Aero India 2023: ಹೆಚ್‌ಎಎಲ್ ವಿಮಾನದಲ್ಲಿ ಮತ್ತೆ ಬಂದ ಹನುಮ! 2ನೇ ದಿನ ಚಿತ್ರ ತೆರವು, ಕೊನೆ ದಿನ ಪ್ರತ್ಯಕ್ಷ!

ಹೆಚ್‌ಎಲ್‌ಎಫ್‌ಟಿ ಶಕ್ತಿ ಎಷ್ಟು ಎಂದು ತೋರಿಸಲು ಭಜರಂಗಬಲಿ ಚಿತ್ರ ಹಾಕಲಾಗಿತ್ತು. ಆದರೆ, ಅದು ಅಪ್ರಸ್ತುತ ಎಂಬ ಕಾರಣಕ್ಕೆ ತೆರವು ಮಾಡಲಾಗಿದೆ ಹೆಚ್​ಎಎಲ್​ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದರು.

First published:

  • 17

    Aero India 2023: ಹೆಚ್‌ಎಎಲ್ ವಿಮಾನದಲ್ಲಿ ಮತ್ತೆ ಬಂದ ಹನುಮ! 2ನೇ ದಿನ ಚಿತ್ರ ತೆರವು, ಕೊನೆ ದಿನ ಪ್ರತ್ಯಕ್ಷ!

    ಬೆಂಗಳೂರು: ಏರೋ ಇಂಡಿಯಾ 2023ರ (Aero India)ವಿಮಾನಗಳ ಪ್ರದರ್ಶನದಲ್ಲಿ ಹೆಚ್ಎಎಲ್ ನಿರ್ಮಾಣದ ಮಾರುತ್ ಹೆಸರಿನ HLFT-42 ಯುದ್ದ ವಿಮಾನದ ಮೇಲೆ ಹನುಮಂತನ (Hanuman) ಚಿತ್ರವನ್ನು ಹಾಕಿದ್ದಕ್ಕೆ ಪರ-ವಿರೋಧ ಚರ್ಚೆಗಳು ಶುರುವಾಗಿತ್ತು. ಇದರ ಬೆನ್ನಲ್ಲೇ ಹೆಚ್​ಎಎಲ್​ ಅಧಿಕಾರಿಗಳು ಹನುಮಾನ್​ ಚಿತ್ರವನ್ನು ವಿಮಾನದಿಂದ ತೆಗೆದು ಹಾಕಿದ್ದರು. ಆದರೆ ಏರೋ ಇಂಡಿಯಾ ಏರ್​ ಶೋ ಕೊನೆಯ ದಿನವಾದ ಇಂದು ವಿಮಾನದ ಮೇಲೆ ಮತ್ತೆ ಹನುಮಾನ್​ ಚಿತ್ರ ಪ್ರತ್ಯಕ್ಷವಾಗಿದೆ.

    MORE
    GALLERIES

  • 27

    Aero India 2023: ಹೆಚ್‌ಎಎಲ್ ವಿಮಾನದಲ್ಲಿ ಮತ್ತೆ ಬಂದ ಹನುಮ! 2ನೇ ದಿನ ಚಿತ್ರ ತೆರವು, ಕೊನೆ ದಿನ ಪ್ರತ್ಯಕ್ಷ!

    ಹೆಚ್ಎಎಲ್ ಸಂಸ್ಥೆಯಿಂದ ತಯಾರಿಸಲ್ಪಟ್ಟ HLFT-42 ವಿಮಾನದ ಮೇಲೆ ಭಜರಂಗಬಲಿ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸ್ವತಃ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇದರ ಬಗ್ಗೆ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದರ ಬೆನ್ನಲ್ಲೇ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು.

    MORE
    GALLERIES

  • 37

    Aero India 2023: ಹೆಚ್‌ಎಎಲ್ ವಿಮಾನದಲ್ಲಿ ಮತ್ತೆ ಬಂದ ಹನುಮ! 2ನೇ ದಿನ ಚಿತ್ರ ತೆರವು, ಕೊನೆ ದಿನ ಪ್ರತ್ಯಕ್ಷ!

    ಈ ವೇಳೆ ಸ್ಪಷ್ಟನೆ ನೀಡಿದ್ದ ಹೆಚ್‌ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ.ಬಿ.ಅನಂತಕೃಷ್ಣನ್, " ಆಂತರಿಕ ಚರ್ಚೆಯ ನಂತರ ಹನುಮಂತನ ಚಿತ್ರವನ್ನು ಈಗ ಹಾಕುವುದು ಸೂಕ್ತವಲ್ಲ ಎಂಬ ಕಾರಣದಿಂದ ಅದನ್ನು ತೆಗೆದುಹಾಕಲು ನಿರ್ಧರಿಸಿದ್ದೇವೆ " ಎಂದಿದ್ದರು. ಅಲ್ಲದೆ ಮೊದಲು ವಿಮಾನದ ಶಕ್ತಿಯನ್ನು ಪ್ರದರ್ಶಿಸಲು ಹನುಮಂತನ ಚಿತ್ರವನ್ನು ಬಳಸಲು ನಿರ್ಧರಿಸಲಾಗಿತ್ತು ಎಂದ ಮಾಹಿತಿ ಲಭ್ಯವಾಗಿತ್ತು.

    MORE
    GALLERIES

  • 47

    Aero India 2023: ಹೆಚ್‌ಎಎಲ್ ವಿಮಾನದಲ್ಲಿ ಮತ್ತೆ ಬಂದ ಹನುಮ! 2ನೇ ದಿನ ಚಿತ್ರ ತೆರವು, ಕೊನೆ ದಿನ ಪ್ರತ್ಯಕ್ಷ!

    ಯುದ್ದ ವಿಮಾನದ ಮೇಲೆ ಹನುಮನ ಫೋಟೋ ತೆರವು ಮಾಡಲು ಹೆಚ್‌ಎಎಲ್‌ಗೆ ಯಾರೂ ಒತ್ತಡ ಹೇರಿಲ್ಲ. ಸಂಸ್ಥೆ ಸ್ವಇಚ್ಛೆಯಿಂದಲೇ ಫೋಟೋವನ್ನು ತೆಗೆದು ಹಾಕಿದೆ. ಹೆಚ್‌ಎಲ್‌ಎಫ್‌ಟಿ ಶಕ್ತಿ ಎಷ್ಟು ಎಂದು ತೋರಿಸಲು ಅದನ್ನು ಹಾಕಲಾಗಿತ್ತು. ಆದರೆ, ಅದು ಅಪ್ರಸ್ತುತ ಎಂಬ ಕಾರಣಕ್ಕೆ ತೆರವು ಮಾಡಲಾಗಿದೆ ಹೆಚ್​ಎಎಲ್​ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದರು.

    MORE
    GALLERIES

  • 57

    Aero India 2023: ಹೆಚ್‌ಎಎಲ್ ವಿಮಾನದಲ್ಲಿ ಮತ್ತೆ ಬಂದ ಹನುಮ! 2ನೇ ದಿನ ಚಿತ್ರ ತೆರವು, ಕೊನೆ ದಿನ ಪ್ರತ್ಯಕ್ಷ!

    ಮಾರುತ್​ HLFT-42 ವಿಮಾನದಲ್ಲಿ ಭಜರಂಗಬಲಿ ಚಿತ್ರ ಎಲ್ಲರ ಗಮನ ಸೆಳೆದಿತ್ತು. ಈ ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿತ್ತು. ಹೆಚ್​ಎಎಲ್ ನಿರ್ಮಾಣದ ಈ ವಿಮಾನದ ಮೇಲೆ ಹನಮನ ಚಿತ್ರದ ಜೊತೆಗೆ ದಿ ಸ್ಟ್ರಾಮ್​ ಈಸ್ ಕಮಿಂಗ್ (ಚಂಡಮಾರುತ ಬರುತ್ತಿದೆ) ಎಂದು ಅಡಿಬರಹವನ್ನು ನೀಡಲಾಗಿತ್ತು. ಈ ವಿಮಾನ ಅತ್ಯಾಧುನಿಕ ಯುದ್ದ ವಿಮಾನವಾಗಿದೆ.

    MORE
    GALLERIES

  • 67

    Aero India 2023: ಹೆಚ್‌ಎಎಲ್ ವಿಮಾನದಲ್ಲಿ ಮತ್ತೆ ಬಂದ ಹನುಮ! 2ನೇ ದಿನ ಚಿತ್ರ ತೆರವು, ಕೊನೆ ದಿನ ಪ್ರತ್ಯಕ್ಷ!

    ಇನ್ನು, 5 ದಿನಗಳ ಕಾಲ ನಡೆದ ಏರ್ ಶೋ ಇಂದು ತೆರೆ ಬಿದ್ದಿದೆ. ಕಳೆದ 4 ದಿನಗಳಿಂದ ಕೂಡ ಏರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ನಿನ್ನೆ ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಮಂದಿ ಏರ್ ಶೋಗೆ ಆಗಮಿಸಿದ್ದರು. ಇಂದು ಕೊನೆ ದಿನವಾದ ಕಾರಣ ಸುಮಾರು ಒಂದೂವರೆ ಲಕ್ಷ ಜನ ಏರ್ ಶೋಗೆ ಸಾಕ್ಷಿಯಾಗಿದ್ದಾರೆ. ಇಂದು ಏರ್ ಶೋದಲ್ಲಿ ಸೂರ್ಯಕಿರಣ, ಸಾರಂಗ, ತೇಜಸ್, ಸುಕೋಯ್, ರಫೇಲ್, LUT ಹೆಲಿಕಾಪ್ಟರ್, ಡಕೋಟಾ ಸೇರಿದಂತೆ ಹಲವು ವಿಮಾನಗಳು ಶಕ್ತಿ ಪ್ರದರ್ಶನ ತೋರಿದ್ದವು.

    MORE
    GALLERIES

  • 77

    Aero India 2023: ಹೆಚ್‌ಎಎಲ್ ವಿಮಾನದಲ್ಲಿ ಮತ್ತೆ ಬಂದ ಹನುಮ! 2ನೇ ದಿನ ಚಿತ್ರ ತೆರವು, ಕೊನೆ ದಿನ ಪ್ರತ್ಯಕ್ಷ!

    ಏರ್ ಶೋಗೆ ಮಕ್ಕಳೊಂದಿಗೆ ಆಗಮಿಸಿದ್ದ ಹಲವು ಪೋಷಕರು ಬಾನಂಗಳದಲ್ಲಿ ಚಿತ್ತರ ಮೂಡಿಸುತ್ತಿದ್ದ ಲೋಹದ ಹಕ್ಕಿಗಳ ಪ್ರದರ್ಶನಕ್ಕೆ ಮನಸೋತಿದ್ದರು. ರಾಜ್ಯ ಮಾತ್ರವಲ್ಲದೆ ದೇಶ-ವಿದೇಶಗಳಿಂದಲೂ ಕೂಡ ಸಾವಿರಾರರು ಜನ ಬೆಂಗಳೂರಿಗೆ ಆಗಮಿಸಿ ಏರ್​ ಶೋದಲ್ಲಿ ಭಾಗವಹಿಸಿದ್ದರು. ಅಲ್ಲದೆ ತಮ್ಮ ಮೊಬೈಲ್ ಕೈಲಿ ಹಿಡಿದು ಲೋಹದ ಹಕ್ಕಿಗಳ ಪ್ರದರ್ಶನವನ್ನು ಸೆರೆ ಹಿಡಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಾಣುತ್ತಿತ್ತು.

    MORE
    GALLERIES