Siddaganga Mutt: ಸಿದ್ದಗಂಗಾ ಮಠದಲ್ಲಿ ನಿಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡಬೇಕೇ? ಹೀಗೆ ಮಾಡಿ
ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು ಆರಂಭಿಸಿದ ಸಿದ್ದಗಂಗಾ ಶಿಕ್ಷಣ ಸಂಸ್ಥೆಯಿಂದ ಶಿಕ್ಷಣ ಪಡೆದು ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಹೊರ ಬರುತ್ತಾರೆ. ಇಂತಹ ಜ್ಞಾನ ಭಂಡಾರದಲ್ಲಿ ತಮ್ಮ ಮಕ್ಕಳು ಶಿಕ್ಷಣ ಪಡೆಯಲಿ ಎಂಬುವುದು ಪೋಷಕರ ಕನಸು ಆಗಿರುತ್ತದೆ.
ಇಲ್ಲಿ ಎಲ್ಲ ವರ್ಗದ ಮಕ್ಕಳು ಶಿಕ್ಷಣ ಪಡೆಯುತ್ತಾರೆ. ಇಲ್ಲಿಗೆ ಶಿಕ್ಷಣ ಅರಸಿ ಬರುವ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ, ಆಹಾರ ಮತ್ತು ವಸತಿ ವ್ಯವಸ್ಥೆಯನ್ನು ಮಠದಿಂದಲೇ ಒದಗಿಸಲಾಗುತ್ತದೆ.
2/ 8
ರಾಜ್ಯದ ಮೂಲೆ ಮೂಲೆಗಳಿಂದ ಇಲ್ಲಿಗೆ ಮಕ್ಕಳು ಶಿಕ್ಷಣ ಪಡೆಯಲು ಬರುತ್ತಾರೆ. ಬಡತನದಲ್ಲಿರುವ ಕುಟುಂಬಗಳು ತಮ್ಮ ಮಕ್ಕಳನ್ನು ತಂದು ಇಲ್ಲಿಯ ಶಾಲೆಗೆ ಸೇರಿಸುತ್ತಾರೆ.
3/ 8
ಇದೀಗ ಶ್ರೀ ಸಿದ್ದಗಂಗಾ ಮಠದಲ್ಲಿ ಉಚಿತ ವಿದ್ಯಾಭ್ಯಾಸಕ್ಕೆ ಸೇರುವ ವಿದ್ಯಾರ್ಥಿಗಳಿಗೆ ಅರ್ಜಿಯನ್ನು ಏಪ್ರಿಲ್ 15 ರಿಂದ ವಿತರಿಸಲಾಗುತ್ತಿದೆ.
4/ 8
ಅಂಚೆ ಮೂಲಕ ಮಠಕ್ಕೆ ಸೇರುವ ಅರ್ಜಿ ಫಾರ್ಮ್ ಮತ್ತು ಶಾಲೆಯಿಂದ ವರ್ಗಾವಣೆ ಪತ್ರ ತರಿಸಿಕೊಳ್ಳುವ ಸೌಲಭ್ಯವನ್ನು ಕಲ್ಪಿಸಲಾಗಿದೆ.
5/ 8
ಮಠಕ್ಕೆ ದಾಖಲಾತಿ ಪಡೆಯುವ ಪ್ರತಿ ಅರ್ಜಿ ಮಾದರಿಗೆ 20 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ.
6/ 8
ಮಠದಲ್ಲಿ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳು ಶ್ರೀ, ಸಿದ್ದಲಿಂಗೇಶ್ವರ ಅನಾಥಾಲಯ, ಶ್ರೀ ಸಿದ್ದಗಂಗಾ ಮಠ , ತುಮಕೂರು ಜಿಲ್ಲೆ 572104 ವಿಳಾಸಕ್ಕೆ ಎಂಒ ಮಾಡಬೇಕು.
7/ 8
ಇದಾದ ನಂತರ ಮಠದಿಂದ ನಿಮ್ಮ ವಿಳಾಸಕ್ಕೆ ಅರ್ಜಿಯೊಂದು ತಲುಪುತ್ತದೆ.
8/ 8
ಅರ್ಜಿ ತಲುಪಿದ ಕೂಡಲೇ ಪೋಷಕರು ತಮ್ಮ ಮಕ್ಕಳೊಂದಿಗೆ ಕೇಳಲಾದ ಎಲ್ಲ ದಾಖಲತಿಗಳನ್ನು ಸಲ್ಲಿಸಿ ಮಠಕ್ಕೆ ಸೇರಿಸಬಹುದು.