ಪೊಂಗಲ್ ಎಂದರೆ, ಹೆಸರು ಬೇಳೆ, ಬೆಲ್ಲ, ಹಾಲು, ಅಕ್ಕಿಯಿಂದ ತಯಾರಿಸುವ ಸಿಹಿ ತಿನಿಸಿನ ಅರ್ಥ. ಇಡೀ ರಾಜ್ಯವೇ ಹಬ್ಬದ ಸಂಭ್ರಮವನ್ನು ಒಟ್ಟಿಗೆ ಆಚರಿಸುವುದು ಇದರ ವಿಶೇಷ. ತಮಿಳಿರಲ್ಲಿ ಯಾವುದೇ ಭೇದ ಭಾವ ಇಲ್ಲದೇ ಒಟ್ಟಿಗೆ ಬಯಲಿನಲ್ಲಿ ಸಿಹಿ ತಯಾರಿಸುವ ಮೂಲಕ ಈ ಹಬ್ಬ ಆಚರಣೆ ಮಾಡಲಾಗುವುದು. ಇದೇ ಕಾರಣದಿಂದ ಇದನ್ನು ತಮಿಳ್ ತಾಯಿ ಪೊಂಗಲ್ ಅಂದತೆ ತಮಿಳರ ಹಬ್ಬ ಎಂದು ಆಚರಿಸಲಾಗುವುದು. ತಮಿಳು ಕ್ಯಾಲೆಂಡರ್ ತಾಯಿ ತಿಂಗಳಿನ ಮೊದಲ ದಿನ ಈ ಹಬ್ಬ ಆಚರಿಸಲಾಗುವುದು.\ ರೈತರಿಗೆ ಕೃತಜ್ಞತೆ ಅರ್ಪಿಸುವ ಸಲುವಾಗಿ ಈ ಹಬ್ಬ ಆಚರಿಸಲಾಗುವುದು. ಈ ವೇಳೆ ರೈತರು ಬೆಳೆ ಬೆಳೆಯಲು ಸಹಕರಿಸಿದ ಪ್ರಕೃತಿ, ಸೂರ್ಯ ಹಾಗೂ ಜಾನುವಾರುಗಳಿಗೆ ಧನ್ಯವಾದ ಅರ್ಪಿಸಲಾಗುವುದು. ಕೃಷಿಯೇತರ ಕುಟುಂಬಗಳು ರೈತರಿಗೆ ಧನ್ಯವಾದ ಅರ್ಪಿಸಿ ಈ ಹಬ್ಬ ಆಚರಿಸುತ್ತಾರೆ. ಸಾಮಾಜಿಕ ಒಗ್ಗಟ್ಟು ಪ್ರದರ್ಶನ ಈ ಹಬ್ಬದ ಮತ್ತೊಂದು ವಿಶೇಷ. ಒಟ್ಟಿಗೆ ಪೊಂಗಲ್ ತಯಾರಿಸಲು ಮುಂದಾಗುವ ಮಹಿಳೆಯರು ಜನಪದ ಹಾಡುಗಳನ್ನು ಹಾಡಿ ಸಿಹಿ ತಯಾರಿಸುತ್ತಾರೆ.