಣಾದಲ್ಲಿ ಪ್ರಾಬಲ್ಯ ಹೊಂದಿಲ್ಲ. ಹೀಗಾಗಿ ಪಕ್ಷದಲ್ಲಿರುವ ಇಬ್ಬರು ಪ್ರಬಲ ಲಿಂಗಾಯತ ನಾಯಕರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

    MORE
    GALLERIES

  • 27

    Siddaramaiah ವಿರುದ್ಧ ವರುಣಾದಲ್ಲಿ ಗೆಲ್ಲಲು ಸೋಮಣ್ಣಗೆ ಇವರಿಬ್ಬರು ಅನಿವಾರ್ಯನಾ?

    ಒಂದು ವೇಳೆ ಈ ಇಬ್ಬರು ಬಂದು ವರುಣಾದಲ್ಲಿ ಪ್ರಚಾರ ನಡೆಸಿದ್ರೆ ಗೆಲುವು ಸುಲಭವಾಗಲಿದೆ ಅನ್ನೋದು ಸೋಮಣ್ಣ ಅವರ ಲೆಕ್ಕಾಚಾರವಾಗಿದೆ. ಆದ್ರೆ ಈ ಇಬ್ಬರ ಜೊತೆ ಸೋಮಣ್ಣ ಸ್ನೇಹದಲ್ಲಿ ಮುನಿಸು ಇದೆ ಎಂದು ಚರ್ಚೆಗಳು ನಡೆಯುತ್ತಿವೆ.

    MORE
    GALLERIES

  • 37

    Siddaramaiah ವಿರುದ್ಧ ವರುಣಾದಲ್ಲಿ ಗೆಲ್ಲಲು ಸೋಮಣ್ಣಗೆ ಇವರಿಬ್ಬರು ಅನಿವಾರ್ಯನಾ?

    ಯಾರು ಈ ಇಬ್ಬರು?

    ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಬಿವೈ ವಿಜಯೇಂದ್ರ ಇಬ್ಬರು ಬಿಜೆಪಿಯ ಪ್ರಮುಖ ಲಿಂಗಾಯತ ನಾಯಕರು. ಲಿಂಗಾಯತ ಕೋಟೆ ಭೇದಿಸಲು ಯಡಿಯೂರಪ್ಪ, ವಿಜಯೇಂದ್ರ‌ ಅವರ ಮೊರೆ ಹೋಗಿದ್ದಾರಂತೆ ವಿ ಸೋಮಣ್ಣ.

    MORE
    GALLERIES

  • 47

    Siddaramaiah ವಿರುದ್ಧ ವರುಣಾದಲ್ಲಿ ಗೆಲ್ಲಲು ಸೋಮಣ್ಣಗೆ ಇವರಿಬ್ಬರು ಅನಿವಾರ್ಯನಾ?

    ಇಬ್ಬರು ನಾಯಕರಿಂದ ಹೆಚ್ಚು ಪ್ರಚಾರಕ್ಕೆ ಸೋಮಣ್ಣ ಬಿಜೆಪಿ ಹೈಕಮಾಂಡ್ ಡಿಮ್ಯಾಂಡ್ ಮಾಡಿದ್ದಾರಂತೆ. ಸಿದ್ದರಾಮಯ್ಯ ಅವರನ್ನು ಕಟ್ಡಿ ಹಾಕಬೇಕಾದ್ರೆ ಪ್ರಬಲ ಲಿಂಗಾಯತ ನಾಯಕರೇ ಬೇಕು ಎಂದು ಪಕ್ಷದ ಮುಖಂಡರಲ್ಲಿ ಸೋಮಣ್ಣ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

    MORE
    GALLERIES

  • 57

    Siddaramaiah ವಿರುದ್ಧ ವರುಣಾದಲ್ಲಿ ಗೆಲ್ಲಲು ಸೋಮಣ್ಣಗೆ ಇವರಿಬ್ಬರು ಅನಿವಾರ್ಯನಾ?

    ಯಡಿಯೂರಪ್ಪ ಹಾಗೂ ವಿಜಯೇಂದ್ರ‌ ರಾಜ್ಯದಲ್ಲಿ ಪ್ರಬಲರಾಗಿದ್ದಾರೆ. ಜೊತೆಗೆ ವಿಜಯೇಂದ್ರ‌ ವರುಣಾದಲ್ಲಿ ಲಿಂಗಾಯತ ನಾಯಕರ ಜೊತೆ ಉತ್ತಮ ಸಂಪರ್ಕ ಸಾಧಿಸಿದ್ದಾರೆ.

    MORE
    GALLERIES

  • 67

    Siddaramaiah ವಿರುದ್ಧ ವರುಣಾದಲ್ಲಿ ಗೆಲ್ಲಲು ಸೋಮಣ್ಣಗೆ ಇವರಿಬ್ಬರು ಅನಿವಾರ್ಯನಾ?

    ಯಡಿಯೂರಪ್ಪ ಬಂದು ಪ್ರಚಾರ ಮಾಡಿದ್ರೆ, ಸಿದ್ದರಾಮಯ್ಯ ಪರ ಇರುವ ಲಿಂಗಾಯತ ಮುಖಂಡರನ್ನು ಸೆಳೆಯಬಹುದು. ಹೀಗಾಗಿ ವಿಜಯೇಂದ್ರ‌ ಹಾಗೂ ಯಡಿಯೂರಪ್ಪ ಮೂಲಕ ಲಿಂಗಾಯತ ಮತ ಸೆಳೆಯಲು ಸೋಮಣ್ಣ ಮುಂದಾಗಿದ್ದಾರೆ.

    MORE
    GALLERIES

  • 77

    Siddaramaiah ವಿರುದ್ಧ ವರುಣಾದಲ್ಲಿ ಗೆಲ್ಲಲು ಸೋಮಣ್ಣಗೆ ಇವರಿಬ್ಬರು ಅನಿವಾರ್ಯನಾ?

    ಈ ಹಿಂದೆ ಇದೇ‌ ನಾಯಕರ ಮೇಲೆ‌ ಸೋಮಣ್ಣ ಮುನಿಸಿಕೊಂಡಿದ್ದರು. ಈಗ ಪಕ್ಷ ಕೊಟ್ಟ ಜವಾಬ್ದಾರಿ ನಿಭಾಯಿಸಲು, ಆ ಮುನಿಸು ಮರೆತು, ಈ ಇಬ್ಬರ ನಾಯಕರ ಮೊರೆ ಹೋಗಿದ್ದಾರೆ.

    MORE
    GALLERIES