ಮುಂದಿನ ವರ್ಷ ಅಂದ್ರೆ 2023ರ ಫೆಬ್ರವರಿ 13ರಿಂದ 17ರವರೆಗೆ ಪ್ರತಿಷ್ಠಿತ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯಲಿದೆ. ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಪ್ರತಿಷ್ಠಿತ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯಲಿದೆ. ಕೇಂದ್ರ ರಕ್ಷಣಾ ಇಲಾಖೆಯು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸುವ ಅತಿದೊಡ್ಡ ಪ್ರದರ್ಶನ ಇದಾಗಿದ್ದು, ಏರ್ ಶೋ ಪ್ರದರ್ಶನ ಸಿಲಿಕಾನ್ ಸಿಟಿ ಬೆಂಗಳೂರಿನ ಹೆಗ್ಗಳಿಕೆಲ್ಲೊಂದಾಗಿದೆ. ಕೇಂದ್ರ ರಕ್ಷಣಾ ಸಚಿವಾಲಯದ ಭಾಗವಾದ ‘ಡಿಫೆನ್ಸ್ ಎಕ್ಸಿಬಿಷನ್ ಆರ್ಗನೈಜೇಷನ್ ವತಿಯಿಂದ ಈ ವೈಮಾನಿಕ ಪ್ರದರ್ಶನ ನಡೆಯಲಿದೆ. ಇದರಲ್ಲಿ ಭಾರತೀಯ ಏರೋಸ್ಪೇಸ್ ಉದ್ಯಮದ ಹಲವಾರು ತಯಾರಕರು ಮತ್ತು ಸೇವಾ ಪೂರೈಕೆದಾರರು ಭವಿಷ್ಯದ ಗ್ರಾಹಕರನ್ನು ಭೇಟಿ ಮಾಡುತ್ತಾರೆ. ಏರೋಸ್ಪೇಸ್ ಉದ್ಯಮ ಬೆಳೆವಣಿಗೆಗೆ ಈ ಏರೋ ಇಂಡಿಯಾ ಪ್ರದರ್ಶನ ಉತ್ತಮ ವೇದಿಕೆಯೂ ಆಗಿದೆ. ಯುದ್ಧ ವಿಮಾನಗಳ ಮೈನವಿರೇಳಿಸುವ ಹಲವು ವೈಶಿಷ್ಟ್ಯಗಳೊಂದಿಗೆ ಏರ್ ಶೋ ನಡೆಯಲಿದ್ದು, ಬಾನಂಗಳಲ್ಲಿ ಬಣ್ಣದ ಹಕ್ಕಿಗಳ ಚಿತ್ತಾರ, ಅದ್ಬುತ ದೃಶ್ಯದ ವೈಮಾನಿಕ ಪ್ರದರ್ಶನ ನೋಡಬಹುದಾಗಿದೆ.