ಹೌದು, ಈ ಕುರಿತು ಅಧಿಕೃತವಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಬೃಹತ್ ಬೆಂಗಳೂರು ಹೋಟೆಲುಗಳ ಸಂಘ (ರಿ.) , ನಮ್ಮ ರೈತರು ಉತ್ಪಾದಿಸುವ ಕರ್ನಾಟಕದ ಹೆಮ್ಮೆಯ ನಂದಿನಿ ಹಾಲನ್ನು ನಾವೆಲ್ಲರೂ ಸಂಪೂರ್ಣವಾಗಿ ಪ್ರೋತ್ಸಾಹಿಸಬೇಕು. ನಮ್ಮ ನಗರದಲ್ಲಿ ಶುಚಿ ರುಚಿಯಾದ ಕಾಫಿ ತಿಂಡಿಗಳು ಸಿಗಲು ಬೆನ್ನೆಲುಬಾಗಿ ನಿಂತಿದೆ ನಂದಿನಿ ಹಾಲು. ಹೋಟೆಲು ಮಾಲೀಕರು ಪ್ರಮುಖವಾಗಿ ನಂದಿನಿ ಉತ್ಪನ್ನಗಳನ್ನು ಉಪಯೋಗಿಸುತ್ತಾರೆ ಹಾಗೂ ಬಹಳಷ್ಟು ಹೆಮ್ಮೆಯಿಂದ ಇದನ್ನು ಪ್ರೋತ್ಸಾಹಿಸುತ್ತೇವೆ.
ಕೆಎಂಎಫ್ ಸಂಸ್ಥೆ ಲಾಭದಾಯಕ ಸಂಸ್ಥೆ ಆಗಿತ್ತು. ಇತ್ತೀಚೆಗೆ ಕೆಎಂಎಫ್ ಉತ್ಪನ್ನಗಳ ಕೊರತೆ ಹೆಚ್ಚಾಗಿದೆ. ಹಾಲು, ಪೇಡ, ತುಪ್ಪ ಉತ್ಪಾದನೆ ಪ್ರಮಾಣ ಕುಸಿಯುತ್ತಿದೆ. ನಂದಿನಿ ಉತ್ಪನ್ನಗಳ ಜಾಗದಲ್ಲಿ ಅಮುಲ್ ಮಾರಾಟ ಆಗುತ್ತಿದೆ. ಕೆಎಂಎಫ್ ಹೆಸರಲ್ಲಿ ಅಮುಲ್ ಉತ್ಪನ್ನ ಹೇರಿಕೆ ಆಗುತ್ತಿದೆ. ಕೆಲವೇ ದಿನಗಳಲ್ಲಿ ನಂದಿನಿ ಬ್ರ್ಯಾಂಡ್ಗಳನ್ನ ಅಮುಲ್ಗೆ ಮಾರುವ ಹುನ್ನಾರ ಅಂತ ಕಾಂಗ್ರೆಸ್ ನೇರ ಆರೋಪ ಮಾಡಿತ್ತು.