ಇನ್ನು ನ.8ರಂದು ನಡೆಯಲಿರುವ ಪುನೀತ್ ರಾಜ್ ಕುಮಾರ್ ೧೧ ನೇ ದಿನದ ಕಾರ್ಯಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ನಾಳೆ ಮಧ್ಯಾಹ್ನ 12 ಗಂಟೆಗೆ ಸದಾಶಿವನಗರದ ನಿವಾಸದಿಂದ ತೆರಳಲಿರುವ 4 ಬಸ್ ಗಳ ಮೂಲಕ ಕಂಠೀರವ ಸ್ಟುಡಿಯೋಗೆ ಅಪ್ಪು ಕುಟುಂಬಸ್ಥರು ತೆರಳಲಿದ್ದಾರೆ. ಅಪ್ಪುಗೆ ಇಷ್ಟವಾದ ಊಟವನ್ನ ಸಾಮಾಧಿ ಮುಂದೆ ಇಟ್ಟು ಪೂಜೆ ಮಾಡಲಿದ್ದಾರೆ. ಕುಟುಂಬಸ್ಥರು ಮತ್ತು ಆಪ್ತ ಬಳಗಕ್ಕೆ ಮಾತ್ರ ಕಂಠೀರವದಲ್ಲಿ ಪೂಜೆಗೆ ಅವಕಾಶ ನೀಡಲಾಗಿದೆ. ಮಂಗಳವಾರ PRK ಸಿಬ್ಬಂದಿ, ಅಭಿಮಾನಿಗಳು ಮತ್ತು ಸ್ನೆಹಿತರಿಗರಿಗಾಗಿ ಪ್ಯಾಲೇಸ್ ಗ್ರೌಂಡ್ ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.