Sunetra Pandit: ಶೂಟಿಂಗ್ ಮುಗಿಸಿ ಮನೆಗೆ ತೆರಳ್ತಿದ್ದ ನಟಿ ಸುನೇತ್ರಾ ಪಂಡಿತ್ ಸ್ಕೂಟಿ ಅಪಘಾತ
ಶೂಟಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ ಕಿರುತೆರೆ ನಟಿ ಸುನೇತ್ರಾ ಪಂಡಿತ್ ಅವರ ದ್ವಿಚಕ್ರ ವಾಹನ ಅಪಘಾತಕ್ಕೊಳಗಾಗಿದೆ. ಸದ್ಯ ಸುನೇತ್ರಾ ಅವರು ಬಸವನಗುಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾತ್ರಿ ಸುಮಾರು 12 ಗಂಟೆಗೆ ಅಪಘಾತ ನಡೆದಿದೆ, ಸ್ಥಳೀಯರು ಕೂಡಲೇ ಅವರನ್ನು ಆಸ್ಪ್ರತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಸವನಗುಡಿಯ ಎನ್ ಆರ್ ಕಾಲೋನಿ ಮುಖ್ಯ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.
2/ 8
ಸುನೇತ್ರಾ ಅವರು ಶೂಟಿಂಗ್ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗ್ತಿದ್ದರು. ಈ ವೇಳೆ ಅವೈಜ್ಞಾನಿಕ ಹಂಪ್ ಕಾಣದೆ ಸ್ಕೂಟಿ ಜಂಪ್ ಮಾಡಿಸಿದ ಪರಿಣಾಮ ಅಪಘಾತ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
3/ 8
ಹಂಪ್ ಜಂಪ್ ಮಾಡಿ ಸೈಡ್ ನಲ್ಲಿದ್ದ ಮಣ್ಣು ಮುಚ್ಚಿದ ರಸ್ತೆಗುಂಡಿಗೆ ಸುನೇತ್ರಾ ಬಿದ್ದಿದ್ದಾರೆ. ಹೆಲ್ಮೆಟ್ ಹಾಕಿದ್ದ ಪರಿಣಾಮ ತಲೆಗೆ ಸ್ವಲ್ಪ ಪೆಟ್ಡಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ.
4/ 8
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸ್ಥಳೀಯ ನಿವಾಸಿ ಶಶಿಕುಮಾರ್, ಜೋರಾದ ಸದ್ದು ಕೇಳಿದ್ದರಿಂದ ಮಲಗಿದ್ದ ನಾನು ಹೊರಗೆ ಓಡಿ ಬಂದೆ. ಸ್ಕೂಟಿ ಹಂಪ್ ಜಂಪ್ ಮಾಡಿದಾಗ ಸ್ಕೂಟಿಯ ಗಾಲಿ ಮುಂದಿದ್ದ ಹಳ್ಳದಲ್ಲಿ ಸಿಲುಕಿದ್ದರಿಂದ ಅಪಘಾತ ಆಗಿದೆ.
5/ 8
ತಲೆಯ ಭಾಗಕ್ಕೆ ಗಂಭೀರ ಗಾಯವಾಗಿ ರಕ್ತ ಬರುತ್ತಿತ್ತು. ಕೂಡಲೇ ಅವರನ್ನ ಕೆಲವರು ಆಟೋ ಮೂಲಕ ಆಸ್ಪತ್ರೆಗೆ ಶಿಫ್ಟ್ ಮಾಡಲಾಯ್ತು. ಆನಂತರ ಬಂದ ಜನರು ಅವರನ್ನು ನಟಿ ಸುನೇತ್ರಾ ಎಂದು ಗುರುತಿಸಿದರು ಅಂತ ಶಶಿಕುಮಾರ್ ಹೇಳುತ್ತಾರೆ.
6/ 8
ಸುನೇತ್ರಾ ಅವರು ಕಿರುತೆರೆ ಲೋಕದ ಚಿರಪರಿಚಿತ ಕಲಾವಿದರು. ಹಾಸ್ಯ, ಗಂಭೀರ ಎಲ್ಲ ಪಾತ್ರಗಳಿಗೂ ಸುನೇತ್ರಾ ಸೈ ಅನ್ನಿಸಿಕೊಂಡಿದ್ದಾರೆ. ಇದರ ಜೊತೆಗೆ ಸುನೇತ್ರ ಓರ್ವ ಡಬ್ಬಿಂಗ್ ಆರ್ಟಿಸ್ಟ್ ಸಹ ಆಗಿದ್ದಾರೆ.
7/ 8
ಸುನೇತ್ರಾ ಅವರ ಪತಿ ರಮೇಶ್ ಪಂಡಿತ್ ಸಹ ಕಲಾವಿದರಾಗಿದ್ದು, ಚಂದನವನದಲ್ಲಿ ಖಳನಟರಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ರಮೇಶ್ ಪಂಡಿತ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
8/ 8
ಸುನೇತ್ರಾ ಅವರು ಹಲವು ಪಾತ್ರಗಳಿಗೆ ಬಣ್ಣ ಹಚ್ಚಿದ್ದರೂ, ಸಿಲ್ಲಿ ಲಲ್ಲಿ ಧಾರಾವಾಹಿಯ ವಿಶಾಲು ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ರಂಗಭೂಮಿ ಕಲಾವಿದೆಯಾಗಿರುವ ಸುನೇತ್ರ ಅವರ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.