Aero India 2019: ಏರ್​ ಶೋನಲ್ಲಿ ಡ್ರೋಣ್​ ಒಲಂಪಿಕ್ಸ್ ಆಯೋಜನೆ

ಈ ಬಾರಿಯ ಏರ್ ಶೋ-2019ರಲ್ಲಿ ಡ್ರೋಣ್ ಸ್ಪರ್ಧೆ ಪ್ರಧಾನ ಆಕರ್ಷಣೆಯಾಗಿದೆ. ಇಂದು ಅಂತಿಮ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ 38 ಲಕ್ಷ ರೂ. ಬಹುಮಾನವಿದೆ. ಸೋಮವಾರ ಮತ್ತು ಮಂಗಳವಾರ ಡ್ರೋಣ್​ ಸ್ಪರ್ಧೆ ನಡೆದಿತ್ತು. ಒಟ್ಟು 128 ಸ್ಪರ್ಧಿಗಳು ಡ್ರೋಣ್​​ ಒಲಂಪಿಕ್ ನಲ್ಲಿ ಭಾಗವಹಿಸಿದ್ದರು. ಇಸ್ರೇಲ್, ಉಕ್ರೇನ್ ಮತ್ತಿತರ ದೇಶಗಳ ಸ್ಪರ್ಧಿಗಳು ಸಹ ಭಾಗಿಯಾಗಿದ್ದರು.  ಮೂರು ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಈವರೆಗೆ ಡಿಆರ್ ಡಿಒ ಮಾತ್ರ ಡ್ರೋಣ್​​ ತಯಾರಿಸುವ ಕಾರ್ಯದಲ್ಲಿ ನಿರತವಾಗಿತ್ತು. ಆದರೆ ಖಾಸಗಿ ರಂಗದಲ್ಲೂ ವಿಭಿನ್ನ ರೀತಿಯ ಡ್ರೋಣ್​​ ರಚನೆಯನ್ನು ಪ್ರೋತ್ಸಾಹಿಸಲು ಇದೇ ಮೊದಲ ಬಾರಿಗೆ ಏರ್ ಶೋ-2019ರಲ್ಲಿ ಡ್ರೋಣ್​ ಒಲಂಪಿಕ್ಸ್ ಏರ್ಪಡಿಸಿದೆ. 

  • News18
  • |
First published: