Karnataka Weather Report: ಉಣ್ಣೆ ಬಟ್ಟೆ ಜೊತೆ ಛತ್ರಿ ಕಡ್ಡಾಯ; ರಾಜ್ಯದ ಈ ಭಾಗಕ್ಕೆ ಮಳೆಯ ಅಲರ್ಟ್
Karnataka Rain Alert: ರಾಜ್ಯದಲ್ಲಿ ಡಿಸೆಂಬರ್ 5ರಿಂದ ಹವಾಮಾನದಲ್ಲಿ ಬದಲಾವಣೆ ಆಗಲಿದೆ. ಮುಂದಿನ ಎರಡು ದಿನ ಒಣಹವೆ ಮುಂದುವರಿಯಲ್ಲಿದ್ದು, ಡಿಸೆಂಬರ್ 5ರ ನಂತರ ಮೋಡ ಕವಿದ ವಾತಾವರಣ (Cloudy Weather) ಇರಲಿದ್ದು, ಹಗುರವಾದ ಮಳೆಯಾಗಲಿದೆ.
ಡಿಸೆಂಬರ್ 4ರಂದು ಅಂಡಮಾನ್ ದಕ್ಷಿಣ ಸಮುದ್ರ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ನಿರ್ಮಾಣವಾಗಲಿದೆ. ಡಿಸೆಂಬರ್ 5ರಂದು ಅದೇ ಪ್ರದೇಶದ ಸಮುದ್ರಮಟ್ಟದಲ್ಲಿ ವಾಯಭಾರ ಕುಸಿತದ ವಾತಾವರಣ ನಿರ್ಮಾಣವಾಗಲಿದೆ. (ಸಾಂದರ್ಭಿಕ ಚಿತ್ರ)
2/ 10
ಈ ವಾಯುಭಾರ ಕುಸಿತ ಮೂಲಸ್ಥಳದಿಂದ ಪಶ್ಚಿಮದತ್ತ ಸಾಗಿ ಮತ್ತಷ್ಟು ತೀವ್ರಗೊಳ್ಳಲಿದೆ. ಡಿಸೆಂಬರ್ 8ರ ವೇಳೆಗೆ ಆಂಧ್ರ ಪ್ರದೇಶ ಮತ್ತು ತಮಿಳುನಾಡು ಕರಾವಳಿಗೆ ಅಪ್ಪಳಿಸಲಿದೆ. (ಸಾಂದರ್ಭಿಕ ಚಿತ್ರ)
3/ 10
ಈ ಹವಾಮಾನ ವೈಪರೀತ್ಯಗಳ ಪ್ರಭಾವದಿಂದ ಕರ್ನಾಟಕದಲ್ಲಿ ಮಳೆಯಾಗುವ ನಿರೀಕ್ಷೆಗಳಿವೆ. (ಸಾಂದರ್ಭಿಕ ಚಿತ್ರ)
4/ 10
ಮೋಡಗಳು ನೆರೆಯ ರಾಜ್ಯದ ಕರಾವಳಿ ಭಾಗಕ್ಕೆ ಅಪ್ಪಳಿಸುವ ಕಾರಣ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಭಾಗದಲ್ಲಿ ಹಗುರ ಮಳೆಯಾಗಲಿದೆ. (ಸಾಂದರ್ಭಿಕ ಚಿತ್ರ)
5/ 10
ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಗಳಿವೆ. (ಸಾಂದರ್ಭಿಕ ಚಿತ್ರ)
6/ 10
ಉತ್ತರ ಒಳನಾಡು ಭಾಗದಲ್ಲಿ ಒಣಹವೆ ಇರಲಿದ್ದು, ಕನಿಷ್ಠ 15 ರಿಂದ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಬೆಳಗಿನ ಜಾವ ದಟ್ಟವಾದ ಮಂಜು ಆವರಿಸಲಿದೆ. (ಸಾಂದರ್ಭಿಕ ಚಿತ್ರ)
7/ 10
ಗುರುವಾರ ಬಾಗಲಕೋಟೆ ಮತ್ತು ವಿಜಯಪುರದಲ್ಲಿ ಕನಿಷ್ಠ 8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಮುಂದಿನ ಮೂರು ದಿನ ಚಳಿಯ ಪ್ರಮಾಣ ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. (ಸಾಂದರ್ಭಿಕ ಚಿತ್ರ)
8/ 10
ಜಿಲ್ಲಾವಾರು ಹವಾಮಾನ ವರದಿ: (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ಗಳಲ್ಲಿ)