Rain Alert: ಬೆಂಗಳೂರಿನಲ್ಲಿ ಇನ್ನೊಂದು ವಾರ ಮಳೆ; ಹವಾಮಾನ ಇಲಾಖೆಯಿಂದ ಅಲರ್ಟ್

ಕರಾವಳಿ ಭಾಗದಲ್ಲಿ‌ ಜೋರು ಮಳೆ ಇದ್ರೆ, ಪಶ್ಚಿಮಘಟ್ಟ ಜಿಲ್ಲೆಗಳಿಗೆ 8, 9ರಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

 • News18 Kannada
 • |
 •   | Bangalore [Bangalore], India
First published:

 • 17

  Rain Alert: ಬೆಂಗಳೂರಿನಲ್ಲಿ ಇನ್ನೊಂದು ವಾರ ಮಳೆ; ಹವಾಮಾನ ಇಲಾಖೆಯಿಂದ ಅಲರ್ಟ್

  ಬೆಂಗಳೂರು: ಬಿರು ಬಿಸಿಲಿಗೆ ಬಳಲಿದ್ದ ಬೆಂಗಳೂರು ಜನತೆಗೆ ವರುಣನ ಎಂಟ್ರಿ ಕೂಲ್‌ ಕೂಲ್ ಮಾಡಿದೆ. ಕಳೆದ ಎರಡು ದಿನಗಳಿಂದ ರಾಜಧಾನಿಯಲ್ಲಿ ಮಳೆಯಾಗುತ್ತಿದ್ದು, ತಂಪಾದ ವಾತಾವರಣ ನಿರ್ಮಾಣವಾಗಿದೆ. ಹಾಗಾದರೆ ಇನ್ನೆಷ್ಟು ದಿನ ಬೆಂಗಳೂರಿನಲ್ಲಿ ಮಳೆ ಇರುತ್ತೆ? ಕೂಲ್ ವೆದರ್ ಇನ್ನೆಷ್ಟು ದಿನ ಇರುತ್ತೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

  MORE
  GALLERIES

 • 27

  Rain Alert: ಬೆಂಗಳೂರಿನಲ್ಲಿ ಇನ್ನೊಂದು ವಾರ ಮಳೆ; ಹವಾಮಾನ ಇಲಾಖೆಯಿಂದ ಅಲರ್ಟ್

  ಸಿಲಿಕಾನ್ ಸಿಟಿ ಬೆಂಗಳೂರು ಇದೀಗ ಕೂಲ್ ಕೂಲ್. ಕಳೆದ ವಾರ ಬಿರು ಬಿಸಿಲಿಗೆ ಮಧ್ಯಾಹ್ನ ಹೊರಬರಲು ಜನರು ಹಿಂದೇಟು ಹಾಕುತ್ತಿದ್ದರು. ಆದರೆ ಕಳೆದೆರಡು ದಿನಗಳಿಂದ ನಗರದಲ್ಲಿ ಮಳೆಯ ಪರಿಣಾಮ ವೆದರ್ ತುಂಬ ಕೂಲಾಗಿದೆ.

  MORE
  GALLERIES

 • 37

  Rain Alert: ಬೆಂಗಳೂರಿನಲ್ಲಿ ಇನ್ನೊಂದು ವಾರ ಮಳೆ; ಹವಾಮಾನ ಇಲಾಖೆಯಿಂದ ಅಲರ್ಟ್

  ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಪರಿಣಾಮ ನಗರದಲ್ಲಿ ಮಳೆ ಆಗುತ್ತಿದೆ. ಇನ್ನೊಂದು ವಾರ ಸಾಧಾರಣ, ಕೆಲವೊಮ್ಮ ಕೆಲ ಪ್ರದೇಶದಲ್ಲಿ ಗುಡುಗು ಸಹಿತ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  MORE
  GALLERIES

 • 47

  Rain Alert: ಬೆಂಗಳೂರಿನಲ್ಲಿ ಇನ್ನೊಂದು ವಾರ ಮಳೆ; ಹವಾಮಾನ ಇಲಾಖೆಯಿಂದ ಅಲರ್ಟ್

  ಬೆಂಗಳೂರಿನ ತುಂತುರು ಮಳೆಗೆ ಮನಸೋತ ಪ್ರವಾಸಿಗರು ವಿಧಾನಸೌಧದ ಮುಂದೆ ಫೋಟೋ ತೆಗೆಸಿಕೊಳ್ಳುತಿದ್ದರೆ, ನಗರದ ಜನತೆ ಬಿಸಿ ಬಿಸಿ ಕಾಫಿ, ಟೀ ಹೀರುತ್ತಾ ವಾತಾವರಣ ಎಂಜಾಯ್ ಮಾಡ್ತಿದಾರೆ.

  MORE
  GALLERIES

 • 57

  Rain Alert: ಬೆಂಗಳೂರಿನಲ್ಲಿ ಇನ್ನೊಂದು ವಾರ ಮಳೆ; ಹವಾಮಾನ ಇಲಾಖೆಯಿಂದ ಅಲರ್ಟ್

  ತಮಿಳುನಾಡು ಭಾಗದಲ್ಲಿ ವಾಯುಭಾರ ಕುಸಿತವಾಗಿ ಚಂಡಮಾರುತವಾಗಿ ಮಾರ್ಪಾಡಾಗಲಿದೆ. ಇದರಿಂದ ಇನ್ನೊಂದು ವಾರ ಮಳೆ ಇರಲಿದೆ. ಕರಾವಳಿ ಭಾಗದಲ್ಲಿ‌ ಜೋರು ಮಳೆ ಇದ್ರೆ, ಪಶ್ಚಿಮಘಟ್ಟ ಜಿಲ್ಲೆಗಳಿಗೆ 8, 9ರಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

  MORE
  GALLERIES

 • 67

  Rain Alert: ಬೆಂಗಳೂರಿನಲ್ಲಿ ಇನ್ನೊಂದು ವಾರ ಮಳೆ; ಹವಾಮಾನ ಇಲಾಖೆಯಿಂದ ಅಲರ್ಟ್

  ಕಳೆದ ವಾರಕ್ಕೂ ಈ ವಾರಕ್ಕೂ ವೆದರ್​​ನಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ನಾವು ದೂರದಿಂದ ರಜೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದಿದ್ದು, ನಗರದಲ್ಲಿ ಓಡಾಡಲು ಇಷ್ಟ ಆಗುತ್ತಿದೆ ಎಂದು ಮಹಿಳೆಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

  MORE
  GALLERIES

 • 77

  Rain Alert: ಬೆಂಗಳೂರಿನಲ್ಲಿ ಇನ್ನೊಂದು ವಾರ ಮಳೆ; ಹವಾಮಾನ ಇಲಾಖೆಯಿಂದ ಅಲರ್ಟ್

  ಮೇ 11ರವರೆಗೂ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆ ಇರಲಿದೆ. ಆದರೆ ನಗರಕ್ಕೆ ಯಾವುದೇ ಅಲರ್ಟ್ ಘೋಷಿಸಿಲ್ಲ. ಆಫೀಸ್ ನಿಂದ ಮನೆ ಹೋಗೋ ಟೈಮಿಗೆ ಮಳೆ ಬರೋರು ಸವಾರರಿಗೆ ತುಸು ಕಷ್ಟ ತರುತ್ತಿದೆ. ನಿಮ್ಮ ಆರೋಗ್ಯದ ಬಗ್ಗೆಯೂ ಇರಲಿ ಕಾಳಜಿ. (ವರದಿ: ಶರಣು ಹಂಪಿ, ನ್ಯೂಸ್​18, ಬೆಂಗಳೂರು)

  MORE
  GALLERIES